AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಿಂಪಿಕ್ಸ್‌ ತಯಾರಿಗೆ ಈ ಊಟ ಸಾಕಾಗುವುದಿಲ್ಲ; ಜೈಲಿನಲ್ಲಿ ವಿಶೇಷ ಬೇಡಿಕೆಯಿಟ್ಟ ಕುಸ್ತಿಪಟು ಸುಶೀಲ್ ಕುಮಾರ್

ಸಾಮಾನ್ಯವಾಗಿ ಜೈಲಿನಲ್ಲಿ ಎಲ್ಲಾ ಅಪರಾದಿಗಳಿಗೂ ಆಹಾರವಾಗಿ ಐದು ರೊಟ್ಟಿಗಳು, ತರಕಾರಿ, ದಾಲ್ ಮತ್ತು ಅನ್ನ ನೀಡುತ್ತಾರೆ, ಇದನ್ನು ಕೈದಿಗಳು ದಿನಕ್ಕೆ ಎರಡು ಬಾರಿ ಸೇವಿಸುತ್ತಾರೆ.

ಒಲಿಂಪಿಕ್ಸ್‌ ತಯಾರಿಗೆ ಈ ಊಟ ಸಾಕಾಗುವುದಿಲ್ಲ; ಜೈಲಿನಲ್ಲಿ ವಿಶೇಷ ಬೇಡಿಕೆಯಿಟ್ಟ ಕುಸ್ತಿಪಟು ಸುಶೀಲ್ ಕುಮಾರ್
ಕುಸ್ತಿಪಟು ಸುಶೀಲ್ ಕುಮಾರ್
ಪೃಥ್ವಿಶಂಕರ
|

Updated on: Jun 09, 2021 | 3:36 PM

Share

ಸಹ ಕುಸ್ತಿಪಟುವಿನ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕುಸ್ತಿಪಟು ಸುಶೀಲ್ ಕುಮಾರ್ ಅವರು ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವುದರಿಂದ ಪ್ರೋಟೀನ್ ಪೂರಕ, ವ್ಯಾಯಾಮ ಬ್ಯಾಂಡ್ ಮತ್ತು ವಿಶೇಷ ಆಹಾರ ನೀಡಬೇಕೆಂದು ನ್ಯಾಯಲದಲ್ಲಿ ಮೊರೆ ಇಟ್ಟಿದ್ದಾರೆ. ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಸುಶೀಲ್ ಕುಮಾರ್ ಅವರು ತಮ್ಮ ಮನವಿಗಳೊಂದಿಗೆ ದೆಹಲಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಚಾಂಪಿಯನ್ ಕುಸ್ತಿಪಟು ಸುನೀಲ್ ಅವರನ್ನು ದೆಹಲಿ ಪೊಲೀಸರು ಮೇ 23 ರಂದು ಬಂಧಿಸಿದ್ದರು. ಸುಶೀಲ್ ಕುಮಾರ್ ಮತ್ತು ಅವರ ಸಹಚರರ ಮಾರಾಣಾಂತಿಕ ಹಲ್ಲೆಯಿಂದಾಗಿ, ಧಂಕರ್ ಮೇ ಮೊದಲ ವಾರದಲ್ಲಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಹಲ್ಲೆಯ ವಿಡಿಯೋ ಕ್ಲಿಪ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಇದರಲ್ಲಿ ಸುಶೀಲ್ ಕುಮಾರ್ ಮತ್ತು ಅವರ ಸಹಚರರು ದಂಕರ್​ ಅವರನ್ನು ಹೊಡೆಯುತ್ತಿರುವುದು ಕಂಡುಬಂದಿದೆ.

6,000 ಮೌಲ್ಯದ ವಸ್ತುಗಳನ್ನು ಖರೀದಿಸಬಹುದು ಸಾಮಾನ್ಯವಾಗಿ ಜೈಲಿನಲ್ಲಿ ಎಲ್ಲಾ ಅಪರಾದಿಗಳಿಗೂ ಆಹಾರವಾಗಿ ಐದು ರೊಟ್ಟಿಗಳು, ತರಕಾರಿ, ದಾಲ್ ಮತ್ತು ಅನ್ನ ನೀಡುತ್ತಾರೆ, ಇದನ್ನು ಕೈದಿಗಳು ದಿನಕ್ಕೆ ಎರಡು ಬಾರಿ ಸೇವಿಸುತ್ತಾರೆ. ಜೊತೆಗೆ ಖೈದಿಗಳು ಜೈಲು ಕ್ಯಾಂಟೀನ್‌ನಿಂದ ತಿಂಗಳಿಗೆ ರೂ 6,000 ಮೌಲ್ಯದ ವಸ್ತುಗಳನ್ನು ಖರೀದಿಸಬಹುದು. ಆದರೆ, ಸ್ನಾಯು ಮೈಕಟ್ಟುಗೆ ಹೆಸರುವಾಸಿಯಾದ ಸುಶೀಲ್ ಕುಮಾರ್ ಅವರಿಗೆ ಜೈಲಿನ ಆಹಾರವು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ವಿಶೇಷ ಆಹಾರದಡಿಯಲ್ಲಿ, ಸುಶೀಲ್ ಕುಮಾರ್ ಒಮೆಗಾ 3 ಕ್ಯಾಪ್ಸುಲ್ಗಳು, ಪೂರ್ವ-ತಾಲೀಮು ಪೂರಕಗಳು ಮತ್ತು ಮಲ್ಟಿವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಾರೆ.

ನ್ಯಾಯಾಲಯ ವಿಚಾರಣೆ ಸುಶೀಲ್ ಕುಮಾರ್ ಅವರು ತಮ್ಮ ಬೇಡಿಕೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಅರ್ಜಿಯನ್ನು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಸುಶೀಲ್ ಕುಮಾರ್ ಅವರನ್ನು ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ, ಅವರು ಯಾರನ್ನೂ ಭೇಟಿಯಾಗಲು ಅನುಮತಿ ನೀಡಿಲ್ಲ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ