Mixed Martial Arts: ಏಷ್ಯನ್ ಮಿಕ್ಸಡ್ ಮಾರ್ಷಲ್ ಆರ್ಟ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಕನ್ನಡಿಗ

| Updated By: preethi shettigar

Updated on: Aug 30, 2021 | 2:56 PM

ಫೈನಲ್​ ಪಂದ್ಯದಲ್ಲಿ ಖಜಕಿಸ್ತಾನ್ ದೇಶದ ಸ್ಪರ್ಧಿ ವಿರುದ್ಧ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಪೈಟಿಂಗ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯುನ್ನತ ಸಾಧನೆಯನ್ನು ಮಾಡಿ ಇಂದು ರಾಜ್ಯಕ್ಕೆ ಆಗಮಿಸಿದ್ದಾನೆ.

Mixed Martial Arts: ಏಷ್ಯನ್ ಮಿಕ್ಸಡ್ ಮಾರ್ಷಲ್ ಆರ್ಟ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಕನ್ನಡಿಗ
ಚಿನ್ನದ ಪದಕ ಗೆದ್ದ ಕಿಶೋರ್
Follow us on

ಬೆಂಗಳೂರು: ಚಿಕ್ಕಂದಿನಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದ ದೇವನಹಳ್ಳಿಯ ಯುವಕ ಕಿಶೋರ್, ಮಿಕ್ಸಡ್ ಮಾರ್ಷಲ್ ಆರ್ಟ್ಸ್​ನಲ್ಲಿ (MMA) ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ. ಈ ಕ್ಷೇತ್ರದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಸದಾ ಅಭ್ಯಾಸದಲ್ಲಿ ತೊಡಗಿದ್ದ ಕಿಶೋರ್, ಏಷ್ಯ ಚಾಂಪಿಯಾನ್​ಶಿಪ್​ನ ಎಂಎಂಎ ಚಾಂಪಿಯನ್​ಶಿಪ್​ನ ಮಿಕ್ಸಡ್ ಮಾರ್ಷಲ್​ನಲ್ಲಿ ಚಿನ್ನದ ಪದಕ ಗೆದ್ದು ದೇಶ ಮತ್ತು ರಾಜ್ಯಕ್ಕೆ ಕಿರ್ತಿ ತಂದಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದ ಕುಮಾರ್ ಎಂಬುವವರ ಮಗನಾದ ಕಿಶೋರ್, ಚಿಕ್ಕಂದಿನಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದನು. ಇದೀಗ ಕಿರ್ಗಿಸ್ತಾನ್​ನಲ್ಲಿ ನಡೆದ ಏಷ್ಯನ್ ಎಂಎಂಎ ಚಾಂಪಿಯನ್​ಶಿಪ್​ನಲ್ಲಿ ಚಿನ್ನವನ್ನು ಗೆದ್ದು ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

ಫೈನಲ್​ ಪಂದ್ಯದಲ್ಲಿ ಖಜಕಿಸ್ತಾನ್ ದೇಶದ ಸ್ಪರ್ಧಿ ವಿರುದ್ಧ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಪೈಟಿಂಗ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯುನ್ನತ ಸಾಧನೆಯನ್ನು ಮಾಡಿ ಇಂದು ರಾಜ್ಯಕ್ಕೆ ಆಗಮಿಸಿದ್ದಾನೆ.  ಈ ವೇಳೆ ವಿಮಾನ ನಿಲ್ದಾಣದಲ್ಲಿ ಚಿನ್ನದ ಪದಕ ಗೆದ್ದಿರುವ ಕಿಶೋರ್ ಸಂತಸ ವ್ಯಕ್ತಪಡಿಸಿದ್ದಾನೆ.

ಇದೇ ತಿಂಗಳ 24 ರಿಂದ 28 ರ ವರೆಗೂ ಕಿರ್ಗಿಸ್ತಾನ್ ಏಷ್ಯಿಯಾನ್ ಎಂಎಂಎ ಚಾಂಪಿಯಾನ್​ಶಿಪ್​ ಮಿಕ್ಸಡ್ ಮಾರ್ಷಲ್ ಪೈಟಿಂಗ್ ಸ್ಪರ್ಧೆ ನಡೆದಿದ್ದು, ಅದರಲ್ಲಿ 52.2 ಕೆಜಿ ವಿಭಾಗದಲ್ಲಿ ಮೂರು ದೇಶಗಳ ವಿರುದ್ಧ ಕಿಶೋರ್ ಸೆಣಸಾಟ ನಡೆಸಿದ್ದಾನೆ. ಕೊನೆಗೆ ಖಜಕಿಸ್ತಾನ್ ದೇಶದ ವಿರುದ್ಧ ಪೈನಲ್​ನಲ್ಲಿ ಗೆದ್ದ ಈ ಯುವಕ ಚಿನ್ನದ ಪದಕವನ್ನು ಗೆದ್ದು ಇದೀಗ ದೆಹಲಿಗೆ ಆಗಮಿಸಿ ಅಲ್ಲಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ.

ವಿಮಾನ ನಿಲ್ದಾಣಕ್ಕೆ ಬಂದ ಕಿಶೋರ್​ನನ್ನು ಕುಟುಂಬಸ್ಥರು ಮತ್ತು ಕೆಲ ಅಭಿಮಾನಿಗಳು ಸ್ವಾಗತಿಸಿ ಸಂತಸವನ್ನು ಹಂಚಿಕೊಂಡರು. ಜತೆಗೆ ಮುಂದೆ ಇನ್ನಷ್ಟು ಸಾಧನೆ ಮಾಡುವ ಗುರಿ ಇಟ್ಟುಕೊಂಡಿರುವ ಮಗನಿಗೆ ಸಂಪೂರ್ಣ ಸಹಕಾರ ನಿಡುವುದಾಗಿ ಕಿಶೋರ್​ ತಂದೆ ಕುಮಾರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮಿಕ್ಸಡ್ ಮಾರ್ಷಲ್​ನಲ್ಲಿ ಕುಸ್ತಿ, ಬಾಕ್ಸಿಂಗ್, ಟೆಕ್ವಾಂಡೋದಲ್ಲಿ ತನ್ನನ್ನು ತಾನು ಕರಗತ ಮಾಡಿಕೊಂಡಿರುವ ಕಿಶೋರ್ ಏಷ್ಯಿಯಾನ್ ಚಾಂಪಿಯಾನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದು ತಾಯ್ನಾಡಿಗೆ ಕೀರ್ತಿ ತಂದಿದ್ದಾನೆ. ಇನ್ನೂ ಮುಂದೆ ವಿಶ್ವ ಚಾಂಪಿಯಾನ್ ಭಾಗವಹಿಸುವ ಗುರಿ ಹೊಂದಿರುವ ಕಿಶೋರ್​ಗೆ ಸರ್ಕಾರ ಮತ್ತಷ್ಟು ಬೆಂಬಲ ನೀಡಲಿ ಎನ್ನುವುದು ಎಲ್ಲರ ಆಶಯ.

ವರದಿ: ನವೀನ್

ಇದನ್ನೂ ಓದಿ:

ಹೊಸ ವಿಶ್ವ ಅಥ್ಲೆಟಿಕ್ಸ್ ರ‍್ಯಾಕಿಂಗ್: ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಎರಡನೇ ಸ್ಥಾನ!

Tokyo Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಗ್ರೆಟ್ ಬ್ರಿಟನ್ ದಂಪತಿ