AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series 2020: ಟ್ವೀಟ್​ಗಳಲ್ಲೂ ಟೀಮ್ ಇಂಡಿಯ ಆಟಗಾರರಿಗೆ ತರಾಟೆ

ಅಡಿಲೇಡ್​ ಟೆಸ್ಟ್​ನಲ್ಲಿ ಭಾರತದ ಕಳಾಹೀನ ಪ್ರದರ್ಶನ ಮಾಜಿ ಆಟಗಾರರನ್ನು ಮತ್ತು ಕ್ರಿಕೆಟ್ ಪ್ರೇಮಿಗಳನ್ನು ನಿರಾಶೆಗೊಳಿಸಿದೆ. ಟ್ವೀಟ್​ಗಳ ಮೂಲಕ ಅವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

India vs Australia Test Series 2020: ಟ್ವೀಟ್​ಗಳಲ್ಲೂ ಟೀಮ್ ಇಂಡಿಯ ಆಟಗಾರರಿಗೆ ತರಾಟೆ
ಆಸ್ಸೀಗಳನ್ನು ಅಭಿನಂದಿಸುತ್ತಿರುವ ವಿರಾಟ್ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 19, 2020 | 6:32 PM

Share

ಅಡಿಲೇಡ್​ನಲ್ಲಿ ಟೀಮ್ ಇಂಡಿಯಾ ಇಂದು ಅನುಭವಿಸಿದ ಲಜ್ಜಾಸ್ಪದ ಸೋಲಿನ ನಂತರ ಮಾಜಿ ಆಟಗಾರರು ಸೇರಿದಂತೆ ಅನೇಕರು ಟ್ವೀಟ್​ಗಳ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಭಾರತದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್, ‘‘ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರೆ ಇಂದು ಬೆಳಗ್ಗೆ ಆಸ್ಸೀಗಳು ಅತ್ಯುತ್ತಮ ಕಮ್​ಬ್ಯಾಕ್ ಮಾಡಿದರು. ಟೆಸ್ಟ್ ಕ್ರಿಕೆಟ್​ನ ಸೊಬಗೇ ಹಾಗೆ. ಪಂದ್ಯ ಕೊನೆಗೊಳ್ಳುವವರೆಗೆ ಏನನ್ನೂ ಹೇಳಲಾಗದು. ಪಂದ್ಯದ ಎರಡನೆ ಭಾಗದಲ್ಲಿ ಅಸ್ಟ್ರೇಲಿಯ ಭಾರತವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿತು, ಅಸ್ಸೀಗಳಿಗೆ ಅಭಿನಂದನೆಗಳು!’’ ಎಂದು ಟ್ಟೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್

‘‘ಕೆಲವೊಮ್ಮೆ ಅಪಾರವಾದ ಆನಂದ ಹೇಗೆ ಅಪಾರವಾದ ದುಖಃದಲ್ಲಿ ಪರ್ಯಾವಸನಗೊಳ್ಳುತ್ತದೆ ಎನ್ನುವುದನ್ನು ನಾನು ಇವತ್ತು ತಿಳಿದುಕೊಂಡೆ,’’ ಎಂದು ಭಾರತದ ಮಾಜಿ ಆರಂಭ ಆಟಗಾರ ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.

ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ತಮ್ಮ ಟ್ವೀಟ್​ನಲ್ಲಿ,‘‘ನಿಸ್ಸಂದೇಹವಾಗಿ ಭಾರತದ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಕುಸಿದಿದೆ, ಅದರೆ ಅವರು ಪಂದ್ಯದ ಆರು ಸೆಷನ್​ನಗಳಲ್ಲಿ ಮೇಲುಗೈ ಸಾಧಿಸಿದ್ದರೆನ್ನುವುದನ್ನು ಮರೆಯಬಾರದು’’ ಎಂದಿದ್ದಾರೆ.

ರಾಮ್ ರಾಬರ್ಟ್ ರಹೀಮ್ ಎನ್ನುವವರು, ‘‘ದೇವರೇ, ನಿನ್ನೆಲ್ಲ ಪ್ರಭಾವನನ್ನು ಬಳಸಿ ಭಾರತದ ಕೋಚ್ ರವಿ ಶಾಸ್ತ್ರೀಯನ್ನು ಬದಲಾಯಿಸಿ ಆತನ ಜಾಗದಲ್ಲಿ ರಾಹುಲ್ ದ್ರಾವಿಡ್​ರನನ್ನು ತಂದು ಕೂರಿಸು, ಯಾಕೆಂದರೆ ನಾವು ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸ ಹೋಗಬೇಕಿದೆ’’ ಅಂತ ಟ್ವೀಟ್ ಮಾಡಿದ್ದಾರೆ.

ಭಾರತದ ವಿಧ್ವಂಸಕ ಆರಂಭ ಆಟಗಾರರಾಗಿದ್ದ ವಿರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್​ನಲ್ಲಿ, ‘‘ಇವತ್ತಿನದನ್ನು ಮರೆಯಲು 492 04084041 ಒಟಿಪಿಯನ್ನು ನೆನಪಿಡಿ’’ ಎಂದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಭಾರತದ ಆಟಗಾರರಿಗೆ ಮತ್ತು ಮುಂದಿನ ಮೂರು ಟೆಸ್ಟ್​ಗಳಲ್ಲಿ ನಾಯಕತ್ವ ವಹಿಸಲಿರುವ ಅಜಿಂಕ್ಯಾ ರಹಾನೆಗೆ ಸಲಹೆಗಳನ್ನು ನೀಡಿದ್ದಾರೆ.

ವಾಸಿಂ ಜಾಫರ್

‘‘ಎಲ್ಲರೂ ಒಂದೇ ಗುಂಪಾಗಿದ್ದುಕೊಂಡು ನಿಮ್ಮ ಫೋನ್​ಗಳನ್ನು ಸ್ವಿಚ್ಚಾಫ್ ಮಾಡಿ, ಈಗಿನ ಹತಾಷೆಯಿಂದ ಹೊರಬರಲು ನಿಮಗಿರುವ ಮಾರ್ಗ ಅದೊಂದೇ, @ajinkyarahane ಆಟಗಾರರನ್ನು ಗುಂಪುಗೂಡಿಸಿ ನಿಮ್ಮ ನಾಯಕತ್ವದ ಛಾಪನ್ನು ಮೂಡಿಸಬೇಕಿದೆ,’’ ಎಂದು ಕೈಫ್ ಹೇಳಿದ್ದಾರೆ.

ಸನ್ನಿ ಹೆಸರಿನ ಕ್ರಿಕೆಟ್ ಅಭಿಮಾನಿ, ‘‘ ರವಿ ಶಾಸ್ತ್ರಿಯಂಥ ನಿಷ್ಪ್ರಯೋಜಕ ಕೋಚ್​ನನ್ನು ಕಿತ್ತೊಗೆಯಲು ಇದು ಸೂಕ್ತ ಸಮಯ, ಅವರಿಂದಾಗಿ ಅನೇಕ ಯುವ ಪ್ರತಿಭೆಗಳು ನಶಿಸಿಹೋಗುತ್ತಿವೆ. ಆ ಮನುಷ್ಯನನ್ನು ಒದ್ದೋಡಿಸಿರಿ,’’ ಎಂದಿದ್ದಾರೆ.

ತನುಜ ಮಾಥುರ್ ಎನ್ನುವವರು ಸಹ ರವಿ ಶಾಸ್ತ್ರಿಯನ್ನು ಕೋಚ್ ಸ್ಥಾನದಿಂದ ವಜಾ ಮಾಡಬೇಕೆಂದು ಹೇಳಿದ್ದಾರೆ.

‘‘ಇವತ್ತಿನ ಲಜ್ಜೆಗೇಡು ಸೋಲಿನ ನಂತರ ರವಿ ಶಾಸ್ತ್ರಿಯವರೆ, ನೈತಿಕ ಹೊಣೆ ಹೊತ್ತು ನಿಮ್ಮ ಸ್ಥಾನದಿಂದ ನಿರ್ಗಮಿಸಬೇಕು. ಒಬ್ಬ ಕಾಮೆಂಟೇಟರ್ ಆಗಿ ನೀವು ಉತ್ತಮ ಕೆಲಸ ಮಾಡಬಲ್ಲಿರಿ, ಇವತ್ತೇ ತೊಲಗಿ’’ ಅಂತ ಟ್ವೀಟ್ ಮಾಡಿದ್ದಾರೆ.

ಖ್ಯಾತ ಕ್ರಿಕೆಟ್ ಅಂಕಣಕಾರ ಅಯಾಜ್ ಮೆಮನ್ ತಮ್ಮ ಟ್ವೀಟ್​ನಲ್ಲಿ, ‘‘ ಒಬ್ಬ ಭಾರತೀಯ ಬ್ಯಾಟ್ಸ್​ಮನ್ ಸಹ ಎರಡಂಕಿ ಮೊತ್ತ ದಾಟಲಿಲ್ಲ. ಇದನ್ನು ಅರಗಿಸಿಕೊಳ್ಳುವುದು ಕಷ್ಟ. ನಂಬಲು ಸಾಧ್ಯವಾಗದಂಥ ವಿಕೋಪ. ಅದರೆ ಭಾರತಕ್ಕೆ ಪಾಸಿಟಿವ್ ಅಂಶವೆಂದರೆ ಬೌಲರ್​ಗಳು ಅದ್ಭುತವಾಗಿ ಬೌಲ್ ಮಾಡಿದ್ದು. ಅಸ್ಸೀಗಳೇ ಜಾಗ್ರತೆಯಾಗಿರಿ! ಈ ಭಾರಿ ಪ್ರಮಾಣದ ಸೋಲು ಟೀಮಿಗೆ ದೊಡ್ಡ ಘಾಸಿಯನ್ನುಂಟು ಮಾಡಿದೆ. ಮುಂದಿರುವ ಸಮಸ್ಯೆಗಳು ಅನೇಕ. ಕೊಹ್ಲಿ ಲಭ್ಯರಿರುವುದಿಲ್ಲ, ಶಮಿ ಗಾಯಗೊಂಡಿದ್ದಾರೆ, ಆರಂಭ ಆಟಗಾರರಲ್ಲಿ ವಿಶ್ವಾಸದ ಕೊರತೆ, ಪೂಜಾರಾ, ರಹಾನೆ, ವಿಹಾರಿ, ಸಹಾ, ಕನ್ವಿನ್ಸಿಂಗ್ ಅನಿಸುತ್ತಿಲ್ಲ. ಶಾಸ್ತ್ರೀ ಸಮಸ್ಯೆಗಳ ಸಾಗರದಲ್ಲಿ ಮುಳುಗಿದ್ದಾರೆ,’’ ಎಂದಿದ್ದಾರೆ.

ಅಯಾಜ್ ಮೆಮನ್

Published On - 6:28 pm, Sat, 19 December 20