ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ: ನೇಥನ್ | Kohli is the best in business, will miss bowling to him: Nathan

|

Updated on: Nov 12, 2020 | 7:46 PM

ಭಾರತದ ಕ್ರಿಕೆಟ್ ಪ್ರೇಮಿಗಳು ಈ ವಾದವನ್ನು ಇಷ್ಟಪಡಲಾರರು, ಹಾಗಂತ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ವಿಷಯವೇನೆಂದರೆ, ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಎಲ್ಲ ಶ್ರೇಷ್ಠ ಬೌಲರ್​ಗಳನ್ನು ಚಚ್ಚಿ ಅವರ ವಿರುದ್ಧ ಸಾರ್ವಭೌಮತೆಯನ್ನು ಮೆರೆದಿದ್ದಾರೆ, ಆದರೆ, ಇವರು ಸ್ಪಿನ್ನರ್​ಗಳ ವಿರುದ್ಧ ಮಾತ್ರ ತಮ್ಮ ಖ್ಯಾತಿಯ ಆಟವಾಡಿಲ್ಲ. ತೆಂಡೂಲ್ಕರ್ ತಾವಾಡುತ್ತಿದ್ದ ದಿನಗಳಲ್ಲಿ ಲೆಗ್ ಸ್ಪಿನ್ನರ್​ಗಳನ್ನು ಮನಬಂದಂತೆ ದಂಡಿಸುತ್ತಿದ್ದರೂ ಅಷ್ಟೇ ಅಧಿಕಾರಯುತವಾಗಿ ಮುತ್ತಯ್ಯ ಮುರಳೀಧರನ್, ಸಕ್ಲೇನ್ ಮುಷ್ತಾಕ್ ಮತ್ತು ಸಯೀದ್ ಅಜ್ಮಲ್ ವಿರುದ್ಧ ಆಡುತ್ತಿರಲಿಲ್ಲ. ತೆಂಡೂಲ್ಕರ್ […]

ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ: ನೇಥನ್ | Kohli is the best in business, will miss bowling to him: Nathan
Follow us on

ಭಾರತದ ಕ್ರಿಕೆಟ್ ಪ್ರೇಮಿಗಳು ಈ ವಾದವನ್ನು ಇಷ್ಟಪಡಲಾರರು, ಹಾಗಂತ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ವಿಷಯವೇನೆಂದರೆ, ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಎಲ್ಲ ಶ್ರೇಷ್ಠ ಬೌಲರ್​ಗಳನ್ನು ಚಚ್ಚಿ ಅವರ ವಿರುದ್ಧ ಸಾರ್ವಭೌಮತೆಯನ್ನು ಮೆರೆದಿದ್ದಾರೆ, ಆದರೆ, ಇವರು ಸ್ಪಿನ್ನರ್​ಗಳ ವಿರುದ್ಧ ಮಾತ್ರ ತಮ್ಮ ಖ್ಯಾತಿಯ ಆಟವಾಡಿಲ್ಲ. ತೆಂಡೂಲ್ಕರ್ ತಾವಾಡುತ್ತಿದ್ದ ದಿನಗಳಲ್ಲಿ ಲೆಗ್ ಸ್ಪಿನ್ನರ್​ಗಳನ್ನು ಮನಬಂದಂತೆ ದಂಡಿಸುತ್ತಿದ್ದರೂ ಅಷ್ಟೇ ಅಧಿಕಾರಯುತವಾಗಿ ಮುತ್ತಯ್ಯ ಮುರಳೀಧರನ್, ಸಕ್ಲೇನ್ ಮುಷ್ತಾಕ್ ಮತ್ತು ಸಯೀದ್ ಅಜ್ಮಲ್ ವಿರುದ್ಧ ಆಡುತ್ತಿರಲಿಲ್ಲ. ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಭಾವಿಸುತ್ತಿದ್ದರಿಂದ, ಯಾರೂ ಅವರ ಈ ದೌರ್ಬಲ್ಯದ ಬಗ್ಗೆ ಮಾತಾಡುತ್ತಿರಲಿಲ್ಲ.

ಹಾಗೆಯೇ, ಕೊಹ್ಲಿ ಕೆಲವು ಸ್ಪಿನ್ನರುಗಳ ವಿರುದ್ಧ ವಲ್ನರೇಬಲ್ ಅನಿಸಿದ್ದ್ದಾರೆ. ವಿಶ್ವದ ಹೆಸರುವಾಸಿ ಸ್ಪಿನ್ನರ್​ಗಳೊಂದಿಗೆ, ಐಪಿಎಲ್ ಆಡುವ ಕೆಲ ಸ್ಥಳೀಯ ಸ್ಪಿನ್ನರ್​ಗಳು ಸಹ ಟೀಮ್ ಇಂಡಿಯಾದ ನಾಯಕನನ್ನು ಕಾಡಿದ್ದಾರೆ. ಬಿಡಿ, ಈ ವಿಷಯವನ್ನು ಮತ್ತೊಂದು ದಿನ ಸವಿಸ್ತಾರವಾಗಿ ಚರ್ಚಿಸೋಣ. 

ಇದನ್ನು ಉಲ್ಲೇಖಿಸುವ ಕಾರಣವೇನೆಂದರೆ, ಆಸ್ಟ್ರೇಲಿಯಾದ ನೇಥನ್ ಲಿಯಾನ್ ಪ್ರಸ್ತುತವಾಗಿ ವಿಶ್ವದ ಶ್ರೇಷ್ಠ ಆಫ್ ಸ್ಪಿನ್ನರ್​ಗಳಲ್ಲಿ ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಅವರು ಕೊಹ್ಲಿಗೆ ತೊಂದರೆಗಳನ್ನು ನೀಡಿದ್ದಾರೆ. ಭಾರತದ ನಾಯಕನನ್ನು ಆವರು 7 ಬಾರಿ ಔಟ್ ಮಾಡಿದ್ದಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಲಿಯಾನ್ ಮಾತ್ರ ಕೊಹ್ಲಿಯನ್ನು ವಿಶ್ವದ ಈಗಿನ ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ಪರಿಗಣಿಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಶುರುವಾಗುವ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ ಕೇವಲ ಮೊದಲ ಟೆಸ್ಟ್ ಮಾತ್ರ ಆಡಿ ಸ್ವದೇಶಕ್ಕೆ ವಾಪಸ್ಸಾಗುವುದು ಅವರಿಗೆ ನಿರಾಸೆ ಮೂಡಿಸಿದೆ. ಹಾಗಂತ, ಕೊಹ್ಲಿ ಅನುಪಸ್ಥಿಯಲ್ಲಿ ಅತಿಥೇಯರು ಸಂಪೂರ್ಣ ಮೇಲಗೈ ಸಾಧಿಸಲಿದ್ದಾರೆ ಎಂಬ ವಾದವನ್ನು ನೇಥನ್ ಒಪ್ಪುವುದಿಲ್ಲ. 

ಫಾಕ್ಸ್ ಸ್ಪೋರ್ಟ್ಸ್ ವಾಹಿನಿ ಜೊತೆ ಮಾತಾಡಿರುವ ನೇಥನ್; ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಸಹ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ಎಂದು ಹೇಳಿದ್ದಾರೆ.

‘‘ನಿಸ್ಸಂದೇಹವಾಗಿ ಕೊಹ್ಲಿ ಇಂದಿನ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲೊಬ್ಬರು. ಅವರು ಒಂದು ಟೆಸ್ಟನ್ನು ಮಾತ್ರ ಆಡಿ ವಾಪಸ್ಸು ಹೋಗಲಿರುವುದು ನಿರಾಸೆ ಮೂಡಿಸಿದೆ. ಬೆಸ್ಟ್ ಆಟಗಾರರಿಗೆ ಬೌಲ್ ಮಾಡುವ ಸವಾಲು ನನ್ನನ್ನು ಮತ್ತಷ್ಟು ಉತ್ತೇಜಿಸುತ್ತದೆ. ಆದರೆ, ಅವರ ಹೊರತಾಗಿ ಇಂಡಿಯಾ ಟೀಮಿನಲ್ಲಿ ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ ಮತ್ತು ಕೆಲವು ಯುವ ಆಟಗಾರರು ಕ್ವಾಲಿಟಿ ಬ್ಯಾಟ್ಸ್​ಮನ್​ಗಳಾಗಿದ್ದಾರೆ. ಕೊಹ್ಲಿಯ ಅನುಪಸ್ಥಿತಿ ಟೀಮಿನ ಬ್ಯಾಟಿಂಗ್ ಬಲವನ್ನು ದುರ್ಬಲಗೊಳಿಸಲಾರದು. ಆದರೆ ಕೊಹ್ಲಿಗೆ ಬೌಲಿಂಗ್ ಮಾಡುವುದನ್ನು ನಾನು ತಪ್ಪಿಸಿಕೊಳ್ಳವುದು ಬೇಸರ ಮೂಡಿಸಿದೆ,’’ ಅಂತ ಹೇಳಿದ್ದಾರೆ.

ಅಂದಹಾಗೆ, 2018-19 ಸಾಲಿನಲ್ಲಿ ಭಾರತ ಸರಣಿ ಗೆದ್ದಿದ್ದು ಕೊಹ್ಲಿಯ ಉತ್ಕೃಷ್ಟತೆಯಿಂದಲ್ಲ. ಆ ಸರಣಿಯಲ್ಲಿ ಅವರು ಗಳಿಸಿದ್ದು 282 ರನ್. ಆದರೆ ಸರಣಿಯುದ್ದಕ್ಕೂ ಚಾಂಪಿಯನ್​ನಂತೆ ಬ್ಯಾಟ್ ಮಾಡಿದ ಪೂಜಾರಾ 3 ಶತಕಗಳು ಸೇರಿದಂತೆ 521 ರನ್ ಬಾರಿಸಿದ್ದರು.