Junior Wrestling World Championships: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಮ್ಮೆ ನಿರಾಸೆ; 1 ಬೆಳ್ಳಿ ಸೇರಿದಂತೆ 3 ಕಂಚು ಗೆದ್ದ ಮಹಿಳಾ ಕುಸ್ತಿಪಟುಗಳು

Junior Wrestling World Championships: ಇಲ್ಲಿಯವರೆಗೆ, ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಒಟ್ಟು ಒಂಬತ್ತು ಪದಕಗಳನ್ನು ಪಡೆದಿದೆ. ಪುರುಷರು ಆರು ಪದಕಗಳನ್ನು ಗೆದ್ದಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಇದುವರೆಗೆ ಭಾರತಕ್ಕೆ ಚಿನ್ನದ ಪದಕ ಸಿಕ್ಕಿಲ್ಲ.

Junior Wrestling World Championships: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಮ್ಮೆ ನಿರಾಸೆ; 1 ಬೆಳ್ಳಿ ಸೇರಿದಂತೆ 3 ಕಂಚು ಗೆದ್ದ ಮಹಿಳಾ ಕುಸ್ತಿಪಟುಗಳು
1 ಬೆಳ್ಳಿ ಸೇರಿದಂತೆ 3 ಕಂಚು ಗೆದ್ದ ಮಹಿಳಾ ಕುಸ್ತಿಪಟುಗಳು
Follow us
TV9 Web
| Updated By: ಪೃಥ್ವಿಶಂಕರ

Updated on: Aug 19, 2021 | 10:47 PM

ಆಗಸ್ಟ್ 19 ರಂದು ನಡೆದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತ ನಂತರ ಬಿಪಾಶಾ (76 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಆದರೆ ಸಂಜು ದೇವಿ (62 ಕೆಜಿ) ಉತ್ತಮ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದರು. ಸಿಮ್ರಾನ್ (50 ಕೆಜಿ) ಮತ್ತು ಸಿತೋ (55 ಕೆಜಿ) ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಪದಕ ಸಂಖ್ಯೆಯನ್ನು ಹೆಚ್ಚಿಸಿದರು. ಇಲ್ಲಿಯವರೆಗೆ, ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಒಟ್ಟು ಒಂಬತ್ತು ಪದಕಗಳನ್ನು ಪಡೆದಿದೆ. ಪುರುಷರು ಆರು ಪದಕಗಳನ್ನು ಗೆದ್ದಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಇದುವರೆಗೆ ಭಾರತಕ್ಕೆ ಚಿನ್ನದ ಪದಕ ಸಿಕ್ಕಿಲ್ಲ. ಫೈನಲ್‌ನಲ್ಲಿ ಭಾರತದ ಇಬ್ಬರು ಕುಸ್ತಿಪಟುಗಳು ಸೋತಿದ್ದಾರೆ. ಈಗ ಸಂಜು ದೇವಿ ಚಿನ್ನದ ಬರವನ್ನು ಕೊನೆಗೊಳಿಸುವ ನಿರೀಕ್ಷೆಯಿದೆ.

ಅರ್ಜು ಗಾಯದಿಂದಾಗಿ 68 ಕೆಜಿ ಕಂಚಿನ ಪದಕದಿಂದ ಹೊರಗುಳಿಯಬೇಕಾಯಿತು. ಭಟೇರಿ 55 ಕೆಜಿ ಫೈನಲ್‌ಗೆ ಮುನ್ನಡೆದರೆ ಸಾನೆ 72 ಕೆಜಿ ಸೆಮಿ ಫೈನಲ್‌ನಲ್ಲಿ ಸೋತ ನಂತರ ಕಂಚಿನ ಪದಕಕ್ಕಾಗಿ ಹೋರಾಡುತ್ತಾರೆ. ತಾಂತ್ರಿಕ ಸಾಮರ್ಥ್ಯದ ಮೇಲೆ ಬಿಪಾಶಾ ಅಮೆರಿಕದ ಕ್ಯಾಲಿ ರೆನಿ ವೆಲ್ಕರ್ ವಿರುದ್ಧ ಸೋತರು. ಸಂಜು ಅವರು ಜರ್ಮನಿಯ ಲೂಸಿಯಾ ಶೆರ್ಲೆ ಅವರನ್ನು 5-2 ಅಂತರದಿಂದ ಸೋಲಿಸಿದರು ಮತ್ತು 0-3 ಡ್ರಾದಿಂದ ಹಿಂತಿರುಗಿ ಕ್ರೊವೇಷ್ಯಾದ ಇವಾ ಗೆರಿಚ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ 4-3ರಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವಳುರು 0-5 ಯಿಂದ ಹಿನ್ನಡೆ ಹೊಂದಿದ್ದರು. ಆದರೆ ನಂತರ ಅಜರ್ಬೈಜಾನ್‌ನ ಬಿರ್ಗುಲ್ ಸೊಲ್ಟನೋವಾ ಅವರನ್ನು 8-5ರಿಂದ ಸೋಲಿಸಿದರು. ಈಗ ಅವರು ಚಿನ್ನದ ಪದಕಕ್ಕಾಗಿ ರಷ್ಯಾದ ಅಲೀನಾ ಕಸಬೀವಾ ಎದುರು ಸೆಣಸಲಿದ್ದಾರೆ.

ಭಾರತದ ನಾಲ್ವರು ಕುಸ್ತಿಪಟುಗಳು ಆರಂಭಿಕ ಸುತ್ತಿನಲ್ಲಿ ಸೋತರು ಭಟೇರಿ ಟುನೀಶಿಯಾದ ಲಜಾಸಿ ಖದೀಜಾ ಮತ್ತು ರೊಮೇನಿಯಾದ ಅಮೀನಾ ರೊಕ್ಸಾನಾ ಕಪೆಜನ್ ಅವರನ್ನು ಸೋಲಿಸಿ ಫೈನಲ್ ತಲುಪಿದರು, ಅಲ್ಲಿ ಅವರು ಮೊಲ್ಡೊವಾದ ಐರಿನಾ ರಿಂಗಾಸಿಯನ್ನು ಎದುರಿಸಲಿದ್ದಾರೆ. ಸಿಮ್ರಾನ್ ಬೆಲಾರಸ್‌ನ ನಟಾಲಿಯಾ ವರಕಿನಾ ಅವರನ್ನು 7-3ರಿಂದ ಸೋಲಿಸಿ ಕಂಚಿನ ಪದಕ ಗೆದ್ದರು.

ಟರ್ಕಿಯ ಮೆಲ್ಡಾ ಡೆರೆಂಕಿ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಗೆಲುವಿನೊಂದಿಗೆ ಸೀತೋ 55 ಕೆಜಿ ಕಂಚಿನ ಪದಕದ ಪ್ಲೇಆಫ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದರು. ಕುಸುಮ್ (59 ಕೆಜಿ) ಅಜರ್ಬೈಜಾನ್ ನ ಅಲೀವಾ ವಿರುದ್ಧ 1-2ರಲ್ಲಿ ಸೋತರು. ಸನೆ ಮೊದಲ ಸುತ್ತಿನಲ್ಲಿ ಬೆಲಾರಸ್‌ನ ಕ್ಸೆನಿಯಾ ಪಟಪೊವಿಚ್ ಅವರನ್ನು 6-2 ಅಂತರದಿಂದ ಸೋಲಿಸಿದರು. ನಂತರ ಮಂಗೋಲಿಯಾದ ಟಿ ಡೋರ್ಜುರೆನ್ ಅವರನ್ನು 7-0 ಅಂತರದಿಂದ ಸೋಲಿಸಿದರು. ಇತರ ಪಂದ್ಯಗಳಲ್ಲಿ, ಪಿಂಕಿ (53 ಕೆಜಿ) ಉತ್ತಮವಾಗಿ ಆರಂಭಿಸಿದರು ಆದರೆ ಟರ್ಕಿಯ ಎಮಿನ್ ಕೆಕ್ಮೆಕ್ ವಿರುದ್ಧ 7-12 ರ ಅಂತರದಲ್ಲಿ ಸೋತರು. ಮಾನ್ಸಿಯನ್ನು 57 ಕೆಜಿ ವಿಭಾಗದಲ್ಲಿ ಟರ್ಕಿಯ ಅಲ್ವಿರಾ ಕಮಲಾಗ್ಲು 9-1ರಿಂದ ಸೋಲಿಸಿದರು. ಮಾನ್ಸಿ ಮೊದಲ ಸುತ್ತಿನಲ್ಲಿ ಅಮೆರಿಕದ ಕ್ಲೇರಿ ಮೇರಿಯನ್ನು 16-4ರಿಂದ ಸೋಲಿಸಿದ್ದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ