ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ಕಲಾ ಪ್ರದರ್ಶನ; ಫೈನಲ್​ಗೆ ಮೆರಗು ತರಲಿರುವ ಮಂಡ್ಯ ಕಲಾವಿದರು

| Updated By: ಪೃಥ್ವಿಶಂಕರ

Updated on: May 29, 2022 | 3:19 PM

IPL 2022 Final: ಇಂದಿನ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಕಲಾ ತಂಡಗಳು ಕರ್ನಾಟಕದ ಜಾನಪದ ಕಲೆಯನ್ನು ಪ್ರದರ್ಶಿಸಲಿದ್ದು, ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಚಿಕ್ಕ ಬೋರಯ್ಯ, ಸಂತೆ ಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡಗಳು ಕಾರ್ಯಕ್ರಮ ನಡೆಸಿಕೊಡಲಿವೆ.

ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ಕಲಾ ಪ್ರದರ್ಶನ; ಫೈನಲ್​ಗೆ ಮೆರಗು ತರಲಿರುವ ಮಂಡ್ಯ ಕಲಾವಿದರು
ಕರ್ನಾಟಕದ ಜಾನಪದ ಕಲಾ ತಂಡ
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಂತಿಮ ಫೈನಲ್ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಮುಖಾಮುಖಿ ಆಗಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪದಾರ್ಪಣೆ ಆವೃತ್ತಿಯಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿರುವ ಗುಜರಾತ್ ತಂಡ ಮೊದಲ ಯತ್ನದಲ್ಲೇ ಚಾಂಪಿಯನ್‌ಪಟ್ಟ ಅಲಂಕರಿಸುವ ಕನಸಿನಲ್ಲಿದೆ. ಇತ್ತ ರಾಜಸ್ಥಾನ್ 2008ರ ಬಳಿಕ ಇದೀಗ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಪ್ರಶಸ್ತಿ ಗೆದ್ದು ದಂತಕಥೆ ಶೇನ್ ವಾರ್ನ್ (Shane Warne) ಅವರಿಗೆ ಅರ್ಪಿಸಲು ಕಾತುರವಾಗಿದೆ. 15ನೇ ಆವೃತ್ತಿಯ ಐಪಿಎಲ್​ಗೆ ಭರ್ಜರಿ ತೆರೆ ಬಿಳಲಿದ್ದು, ಇದನ್ನು ಅವಿಸ್ಮರಣೀಯಗೊಳಿಸಲು ಐಪಿಎಲ್ ಆಡಳಿತ ಮಂಡಳಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಹಲವು ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅದರ ಭಾಗವಾಗಿ ಕರ್ನಾಟಕದ ಜಾನಪದ ಕಲಾ ತಂಡಗಳು ಸಹ ಅಲ್ಲಿ ಬಿಡುಬಿಟ್ಟಿವೆ.

ಇಂದಿನ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಕಲಾ ತಂಡಗಳು ಕರ್ನಾಟಕದ ಜಾನಪದ ಕಲೆಯನ್ನು ಪ್ರದರ್ಶಿಸಲಿದ್ದು, ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಚಿಕ್ಕ ಬೋರಯ್ಯ, ಸಂತೆ ಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡಗಳು ಕಾರ್ಯಕ್ರಮ ನಡೆಸಿಕೊಡಲಿವೆ. ಈ ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಚರ್ಮ ವಾದ್ಯಗಳ ಕಲಾ ಪ್ರದರ್ಶನ ನಡೆಯಲಿದೆ. ಇವರ ಜೊತೆಗೆ ಝಾರ್ಖಂಡ್‌ನ‌ ಪ್ರಸಿದ್ಧ ಛಾವು ನೃತ್ಯವೂ ಅಭಿಮಾನಿಗಳ ಗಮನ ಸೆಳೆಯಲಿದೆ. 10 ಸದಸ್ಯರ ತಂಡ ನೃತ್ಯ ಕಾರ್ಯಕ್ರಮ ನೀಡಲಿದೆ. ಈ ಸಂದರ್ಭ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡ ಉಪಸ್ಥಿತರಿರಲಿದ್ದಾರೆ.

ಕರ್ನಾಟಕ ಜಾನಪದ ಕಲಾ ತಂಡ

ಇದನ್ನೂ ಓದಿ:GT vs RR, IPL 2022 Final Live Updates: ಗುಜರಾತ್- ರಾಜಸ್ಥಾನ ಅಂತಿಮ ಹಣಾಹಣಿ

ಇದನ್ನೂ ಓದಿ
IPL 2022 Final: ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ?
GT vs RR, IPL 2022 Final Highlights: ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್

ಉಭಯ ತಂಡಗಳ ಬಲಾಬಲ ಹೀಗಿದೆ
ಮೊದಲ ಯತ್ನದಲ್ಲೇ ಗುಜರಾತ್ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಂಡದ ಸಂಘಟನೆಯ ಜತೆಗೆ ನಾಯಕತ್ವದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪವರ್‌ಪ್ಲೇ ಹಂತದಲ್ಲಿ ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಮಿಲ್ಲರ್ ಹಾಗೂ ತೇವಾಟಿಯ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಮಿಲ್ಲರ್ 449 ರನ್ ಗಳಿಸಿದ್ದಾರೆ. ಹೀಗಿರುವಾಗ ಫೈನಲ್ ಪಂದ್ಯದಲ್ಲಿ ಚಹಲ್ ಅವರನ್ನು ಎದುರಿಸುವುದು ಯಾವಾಗ, ಆಗ ಇಬ್ಬರ ನಡುವೆ ರೋಚಕ ಕದನ ನಡೆಯಬಹುದು.

ಇತ್ತ ಜೋಸ್ ಬಟ್ಲರ್ ರಾಜಸ್ಥಾನ ತಂಡದ ಬ್ಯಾಟಿಂಗ್ ಶಕ್ತಿ. ಈಗಾಗಲೇ 4 ಶತಕ ಸಿಡಿಸಿರುವ ಇಂಗ್ಲಿಷ್‌ಮ್ಯಾನ್‌ ರಾಜಸ್ಥಾನ್‌ ತಂಡದ ಅಪಾಯಕಾರಿ ಬ್ಯಾಟರ್‌. ಇಡೀ ಬ್ಯಾಟಿಂಗ್‌ ವಿಭಾಗ ಬಟ್ಲರ್‌ ಅವರ ನಿರ್ವಹಣೆಯನ್ನು ಅವಲಂಬಿಸಿದೆ. ಅಕಸ್ಮಾತ್‌ ಬಟ್ಲರ್‌ ಬೇಗ ನಿರ್ಗಮಿಸಿದರೆ ರಾಜಸ್ಥಾನ್‌ ಅರ್ಧ ಸೋತಂತೆ. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಬೇಕಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಒಬೆಡ್ ಮೆಕ್‌ಕಾಯ್, ಆರ್.ಅಶ್ವಿನ್. ಯುಜ್ವೇಂವೇಂದ್ರ ಚಹಲ್ ಒಳಗೊಂಡ ಬೌಲಿಂಗ್ ಪಡೆ ಟೈಟಾನ್ಸ್‌ಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪದಾರ್ಪಣೆ ಮಾಡಿರುವ ಕಾರಣ ಇತ್ತಂಡಗಳ ನಡುವೆ ಕೇವಲ 2 ಮುಖಾಮುಖಿ ಪಂದ್ಯಗಳು ಮಾತ್ರ ನಡೆದಿವೆ. ಲೀಗ್ ಹಂತದಲ್ಲಿ 1 ಪಂದ್ಯದಲ್ಲಿ ಹಾಗೂ ಪ್ಲೇ ಆಫ್ ಸುತ್ತಿನ 1 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪೈಕಿ ಎರಡೂ ಪಂದ್ಯಗಳಲ್ಲಿಯೂ ಸಹ ಹಾರ್ದಿಕ್ ಪಾಂಡ್ಯ ಪಡೆ ರಾಜಸ್ಥಾನಕ್ಕೆ ತಂಡಕ್ಕೆ ಮಣ್ಣುಮುಕ್ಕಿಸಿದೆ. ಹೀಗಾಗಿ ಆರ್​ಆರ್​ಗೆ ಇದು ಸೇಡಿನ ಪಂದ್ಯ ಕೂಡ ಹೌದು.

ಸಂಭಾವ್ಯ ಪ್ಲೇಯಿಂಗ್ XI:

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್.

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.

Published On - 3:19 pm, Sun, 29 May 22