Viral Video: ಕ್ಯಾಚ್ ಹಿಡಿಯಲು ಹೋಗಿ ಮಾನ ಉಳಿಸಿಕೊಂಡ ಫೀಲ್ಡರ್..!
T20 Blast 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಬಿಶೈರ್ ತಂಡವು ಶಾನ್ ಮಸೂದ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.
ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಫನ್ನಿ ಸನ್ನಿವೇಶಗಳು ಬಹುಬೇಗನೆ ವೈರಲ್ ಆಗುತ್ತೆ. ಇದಕ್ಕೆ ಒಂದು ಕಾರಣ ಆ ಕ್ಷಣಗಳನ್ನು ಸ್ಟೇಡಿಯಂನಲ್ಲಿರುವ ಇಡೀ ಪ್ರೇಕ್ಷಕರು ವೀಕ್ಷಿಸಿರುತ್ತಾರೆ. ಇದರ ಜೊತೆ ಕಾಮೆಂಟ್ರಿ ಪ್ಯಾನೆಲ್ನಿಂದ ಕೇಳಿ ಬರುವ ಕಾಮೆಂಟ್ ಈ ವಿಡಿಯೋಗಳನ್ನು ಮತ್ತಷ್ಟು ಜನರಿಗೆ ತಲುವಂತೆ ಮಾಡುತ್ತೆ. ಅಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಟಿ20 ಲೀಗ್ ವಿಟಾಲಿಟಿ ಬ್ಲಾಸ್ಟ್.
ವಿಟಾಲಿಟಿ ಬಾಸ್ಟ್ ಕೌಂಟಿ ತಂಡಗಳು ಭಾಗವಹಿಸುವ ಇಂಗ್ಲೆಂಡ್ನ T20 ಲೀಗ್ ಆಗಿದೆ. ಈ ಲೀಗ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಲಂಕಾಶೈರ್-ಯಾರ್ಕ್ಶೈರ್ ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯವು ವೈರಲ್ ಆಗಲು ಕಾರಣ ಡ್ಯಾನ್ ವಿಲಾಸ್ ಎನ್ನುವ ಆಟಗಾರ. ಪಂದ್ಯದ ಕೊನೆಯ ಓವರ್ನಲ್ಲಿ ಡರ್ಬಿಶೈರ್ ಗೆಲುವಿಗೆ 2 ಎಸೆತಗಳಲ್ಲಿ 6 ರನ್ ಬೇಕಿತ್ತು. ಪಾಕಿಸ್ತಾನದ ಆಟಗಾರ ಶಹದಾಬ್ ಕ್ರೀಸ್ನಲ್ಲಿದ್ದರು. ಶಹದಾಬ್ ಹೊಡೆದ ಚೆಂಡನ್ನು ಹಿಡಿಯಲು ಡ್ಯಾನ್ ವಿಯಾಲ್ಸ್ ಡೈವಿಂಗ್ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಇದಾಗ್ಯೂ ರನೌಟ್ ಮಾಡುವ ಅವಕಾಶ ಕೂಡ ಇತ್ತು. ಆದರೆ ಇತ್ತ ಪ್ಯಾಂಟ್ ಕಳಚಿ ಬಿದ್ದ ಕಾರಣ, ಅದು ಕೂಡ ಕೈತಪ್ಪಿತು. ಡ್ಯಾನ್ ವಿಯಾಲ್ಸ್ ಅವರ ಈ ಒದ್ದಾಟವನ್ನು ನೋಡಿ ಇತರೆ ಆಟಗಾರರಗೂ ಕೂಡ ನಗಲಾರಂಭಿಸಿದರು. ಇದೀಗ ಈ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ಮೊದಲು ಬ್ಯಾಟ್ ಮಾಡಿದ ಲಂಕಾಶೈರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 183 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಯಾರ್ಕ್‌ಷೈರ್ ತಂಡವನ್ನು 20 ಓವರ್‌ಗಳಲ್ಲಿ 183 ರನ್ ಗಳಿಗೆ ನಿಯಂತ್ರಿಸಿತು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹ್ಯಾರಿ ಬ್ರೂಕ್ ಎಲ್‌ಬಿಡಬ್ಲ್ಯೂ ಆಗಿ ಔಟಾಗುವುದರೊಂದಿಗೆ ಈ ಪಂದ್ಯ ಟೈನಲ್ಲಿ ಕೊನೆಗೊಂಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.