AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿ ನೋಡಲು ಬಂದ ಅಭಿಮಾನಿಗಳಿಂದ ಕೊಲ್ಕತ್ತಾ ಸ್ಟೇಡಿಯಂನಲ್ಲಿ ದಾಂಧಲೆ

ಮೆಸ್ಸಿ ನೋಡಲು ಬಂದ ಅಭಿಮಾನಿಗಳಿಂದ ಕೊಲ್ಕತ್ತಾ ಸ್ಟೇಡಿಯಂನಲ್ಲಿ ದಾಂಧಲೆ

ಝಾಹಿರ್ ಯೂಸುಫ್
|

Updated on:Dec 13, 2025 | 2:54 PM

Share

ಅರ್ಜೆಂಟೀನಾ ಫುಟ್​ಬಾಲ್​ ತಾರೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ ನಡೆದ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಅರ್ಜೆಂಟೀನಾ ಫುಟ್​ಬಾಲ್ ತಾರೆ ಮೈದಾನದಿಂದ ತೆರಳಿದ್ದಾರೆ.

ಅರ್ಜೆಂಟೀನಾ ಫುಟ್​ಬಾಲ್​ ತಾರೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗೋಟ್  ಇಂಡಿಯಾ ಟೂರ್​ನ ಕಾರ್ಯಕ್ರಮದ ಭಾಗವಾಗಿ ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಅರ್ಜೆಂಟೀನಾ ಫುಟ್​ಬಾಲ್ ತಾರೆ ಮೈದಾನದಿಂದ ತೆರಳಿದ್ದಾರೆ.

ಇತ್ತ ಟಿಕೆಟ್ ಖರೀದಿಸಿ ಮೆಸ್ಸಿಯನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದ್ದು, ಕಾರ್ಯಕ್ರಮ ಆಯೋಜಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಮೆಸ್ಸಿ ಫ್ಯಾನ್ಸ್​ ಕ್ರೀಡಾಂಗಣದೊಳಗೆ ಬಾಟಲಿಗಳನ್ನು ಎಸೆಯಲಾರಂಭಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಹುಚ್ಚಾಟ ಮೆರೆದಿದ್ದಾರೆ.

ಅಷ್ಟೇ ಅಲ್ಲದೆ ಮೈದಾನಕ್ಕೆ ನುಗಿದ್ದ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಇತ್ತ ಅಭಿಮಾನಿಗಳ ಹುಚ್ಚಾಟ ಮುಗಿಲು ಮುಟ್ಟುತ್ತಿದ್ದಂತೆ ಕೊಲ್ಕತ್ತಾ ಪೊಲೀಸರು ಲಾಠಿ ಚಾರ್ಜ್ ನಡೆಸಲಾರಂಭಿಸಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಆ ಬಳಿಕ ಸ್ಟೇಡಿಯಂನಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

 

 

 

Published on: Dec 13, 2025 01:30 PM