PBKS vs MI: 7ನೇ ಕ್ಯಾಚ್ ಬಿಟ್ಟ ನಮನ್; ಹೀಗಾದ್ರೆ ಮುಂಬೈ ಗೆಲ್ಲುವುದಾದರೂ ಹೇಗೆ?
Naman Dhir dropped catches: ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಕಳಪೆ ಫೀಲ್ಡಿಂಗ್ ಮತ್ತು ಕ್ಯಾಚ್ ಕೈಚೆಲ್ಲಿದ್ದೇ ದೊಡ್ಡ ಹಿನ್ನಡೆಯಾಗಿದೆ. ನಮನ್ ಧೀರ್ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸುಲಭ ಕ್ಯಾಚ್ ಕೈಬಿಟ್ಟು, ಈ ಆವೃತ್ತಿಯಲ್ಲಿ ಏಳು ಕ್ಯಾಚ್‌ಗಳನ್ನು ಕೈಚೆಲ್ಲಿದ ಬೇಡದ ದಾಖಲೆ ಮಾಡಿದ್ದಾರೆ. ತಂಡದ ಕಳಪೆ ಫೀಲ್ಡಿಂಗ್ ಪ್ಲೇಆಫ್ ಸ್ಪರ್ಧೆಯಿಂದ ಹೊರಬೀಳಲು ಮುಖ್ಯ ಕಾರಣವಾಯಿತು. ಮುಂದಿನ ಸೀಸನ್‌ಗೆ ಸುಧಾರಣೆ ಅನಿವಾರ್ಯ.

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಘಟನಾಘಟಿ ಆಟಗಾರರೇ ಇದ್ದರೂ ಗೆಲುವು ಮಾತ್ರ ಮರಿಚಿಕೆಯಾಗಿಯೇ ಉಳಿಯಿತು. ಈ ಆವೃತ್ತಿಯಲ್ಲಿ ತಂಡದ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಕಳಪೆಯಾಗಿತ್ತು. ಇದರ ಜೊತೆಗೆ ಫಿಲ್ಡಿಂಗ್ ಕೂಡ ಅತ್ಯಂತ ಕಳಪೆಯಾಗಿತ್ತು. ಹೀಗಾಗಿಯೇ ಮುಂಬೈ ಇಂಡಿಯನ್ಸ್‌ಗೆ ಗೆಲುವುಗಿಂತ ಸೋಲೆ ಹೆಚ್ಚು ಎದುರಾಯಿತು. ಇದಕ್ಕೆ ಉದಾಹರಣೆಯಾಗಿ ಇಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ 58 ನೇ ಪಂದ್ಯದಲ್ಲೂ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ, ಸ್ಲಿಪ್‌ನಲ್ಲಿ ನಿಂತಿದ್ದ ನಮನ್ ಧೀರ್, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸರಳ ಕ್ಯಾಚ್ ಕೈಬಿಟ್ಟರು. ನಮನ್ ಧೀರ್ (Naman Dhir) ಇಡೀ ಆವೃತ್ತಿಯಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ತಲೆನೋವಾಗಿದ್ದಾರೆ.
ಸುಲಭವಾದ ಕ್ಯಾಚ್ ಬಿಟ್ಟ ನಮನ್
ಪಂಜಾಬ್ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿಯೇ ನಮನ್ ಧೀರ್ ಸುಲಭ ಕ್ಯಾಚ್ ಕೈಚೆಲ್ಲಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ ಅಲ್ಲಿ ನಿಂತಿದ್ದ ನಮನ್ ಧೀರ್ ಅದನ್ನು ಹಿಡಿಯಲು ವಿಫಲರಾದರು. ಇತ್ತ ಜಸ್ಪ್ರೀತ್ ಬುಮ್ರಾ ಕೂಡ ನಮನ್ ಅವರ ಕಳಪೆ ಫೀಲ್ಡಿಂಗ್ನಿಂದ ನಿರಾಶೆಗೊಂಡಂತೆ ಕಂಡುಬಂದರು. ಈ ಜೀವದಾನದ ಲಾಭ ಪಡೆದ ಪ್ರಭ್ಸಿಮ್ರಾನ್ 57 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
Naman Dhir as a batter has been impressive but as a fielder, he has been absolutely ridiculous. pic.twitter.com/pmWHgVxlJ8
— Sameer Allana (@HitmanCricket) May 14, 2026
ಈ ಆವೃತ್ತಿಯಲ್ಲಿ ನಮನ್ ಧೀರ್ ಒಟ್ಟು ಏಳು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಇಡೀ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ನಮನ್ ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಇದೇ ರೀತಿಯ ಕಳಪೆ ಫೀಲ್ಡಿಂಗ್ ಮಾಡಿ ತಂಡಕ್ಕೆ ಹೊರಯಾಗಿದ್ದಾರೆ. ನಮನ್ ಮಾತ್ರವಲ್ಲ, ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್‌ನ ಫೀಲ್ಡಿಂಗ್ ಸರಾಸರಿಯಾಗಿತ್ತು. ಹಲವಾರು ಆಟಗಾರರು ಕ್ಯಾಚ್‌ಗಳನ್ನು ಬಿಡುವುದರ ಜೊತೆಗೆ ಹೆಚ್ಚುವರಿ ರನ್ಗೆ ಅವಕಾಶ ಮಾಡಿಕೊಟ್ಟರು. ಇದು ಪಂದ್ಯದ ಫಲಿತಾಂಶಗಳ ಮೇಲೆ ನೇರವಾಗಿ ಪರಿಣಾಮ ಬೀರಿತು. ಪ್ಲೇಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ಗೆ ತಂಡದ ಫೀಲ್ಡಿಂಗ್ ಸುಧಾರಿಸುವುದು ಈಗ ಪ್ರಮುಖ ಸವಾಲಾಗಿದೆ.
PBKS vs MI IPL 2026 Live Score: ಪಂಜಾಬ್ 4ನೇ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ
ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿಯವರೆಗೆ ಒಟ್ಟು 11 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿದೆ, ಇದರ ಪರಿಣಾಮವಾಗಿ ಪ್ಲೇಆಫ್ ಸ್ಪರ್ಧೆಯಿಂದ ಬೇಗನೆ ಹೊರಬಿದ್ದಿದೆ. ಆದ್ದರಿಂದ, ಮುಂದಿನ ಸೀಸನ್ಗೂ ಮೊದಲು ತಂಡವು ಬಲವಾದ ಪುನರಾಗಮನ ಮಾಡಲು ತಮ್ಮ ಫೀಲ್ಡಿಂಗ್‌ನಲ್ಲಿ ಗಮನಾರ್ಹವಾಗಿ ಕೆಲಸ ಮಾಡಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





