ಮೆಲ್ಬೋರ್ನ್​​ ಟೆಸ್ಟ್​ಗೆ ಈ ಇಬ್ಬರು ಆಟಗಾರರಿದ್ದರೆ ಮಾತ್ರ ಭಾರತದ ಅದೃಷ್ಟ ಬದಲಾಗುತ್ತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 3:05 PM

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್​ ಗಾವಸ್ಕರ್​, ಈ ರೀತಿಯ ಪ್ರದರ್ಶನ ನೋಡಿದ ನಂತರದಲ್ಲಿ ಎಲ್ಲರಿಗೂ ಬೇಸರವಾಗುವುದು ಸಹಜ. ಮುಂದಿನ ಪಂದ್ಯದಲ್ಲಿ ಎರಡು ಬದಲಾವಣೆ ಆಗಲೇಬೇಕು ಎಂದಿದ್ದಾರೆ.

ಮೆಲ್ಬೋರ್ನ್​​ ಟೆಸ್ಟ್​ಗೆ ಈ ಇಬ್ಬರು ಆಟಗಾರರಿದ್ದರೆ ಮಾತ್ರ ಭಾರತದ ಅದೃಷ್ಟ ಬದಲಾಗುತ್ತೆ
ಟೀಂ ಇಂಡಿಯಾ
Follow us on

ಅಡಿಲೇಡ್​ ಟೆಸ್ಟ್​ ಪಂದ್ಯದಲ್ಲಿ ಕೆಲವರು ಭಾರತದ ಸೋಲನ್ನು ಪರಾಮರ್ಶಿಸಿದರೆ ಇನ್ನೂ ಕೆಲವರು ಮುಂದಿನ ಪಂದ್ಯಕ್ಕೆ ಯಾವ ಆಟಗಾರರನ್ನು ಕೈ ಬಿಡಬೇಕು ಎನ್ನುವ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್​ ಗಾವಸ್ಕರ್​ ಕೆಲ ಕಿವಿಮಾತು ಹೇಳಿದ್ದಾರೆ.

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುನಿಲ್​ ಗಾವಸ್ಕರ್​, ಈ ರೀತಿಯ ಪ್ರದರ್ಶನ ನೋಡಿದ ನಂತರದಲ್ಲಿ ಎಲ್ಲರಿಗೂ ಬೇಸರವಾಗುವುದು ಸಹಜ. ನಾವು ಉತ್ತಮ ಪ್ರದರ್ಶನ ನೀಡಿದ್ದರೆ ಗೆಲ್ಲಬಹುದಿತ್ತು. ಏಕೆಂದರೆ, ಆಸ್ಟ್ರೇಲಿಯಾ ಬ್ಯಾಟ್ಸಮನ್​ಗಳು ಅಷ್ಟು ವಿಶ್ವಾಸದಿಂದ ಇರಲಿಲ್ಲ. ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎಂದರು.

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಆಗಬೇಕು ಎಂದಿರುವ ಗಾವಸ್ಕರ್​, ಭಾರತದ ಬ್ಯಾಟಿಂಗ್​ ವಿಭಾಗದಲ್ಲಿ ಎರಡು ಬದಲಾವಣೆ ಆಗೋದು ಖಚಿತ. ಪೃಥ್ವಿ ಶಾ ಬದಲಾಗಿ ಕನ್ನಡಿಗ ಕೆ.ಎಲ್. ರಾಹುಲ್​ ಕಣಕ್ಕೆ ಇಳಿಯಬಹುದು. ಶುಭ್​ ಮನ್​ ಗಿಲ್​ ಐದು ಅಥವಾ ಆರನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿಯಬಹುದು. ಇವರಿಬ್ಬರಿದ್ದರೆ ಮಾತ್ರ ಭಾರತದ ಅದೃಷ್ಟ ಬದಲಾಗಲಿದೆ ಎಂದರು.

ಕನ್ನಡಿಗ ಕೆ.ಎಲ್.​ ರಾಹುಲ್​ ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದರು. ಇದಕ್ಕೆ ಕಾರಣ ಕೂಡ ಇತ್ತು. ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಕೆಲ್​ ರಾಹುಲ್​ ಆಡಿದ್ದಾರೆ. ಹೀಗಾಗಿ ಅವರಿಗೆ ಕೊಂಚ ವಿಶ್ರಾಂತಿ ಅಗತ್ಯ ಇದೆ. ಅಲ್ಲದೆ, ಎರಡನೇ ಟೆಸ್ಟ್​ನಿಂದ ವಿರಾಟ್​ ಕೊಹ್ಲಿ ಅಲಭ್ಯರಾಗಲಿದ್ದಾರೆ. ಈ ಕಾರಣಕ್ಕೆ ಮೊದಲ ಟೆಸ್ಟ್​ನಲ್ಲಿ ವಿಶ್ರಾಂತಿ ಕೊಡಲು ನಿರ್ಧರಿಸಲಾಗಿತ್ತು. ಆದರೆ ಈಗ ರಾಹುಲ್​ ತಂಡ ಸೇರಿಕೊಳ್ಳೋದು ಅನಿವಾರ್ಯವಾಗಿದೆ.

India vs Australia Test Series 2020: ಟ್ವೀಟ್​ಗಳಲ್ಲೂ ಟೀಮ್ ಇಂಡಿಯ ಆಟಗಾರರಿಗೆ ತರಾಟೆ

Published On - 3:04 pm, Sun, 20 December 20