ನರೈನ್ ಬೌಲಿಂಗ್ನಲ್ಲಿ ಧೋನಿ ಇಂದು ಬೌಂಡರಿ ಬಾರಿಸುವರೆ?
ಇಂಡಿಯನ್ ಪ್ರಿಮೀಯರ್ ಲೀಗ್ 21ನೇ ಪಂದ್ಯ ಅಬು ಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಚೆನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಸತತ ಮೂರು ಸೋಲುಗಳನ್ನು ಅನುಭವಿಸಿ ಕಂಗೆಟ್ಟಿದ್ದ ಚೆನೈ, ಕಳೆದ ವಾರ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿ ಕಳೆದುಕೊಂಡಿದ್ದ ವಿಶ್ವಾಸವನ್ನು ವಾಪಸ್ಸು ಪಡೆದಿದೆ. ಮತ್ತೊಂದೆಡೆ ಆಡಿರುವ 5 ಪಂದ್ಯಗಳಲ್ಲಿ ಮೂರನ್ನು ಸೋತು ಎರಡರಲ್ಲಿ ಗೆದ್ದಿರುವ […]
ಇಂಡಿಯನ್ ಪ್ರಿಮೀಯರ್ ಲೀಗ್ 21ನೇ ಪಂದ್ಯ ಅಬು ಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಚೆನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಸತತ ಮೂರು ಸೋಲುಗಳನ್ನು ಅನುಭವಿಸಿ ಕಂಗೆಟ್ಟಿದ್ದ ಚೆನೈ, ಕಳೆದ ವಾರ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿ ಕಳೆದುಕೊಂಡಿದ್ದ ವಿಶ್ವಾಸವನ್ನು ವಾಪಸ್ಸು ಪಡೆದಿದೆ. ಮತ್ತೊಂದೆಡೆ ಆಡಿರುವ 5 ಪಂದ್ಯಗಳಲ್ಲಿ ಮೂರನ್ನು ಸೋತು ಎರಡರಲ್ಲಿ ಗೆದ್ದಿರುವ ಕೊಲ್ಕತಾ ನೈಟ್ ರೈಡರ್ಸ್ ಇವತ್ತಿನ ಪಂದ್ಯವನ್ನು ಗೆಲ್ಲಲು ತೀವ್ರವಾಗಿ ಶ್ರಮಿಸಬೇಕಿದೆ.
[yop_poll id=”7″] ಕೊಲ್ಕತಾ ಟೀಮಿನ ನಾಯಕ ದಿನೇಶ್ ಕಾರ್ತೀಕ್ ಅವರ ಬ್ಯಾಟಿಂಗ್ ಕ್ರಮಾಂಕ ಬಗ್ಗೆಯಿರುವ ಗೊಂದಲ ಮುಂದುವರಿದಿದೆ. ಮಾಜಿ ಆಟಗಾರರು ಕಾರ್ತೀಕ್ ಆರಂಭ ಆಟಗಾರನಾಗಿ ಕಣಕ್ಕಿಳಿಯುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಸತತ ವೈಫಲ್ಯಗಳ ಹೊರತಾಗಿಯೂ ಸುನಿಲ್ ನರೈನ್ ಅವರನ್ನೇ ಓಪನರ್ ಆಗಿ ಆಡಿಸಲು ನಿರ್ಧರಿಸಿದಂತಿದೆ. ನರೈನ್ ವೈಫಲ್ಯ ಮತ್ತೊಬ್ಬ ಓಪನರ್ ಶುಭ್ಮನ್ ಗಿಲ್ ಮೇಲೆ ಒತ್ತಡ ಹೇರುತ್ತಿದೆ. ಗಿಲ್, ಪ್ರಸಕ್ತ ಸೀಸನ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ನರೈನ್ ಶ್ರೇಷ್ಠ ಸ್ಪಿನ್ ಬೌಲರ್ ಅನ್ನುವುದು ಸರ್ವವಿದಿತ. ಅವರ ಬ್ಯಾಟ್ನಿಂದ ರನ್ ಬಂದರೆ ಅದನ್ನು ಬೋನಸ್ ಅಂತ ಪರಿಗಣಿಸಬಹುದೆ ಹೊರತು ನೆಚ್ಚಿಕೊಳ್ಳಬಹುದಾದ ಬ್ಯಾಟ್ಸ್ಮನ್ ಅವರು ಖಂಡಿತ ಅಲ್ಲ.
ಮೂರನೇ ಕ್ರಮಾಂಕಲ್ಲಿ ಆಡುತ್ತಿರುವ ನಿತಿಶ್ ರಾಣಾ ಉತ್ತಮ ಸ್ಟಾರ್ಟ್ಗಳನ್ನು ಬಿಗ್ ಇನ್ನಿಂಗ್ಸ್ಗಳಲ್ಲಿ ಪರಿವರ್ತಿಸುವಲ್ಲಿ ಫೇಲಾಗುತ್ತಿದ್ದಾರೆ. ಕೊಲ್ಕತಾ ಟೀಮು ಅವರಿಂದ ಅದನ್ನು ನಿರೀಕ್ಷಿಸುತ್ತಿದೆ. ಇಂಗ್ಲೆಂಡ್ಗೆ ಕಳೆದ ವರ್ಷ ವಿಶ್ವಕಪ್ ಗೆದ್ದುಕೊಟ್ಟ ಅಯಾನ್ ಮೊರ್ಗನ್ ಈ ಸೀಸನ್ನಲ್ಲಿ ಇನ್ನೂ ಅರ್ಧಶತಕ ಬಾರಿಸಿಲ್ಲವಾದರೂ, ಉಪಯುಕ್ತ ಮತ್ತು ಮ್ಯಾಚ್ ವಿನ್ನಿಂಗ್ ಕಾಂಟ್ರಿಬ್ಯೂಷನ್ಗಳನ್ನು ನೀಡುತ್ತಿದ್ದಾರೆ.
ಕೊಲ್ಕತಾದ ಬಿಗ್ ಹಿಟ್ಟರ್ ಆಂದ್ರೆ ರಸ್ಸೆಲ್ ಕೊಲ್ಲಿ ರಾಷ್ಟ್ರಗಳ ಮೈದಾನಗಳಲ್ಲಿ ಇನ್ನೂ ಕಿಚ್ಚು ಹೊತ್ತಿಸಿಲ್ಲ. ಅವರು ಫಾರ್ಮ್ನಲ್ಲಿಲ್ಲ ಅಂತೇನೂ ಇಲ್ಲ, ಆದರೆ ಸಿಕ್ಕಿರುವ ಅವಕಾಶಗಳು ಕಡಿಮೆ ಮತ್ತು ಸಿಕ್ಕ ಅವಕಾಶಗಳಲ್ಲಿ ಅವರು ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ.
ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕೆಕೆಆರ್ ವೇಗದ ದಾಳಿ ಪರಿಣಾಮಕಾರಿಯಾಗಿದೆ. ಯುವ ಬೌಲರ್ಗಳಾದ ಶಿವಮ್ ಮಾವಿ ಮತ್ತು ಕಮ್ಲೇಶ್ ನಾಗರ್ಕೋಟಿ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ನರೈನ್ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.
ಮೂರು ಬಾರಿ ಐಪಿಎಲ್ ಚಾಂಪಿಯನ್ಶಿಪ್ ಗೆದ್ದಿರುವ ಚೆನೈ ಈ ಸಲದ ಅಭಿಯಾನವನ್ನು ಕಳೆದ ಬಾರಿಯ ಮತ್ತು ಇದುವರೆಗೆ ಅತ್ಯಧಿಕ (4) ಬಾರಿ ಟ್ರೋಫಿ ಗೆದ್ದಿರುವ ಮುಂಬೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರಂಭಿಸಿದರೂ ನಂತರ ಸೋಲಿನ ಸರಪಳಿಗೆ ಸಿಕ್ಕಿಕೊಂಡು ಒದ್ದಾಡಿತು. ಆದರೆ, ಪಂಜಾಬ್ ವಿರುದ್ಧ ದಾಖಲಿಸಿದ ಭರ್ಜರಿ ಗೆಲುವು ಟೀಮಿನ ಉತ್ಸಾಹವನ್ನು ಹೆಚ್ಚಿಸಿದೆ.
ಫಫ್ ಡು ಪ್ಲೆಸ್ಸಿ ಸದರಿ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರ ಬ್ಯಾಟ್ನಿಂದ ಮೂರು ಅರ್ಧ ಶತಕಗಳು ಸಿಡಿದಿರುವುದು ಇದಕ್ಕೆ ಸಾಕ್ಷಿ. ಆದರೆ, ಅವರ ಜೊತೆಗಾರ ಶೇನ್ ವಾಟ್ಸನ್ ಮಾತ್ರ ವೈಫಲ್ಯಗಳ ಸುಳಿಗೆ ಸಿಕ್ಕಿದ್ದರು. ಅವರನ್ನು ಆಡುವ ಎಲೆವೆನ್ನಿಂದ ಕೈಬಿಡುವ ಮಾತು ಸಹ ತೇಲಿಬಂದಿತ್ತು. ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿಗೆ ವ್ಯಾಟೊ ಮೇಲೆ ಅತೀವ ವಿಶ್ವಾಸ. ಹಾಗಾಗೇ, ಅವರನ್ನು ಮುಂದುವರಿಸಿ, ಪಂಜಾಬ್ ವಿರುದ್ಧ ಆಡಿಸಿದರು. 53 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿ ತನ್ನ ಜೊತೆಗಾರ ಡು ಪ್ಲೆಸ್ಸಿಯೊಂದಿಗೆ ಮುರಿಯದ ಮೊದಲ ವಿಕೆಟ್ಗೆ 182 ರನ್ ಸೇರಿಸಿ ಟೀಮಿಗೆ ಸುಲಭ ಜಯ ದೊರಕಿಸಿದರಲ್ಲದೆ ಧೋನಿಯ ವಿಶ್ವಾಸವನ್ನು ಉಳಿಸಿಕೊಂಡರು. ಇವರಿಬ್ಬರಿಂದ ಮತ್ತೊಂದು ಉತ್ತಮ ಜೊತೆಯಾಟವನ್ನು ಚೆನೈ ಇಂದು ನಿರೀಕ್ಷಿಸುತ್ತಿದೆ.
ಐಪಿಎಲ್ 13 ನೇ ಆವೃತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಅಮೋಘ ಆರ್ಧ ಶತಕ ಬಾರಿಸಿ ಚೆನೈ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಂಬಟಿ ರಾಯುಡು, ಮುಂದಿನ ಎರಡು ಪಂದ್ಯಗಳನ್ನು ಗಾಯಗೊಂಡ ಕಾರಣ ತಪ್ಪಿಸಿಕೊಂಡರು. ನಂತರ ಆಡಿದ ಪಂದ್ಯಗಳಲ್ಲಿ ರಾಯುಡು ಮುಂಬೈ ವಿರುದ್ಧ ತೋರಿದ ಸ್ಪರ್ಶವನ್ನು ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ.
ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ರನ್ನು ಯಾಕೆ ಆಡುವ ಎಲೆವೆನ್ನಲ್ಲಿ ಮುಂದುವರಿಸಲಾಗುತ್ತಿದೆ ಅಂತ ಸಿಎಸ್ಕೆ ಅಭಿಮಾನಿಗಳಲ್ಲಿ ಗೊಂದಲ ಹುಟ್ಟಿದೆ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಸಹ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ. ಚೆನೈ ತಂಡಕ್ಕೆ ಸುರೇಶ್ ರೈನಾ ಅವರ ಕೊರತೆ ನಿಸ್ಸಂದೇಹವಾಗಿ ಕಾಡುತ್ತಿದೆ, ಅದಕ್ಕೆ ಪುಟವಿಟ್ಟಂತೆ ಧೋನಿಯ ಬ್ಯಾಟಿಂಗ್ ವೈಫಲ್ಯಗಳು.
ಇಂದಿನ ಪಂದ್ಯದಲ್ಲಿ ಧೋನಿ ಮತ್ತು ನರೈನ್ ನಡುವಿನ ವೈಯಕ್ತಿಕ ಸೆಣಸಾಟ ಕುತೂಹಲ ಕೆರಳಿಸಲಿದೆ. ನಿಮಗೆ ಇದನ್ನು ಅರಿತು ಆಶ್ಚರ್ಯವಾಗಬಹುದು. ಐಪಿಎಲ್ನಲ್ಲಿ ಧೋನಿ ಇದುವರೆಗೆ ನರೈನ್ ಬೌಲಿಂಗ್ನಲ್ಲಿ ಒಂದು ಬೌಂಡರಿ ಕೂಡ ಬಾರಿಸಿಲ್ಲ! ಹೌದು, ಇದು ಸತ್ಯ. ಅವರಿಬ್ಬರು 12 ಸಲ ಪರಸ್ಪರ ಎದುರಾಗಿದ್ದು, ನರೈನ್ ಅವರ 59 ಎಸೆತಗಳನ್ನು ಎದುರಿಸಿರುವ ಧೋನಿ ಬೌಂಡರಿರಹಿತ ಕೇವಲ 29 ರನ್ ಗಳಿಸಿದ್ದಾರೆ. ಇಂದು ಈ ಸಮೀಕರಣವನ್ನು ಧೋನಿ ಬದಲಿಸುವರೆ ಎನ್ನುವುದು ಕುತೂಹಲಕಾರಿ ಅಂಶ.
ಚೆನೈ ಟೀಮಿನಲ್ಲಿ ಮೂವರು ಅತ್ಯುತ್ತಮ ಆಲ್ರೌಂಡರ್ಗಳಿದ್ದಾರೆ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ ಮತ್ತು ಸ್ಯಾಮ್ ಕರನ್. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್, ಶಾರ್ದಲ್ ಠಾಕುರ್ ಮತ್ತು ಪಿಯುಷ್ ಚಾವ್ಲಾ ಇದ್ದಾರೆ.
Published On - 5:12 pm, Wed, 7 October 20