Jasmine Lamboria: ಭಾರತೀಯ ಸೇನೆಗೆ ಸೇರಿದ 20 ವರ್ಷದ ಮೊದಲ ಮಹಿಳಾ ಬಾಕ್ಸರ್
2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿರುವ 20 ವರ್ಷದ ಮಹಿಳಾ ಬಾಕ್ಸರ್ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
ದೆಹಲಿ: 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಹಿಳಾ ಬಾಕ್ಸರ್ ಜಾಸ್ಮಿನ್(Jasmine Lamboria) ಲಂಬೋರಿಯಾ ಅವರು ಭಾರತೀಯ ಸೇನೆಯ (Indian Army )ಹವಾಲ್ದಾರ್ ಆಗಿ ನೇಮಕಗೊಂಡಿದ್ದಾರೆ.
ಈಗಾಗಲೇ ಅಮಿತ್ ಪಂಗಲ್ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಅವರಂತಹ ಚಾಂಪಿಯನ್ ಬಾಕ್ಸರ್‌ಗಳು ಭಾರತೀಯ ಸೇನೆಯಲ್ಲಿದ್ದಾರೆ. ಇದೀಗ ಈ ಮೂಲಕ 20 ವರ್ಷದ ಜಾಸ್ಮಿನ್ ಲಂಬೋರಿಯಾ ಅವರು ಭಾರತೀಯ ಸೇನಾ ಮಿಷನ್ ಒಲಿಂಪಿಕ್ಸ್‌ಗೆ ಸೇರಿದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಾಂಪಿಯನ್ಗಳಾದ ನೀರಜ್ ಚೋಪ್ರಾ ಮತ್ತು ಅವಿನಾಶ್ ಸೇಬಲ್ ಅವರಂತೆ ಸೇನೆಯ ಮಿಷನ್ ಒಲಿಂಪಿಕ್ಸ್ ಅಡಿಯಲ್ಲಿ ಜಾಸ್ಮಿನ್ ಲಂಬೋರಿಯಾ ಶೀಘ್ರದಲ್ಲೇ ತರಬೇತಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇದನ್ನೂ ಓದಿ: ಫೈಜಾಬಾದ್ ಕಂಟೋನ್ಮೆಂಟ್ ಹೆಸರು ಬದಲಾಯಿಸುವ ಪ್ರಸ್ತಾಪಕ್ಕೆ ರಾಜನಾಥ್ ಸಿಂಗ್ ಒಪ್ಪಿಗೆ
ಮಹಿಳಾ ಕುಸ್ತಿ ಪಟು ಜಾಸ್ಮಿನ್ ಲಂಬೋರಿಯಾ ಅವರು 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದಾರೆ. ಅಲ್ಲದೇ ಲಂಬೋರಿಯಾ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2020, ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್, ಬಾಕ್ಸಾಮ್ ಇಂಟರ್ನ್ಯಾಷನಲ್ ಟೂರ್ನಮೆಂಟ್, ಎಲೈಟ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಭಾರತೀಯ ಸೈನ್ಯದ ದಕ್ಷಿಣ ಕಮಾಂಡ್ ವಿಭಾಗದಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016ರಲ್ಲಿ ಭಾರತೀಯ ಸೈನ್ಯದ ನೈಬ್ ಸುಬೇದಾರ್ ಶ್ರೇಯಾಂಕದ ವಿಭಾಗದಲ್ಲಿ ಹಿರಿಯ ನಿಯುಕ್ತಾಧಿಕಾರಿಯಾಗಿ ನೇಮಕವಾಗಿದ್ದರು.
ಇನ್ನಷ್ಟು ಸುದ್ದಿಗಾಗಿ ಕ್ಲಿಕ್ ಮಾಡಿ