Jasprit Bumrah Marriage: ಗೋವಾದಲ್ಲಿ ಈ ವಾರ ಜಸ್ಪ್ರೀತ್​ ಬೂಮ್ರಾ ಮದುವೆ? ವಧು ಯಾರು? ಇಲ್ಲಿದೆ ಉತ್ತರ

| Updated By: Digi Tech Desk

Updated on: Mar 06, 2021 | 1:01 PM

ಕೊರೊನಾ ಇರುವ ಕಾರಣಕ್ಕೆ ಗೋವಾದಲ್ಲಿ ಜಸ್ಪ್ರೀತ್​ ಬೂಮ್ರಾ ಮದುವೆ ತುಂಬಾನೇ ಸರಳವಾಗಿ ನಡೆಯಲಿದೆ. ಕ್ರಿಕೆಟ್​ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳುವುದು ಅನುಮಾನ.

Jasprit Bumrah Marriage: ಗೋವಾದಲ್ಲಿ ಈ ವಾರ ಜಸ್ಪ್ರೀತ್​ ಬೂಮ್ರಾ ಮದುವೆ? ವಧು ಯಾರು? ಇಲ್ಲಿದೆ ಉತ್ತರ
Jasprit bumra
Follow us on

ಕ್ರಿಕೆಟ್​ ವೇಗಿ ಜಸ್​​ಪ್ರೀತ್ ಬೂಮ್ರಾ ವೈಯಕ್ತಿಕ ಕಾರಣ ನೀಡಿ ಭಾರತ vs ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ ಜಸ್​ಪ್ರೀತ್​​ ಬೂಮ್ರಾ ಈ ವಾರ ಗೋವಾದಲ್ಲಿ ವಿವಾಹ ಆಗಲಿದ್ದಾರಂತೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಷ್ಟೇ ಅಲ್ಲ, ಆ ಹುಡುಗಿ ಯಾರು ಎನ್ನುವ ಬಗ್ಗೆಯೂ ಚರ್ಚೆ ಜೋರಾಗಿದೆ. ಹಾಗಾದರೆ, ಜಸ್​ಪ್ರೀತ್​ ಬೂಮ್ರಾ ಯಾರನ್ನು ವರಿಸುತ್ತಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇಂದು ಅಹಮದಾಬಾದ್‌ನಲ್ಲಿ ಆರಂಭವಾಗಿದೆ. ಇದರ ನಂತರ, ಮಾರ್ಚ್ 12 ರಿಂದ ಉಭಯ ತಂಡಗಳ ನಡುವೆ ಐದು ಟಿ 20 ಪಂದ್ಯಗಳು ನಡೆಯಲಿವೆ. ಇದರ ನಂತರ ಮಾರ್ಚ್ 23 ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇವುಗಳಿಂದ ಬೂಮ್ರಾ ಹೊರಗುಳಿಯಲಿದ್ದಾರಂತೆ. ಇದಕ್ಕೆ ಕಾರಣ ಮದುವೆ ಎನ್ನಲಾಗುತ್ತಿದೆ.

ಮದುವೆ ಕಾರ್ಯಕ್ರಮದಲ್ಲಿ ಬೂಮ್ರಾ ಆಪ್ತರಷ್ಟೇ ಭಾಗಿಯಾಗಲಿದ್ದಾರಂತೆ. ಕೊರೊನಾ ಇರುವ ಕಾರಣಕ್ಕೆ ತುಂಬಾನೇ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಕ್ರಿಕೆಟ್​ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳುವುದು ಅನುಮಾನ. ಮದುವೆ ನಂತರ ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಶನ್​ ಏರ್ಪಡಿಸಲು ಬೂಮ್ರಾ ನಿರ್ಧರಿಸಿದ್ದಾರೆ.

ಹುಡುಗಿ ಯಾರು?:
ಮೂಲಗಳ ಪ್ರಕಾರ ಬೂಮ್ರಾ ಮದುವೆ ಆಗುತ್ತಿರುವುದು ಖಾಸಗಿ ಸ್ಪೋರ್ಟ್ಸ್​​ ವಾಹಿನಿಯ ಆ್ಯಂಕರ್​ ಸಂಜನಾ ಗಣೇಶನ್​ ಜತೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಆದರೆ, ಈ ಬಗ್ಗೆ ಬೂಮ್ರಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇದನ್ನೂ ಓದಿ: India vs England: ಅಂತಿಮ ಟೆಸ್ಟ್​ನಿಂದ ಹೊರಗುಳಿದ ಬುಮ್ರಾ.. ಟಿ20, ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದು ಡೌಟ್

Published On - 12:00 pm, Thu, 4 March 21