AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ನೆಲದಲ್ಲಿ ಮಿಂಚಿದ ಕುಲ್ದೀಪ್ ಯಾದವ್

Kuldeep Yadav County Cricket: ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾದ ಕುಲ್ದೀಪ್ ಯಾದವ್, ಕೌಂಟಿ ಕ್ರಿಕೆಟ್‌ನಲ್ಲಿ ಯಾರ್ಕ್‌ಷೈರ್ ಪರ ಗ್ಲಾಮೋರ್ಗನ್ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದಾರೆ. ಕೇವಲ 39 ರನ್ ನೀಡಿ ಪ್ರಮುಖ ವಿಕೆಟ್ ಕಬಳಿಸಿದ ಕುಲ್ದೀಪ್, ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅವರ ಆಸೆ ಹೆಚ್ಚಿದೆ.

ಪೃಥ್ವಿಶಂಕರ
|

Updated on: Jul 24, 2026 | 9:52 PM

Share
ಟೀಂ ಇಂಡಿಯಾದಲ್ಲಿನ ಅವಕಾಶಗಳ ಕೊರತೆಯಿಂದಾಗಿ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ಯಾರ್ಕ್‌ಷೈರ್ ತಂಡದ ಪರ ಆಡುತ್ತಿದ್ದಾರೆ. ಅದರಂತೆ ತಂಡದ ಪರ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಕುಲ್ದೀಪ್ ಗ್ಲಾಮೋರ್ಗನ್ ವಿರುದ್ಧ 10 ಓವರ್‌ಗಳಲ್ಲಿ ಕೇವಲ 39 ರನ್‌ಗಳನ್ನು ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್​ಗಳನ್ನು ಕಬಳಿಸಿದ್ದಾರೆ(PC-PTI).

1 / 5
 ಕುಲ್ದೀಪ್ ಯಾದವ್ ತಮ್ಮ ಕೊನೆಯ ಓವರ್‌ನಲ್ಲಿ ಮೂರು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರು. ಮೊದಲಿಗೆ ವಿಕೆಟ್ ಕೀಪರ್ ಅಲೆಕ್ಸ್ ಹಾರ್ಟನ್ ಅವರ ವಿಕೆಟ್ ಪಡೆದ ಕುಲ್ದೀಪ್ ಆ ಬಳಿಕ ಮ್ಯಾಕ್‌ಲ್ರಾಯ್‌ ಅವರನ್ನು ಪೆವಿಲಿಯನ್​ಗಟ್ಟಿದರು. ಮ್ಯಾಕ್‌ಲ್ರಾಯ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ(PC-PTI).

2 / 5
ಗಮನಿಸಬೇಕಾದ ಅಂಶವೆಂದರೆ ಟೀಂ ಇಂಡಿಯಾ, ಇಂಗ್ಲೆಂಡ್ ಸರಣಿಯಾದ್ಯಂತ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಲಿಲ್ಲ. ಏಕದಿನ ಸರಣಿಯ ಉದ್ದಕ್ಕೂ ಅವರು ಬೆಂಚ್‌ ಕಾಯಬೇಕಾಯಿತು. ಹೀಗಾಗಿ ಇಂಗ್ಲೆಂಡ್‌ನಲ್ಲಿ ಕುಲ್ದೀಪ್​ಗೆ ಅವಕಾಶ ನೀಡದಿದ್ದಕ್ಕಾಗಿ ಮಾಜಿ ಕ್ರಿಕೆಟಿಗರು ಮ್ಯಾನೇಜ್ಮೆಂಟ್ ನಿರ್ಧಾರವನ್ನು ಟೀಕಿಸಿದ್ದರು. ಅಲ್ಲದೆ ಟೀಂ ಇಂಡಿಯಾ ಕೂಡ ಏಕದಿನ ಸರಣಿಯನ್ನು ಸೋತಿತ್ತು(PC-PTI).

3 / 5
ಇದೀಗ ಅದೇ ಇಂಗ್ಲೆಂಡ್​ನಲ್ಲಿ ಸಿಕ್ಕ ಅವಕಾಶವನ್ನು ಕುಲ್ದೀಪ್ ಸದುಪಯೋಗಪಡಿಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಕುಲ್ದೀಪ್ ಮುಂದಿನ ಕೆಲವು ಪಂದ್ಯಗಳನ್ನು ಯಾರ್ಕ್‌ಷೈರ್ ತಂಡದ ಪರ ಆಡಲಿದ್ದಾರೆ. ಈ ತಂಡದಲ್ಲಿ ಕುಲ್ದೀಪ್ ಹೊರತಾಗಿ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್‌ರಂತಹ ಸ್ಟಾರ್ ಆಟಗಾರರೂ ಇದ್ದಾರೆ(PC-PTI).

4 / 5
ಇಂಗ್ಲೆಂಡ್‌ ನೆಲದಲ್ಲಿ ಕುಲ್ದೀಪ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿದರೆ, ಅವರಿಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಗುವುದು ಖಚಿತ. ಏಕೆಂದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು, ತಂಡದಲ್ಲಿ ಅನುಭವಿ ಸ್ಪಿನ್ನರ್​ನ ಕೊರತೆಯಿದೆ. ಹೀಗಾಗಿ ಕುಲ್ದೀಪ್ ತಮ್ಮ ಹಳೆಯ ಲಯಕ್ಕೆ ಮರಳಿದರೆ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ(PC-PTI).

5 / 5
Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!

ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್

‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ

ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ

ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ

ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!

ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ

ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ

ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ