ಹಿಂದಿನ ಓವರ್ನಲ್ಲಿ ಹ್ಯಾಟ್ರಿಕ್ ತೆಗೆದಿದ್ದ ಬೌಲರ್ಗೆ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ ಕೀರನ್ ಪೊಲಾರ್ಡ್!
West Indies vs Sri Lanka: ಶ್ರೀಲಂಕಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್ಗೆ ಇಳಿದಿತ್ತು. 20 ಓವರ್ಗಳಲ್ಲಿ 131ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.
ಜೀವನವೇ ಹಾಗೆ. ಸುಖ-ದುಖಃ ಯಾವಾಗ ಬರುತ್ತದೆಯೋ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲೊಬ್ಬ ಬೌಲರ್, ಕ್ರಿಕೆಟ್ ಆಟದಲ್ಲಿ ಅತ್ಯಪರೂಪ ಎನಿಸುವಂತೆ ಒಂದು ಓವರ್ನಲ್ಲಿ ಹ್ಯಾಟ್ರಿಕ್ ತೆಗೆದು ಸಾಧನೆ ಮಾಡಿದ್ದಾರೆ. ಆದರೆ, ಅದರ ಸಂಭ್ರಮದ ಕ್ಷಣಗಳು ಮರು ಓವರ್ನಲ್ಲಿಯೇ ಇಲ್ಲವಾಗಿದೆ. ಏಕೆಂದರೆ, ಅವರ ಮುಂದಿನ ಓವರ್ನಲ್ಲೇ ಬ್ಯಾಟ್ಸ್ಮನ್ ಆರು ಬಾಲ್ಗೆ ಆರು ಸಿಕ್ಸ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ಸೀಮಿತ ಓವರ್ಗಳ ನಾಯಕ ಕೀರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದಾರೆ. ಆರು ಬಾಲ್ಗೆ ಆರು ಸಿಕ್ಸ್ ಹೊಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನ ದಡ ಹತ್ತಿಸಿದ್ದಾರೆ. ಹ್ಯಾಟ್ರಿಕ್ ತೆಗೆದ ಬಾಲರ್ಗೆ ಕೀರನ್ ಸಿಕ್ಸ್ ಬಾರಿಸಿದ್ದು ವಿಶೇಷ. ಶ್ರೀಲಂಕಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್ಗೆ ಇಳಿದಿತ್ತು. 20 ಓವರ್ಗಳಲ್ಲಿ 131ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆತ್ಮ ವಿಶ್ವಾಸದೊಂದಿಗೆ ವೆಸ್ಟ್ ಇಂಡೀಸ್ ಆಟಗಾರರು ಬ್ಯಾಟಿಂಗ್ಗೆ ಇಳಿದಿದ್ದರು. ವೆಸ್ಟ್ ಇಂಡೀಸ್ ತಂಡ 52 ರನ್ಗೆ ಒಂದು ವಿಕೆಟ್ ಕಳೆದುಕೊಂಡು ಆಡುತ್ತಿರುವಾಗ ಅಖಿಲ ಧನಂಜಯ್ ಬೌಲಿಂಗ್ಗೆ ಇಳಿದಿದ್ದರು. ತಮ್ಮ ಸ್ಪಿನ್ ಮಾಂತ್ರಿಕತೆಯಿಂದ ಹ್ಯಾಟ್ರಿಕ್ ತೆಗೆದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆಗ ಬ್ಯಾಟಿಂಗ್ಗೆ ಇಳಿದಿದ್ದರು ಪೊಲಾರ್ಡ್.
Take a bow Skipper!? ? ? ? ? ? The 1st West Indian to hit 6️⃣ sixes in an over in a T20I!? #WIvSL #MenInMaroon
Live Scorecard⬇️ https://t.co/MBDOV534qQ pic.twitter.com/etkxX7l7bq
— Windies Cricket (@windiescricket) March 4, 2021
ಒಂದು ಓವರ್ ಬಳಿಕೆ ಮತ್ತೆ ಅಖಿಲ ಧನಂಜಯ್ ಬೌಲಿಂಗ್ಗೆ ಇಳಿದರು. ಕಳೆದ ಓವರ್ನಲ್ಲಿದ್ದ ವಿಶ್ವಾಸ ಈ ಬಾರಿ ದ್ವಿಗುಣಗೊಂಡಿತ್ತು. ಆದರೆ, ಪೊಲಾರ್ಡ್ ಆಟದ ಗತಿಯನ್ನೇ ಬದಲಾಯಿಸಿಬಿಟ್ಟರು. ಅಖಿಲ ಬೌಲಿಂಗ್ನಲ್ಲಿ ಆರು ಬಾಲ್ಗೆ ಆರು ಸಿಕ್ಸ್ ಬಾರಿಸಿ ಅವರು ಭೇಷ್ ಎನಿಸಿಕೊಂಡರು.
ವೆಸ್ಟ್ ಇಂಡೀಸ್ ತಂಡ ಈ ದೈತ್ಯ ದೇಹಿ ಸಿಕ್ಸರ್ಗಳನ್ನು ಬಾರಿಸುವುದರೊಂದಿಗೆ ಇನ್ನಿಂಗ್ಸ್ ಆರಂಭಿಸಬೇಕು ಎಂಬಂತೆ ಸ್ಕ್ರೀಸ್ಗೆ ಬಂದು ಬ್ಯಾಟ್ ಬೀಸಿದ್ದಾರೆ. ಮೊದಲ ನಾಲ್ಕು ಸಿಕ್ಸರ್ಗಳನ್ನು ತುಸು ಶ್ರಮ ಹಾಕಿ ಬಾರಿಸಿದ್ದ ಪೊಲ್ಲಾರ್ಡ್, ಬಾರಿಸಿರುವ 5 ನೆಯ ಸಿಕ್ಸರ್ ನೋಡಿದರೆ ಅಬ್ಬಬ್ಬಾ ಅಂತೀರಿ! ಪೊಲಾಡ್ಸ್ ಬ್ಯಾಟ್ನಿಂದ ಆಕಾಶಕ್ಕೆ ಚಿಮ್ಮಿದ ಬಾಲ್ ನೋಡುವುದೇ ನಿಜಕ್ಕೂ ಸೊಗಸು, ಸೊಗಸು. ಮುಂದೆ ಕೊನೆಯ ಸಿಕ್ಸರ್ ಅನ್ನು ಈ ಪೊಲಾರ್ಡ್ ಹೇಗೆ ಎತ್ತಿದ್ದಾರೆ ಅಂದ್ರೆ ನಾಲ್ಕೈದು ಸಿಕ್ಸರ್ ಬಾರಿಸಿದ ಬಳಿಕ ಅದು ತನಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಮತ್ತೊಂದು ಸೊಗಸಾದ ಸಿಕ್ಸರ್ ಅನ್ನು ಸ್ಕ್ವೇರ್ ಡ್ರೈವ್ ಮೂಲಕ ಮೈದಾನದಿಂದ ಹೊರಕ್ಕೆ ಎತ್ತಿದ್ದಾರೆ. ಈ ಮಧ್ಯೆ ಆ ಬೌಲರ್ ಮುಖದಲ್ಲಿ ಎಷ್ಟು ಬೇಸರ ಅಸಹಾಯಕತೆ ಮನೆಮಾಡಿತ್ತು ಅಂದ್ರೆ ಮೂರನೆಯ ಸಿಕ್ಸರ್ ಹೊಡೆಸಿಕೊಂಡಾಗಲೇ ಕಸಿವಿಸಿಗೊಂಡಿದ್ದರು. ಮತ್ತೆ ಮತ್ತೆ ಸಿಕ್ಸರ್ ಹೊಡೆಯುವುದನ್ನು ನೋಡಿ ಅಸಹಾಯಕತೆಯಂದ ಕೈಚೆಲ್ಲಿ ನೋಡತೊಡಗಿದ್ದರು. ಅಂತಿಮವಾಗಿ 13.1 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ಗೆಲುವಿನ ದಡ ಸೇರಿತು.
ಇದನ್ನೂ ಓದಿ: ಮ್ಯಾಕ್ಸ್ವೆಲ್ ಅಬ್ಬರಕ್ಕೆ ಗ್ಯಾಲರಿ ಚೇರ್ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್-ಚುಪ್!
Published On - 9:48 am, Thu, 4 March 21