AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್ ಅಣುಕು ಹರಾಜು: ಗ್ರೀನ್​ಗೆ 21 ಕೋಟಿ, ಸ್ಮಿತ್ ಅನ್​ಸೋಲ್ಡ್​

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜಿನಲ್ಲಿ ಒಟ್ಟು 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರಿಂದ ಪ್ರಮುಖರನ್ನು ಟಾಪ್-5 ಸೆಟ್​ಗಳಲ್ಲಿ ವಿಂಗಡಿಸಲಾಗಿದೆ. ಪ್ರಮುಖ ಆಟಗಾರರ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಅನ್​ಕ್ಯಾಪ್ಡ್​ ಪ್ಲೇಯರ್ಸ್​ಗಳ ಹರಾಜು ನಡೆಯಲಿದೆ.

IPL 2026: ಐಪಿಎಲ್ ಅಣುಕು ಹರಾಜು: ಗ್ರೀನ್​ಗೆ 21 ಕೋಟಿ, ಸ್ಮಿತ್ ಅನ್​ಸೋಲ್ಡ್​
Ipl 2026
ಝಾಹಿರ್ ಯೂಸುಫ್
|

Updated on:Dec 13, 2025 | 12:32 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯಲ್ಲಿ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಹರಾಜಿಗೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ತಮ್ಮ ಯುಟ್ಯೂಬ್ ಚಾನೆಲ್​ನಲ್ಲಿ ಮೋಕ್ ಆಕ್ಷನ್ ಆಯೋಜಿಸಿದ್ದಾರೆ. ಈ ಅಣುಕು ಹರಾಜಿನಲ್ಲಿ ಮೂವರು ಆಟಗಾರರು 15 ಕೋಟಿ ರೂ.ಗಿಂತ ದೊಡ್ಡ ಮೊತ್ತಕ್ಕೆ ಬಿಡ್ ಆಗಿರುವುದು ವಿಶೇಷ.

ಮೂವರ ಮೇಲೆ ಕೋಟಿ ಸುರಿಮಳೆ:

ಅಣುಕು ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್  ಅಣುಕು ಪ್ರತಿನಿಧಿಗಳ ನಡುವೆ ನಡೆದ ಈ ಪೈಪೋಟಿಯಲ್ಲಿ ಅಂತಿಮವಾಗಿ ಗೆದ್ದಿದ್ದು ಸಿಎಸ್​ಕೆ.

ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 21 ಕೋಟಿ ರೂ. ವ್ಯಯಿಸುವ ಮೂಲಕ ಕ್ಯಾಮರೋನ್ ಗ್ರೀನ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಖರೀದಿಗೂ ಪ್ರಮುಖ ಫ್ರಾಂಚೈಸಿಗಳ ನಡುವೆ ಪೈಫಟಿ ಕಂಡು ಬಂದಿದೆ. ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್​ 18.5 ಕೋಟಿ ರೂ.ಗೆ ಲಿವಿಂಗ್​ಸ್ಟೋನ್​ನನ್ನು ಖರೀದಿಸಿದೆ.

ಹಾಗೆಯೇ ಭಾರತದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್ ಅವರ ಮೇಲೂ ಬಿಡ್ಡಿಂಗ್ ಸುರಿಮಳೆಯಾಗಿದೆ. ಇದಾಗ್ಯೂ 17.5 ಕೋಟಿ ರೂ.ಗೆ ವೆಂಕಿಯನ್ನು ಮರಳಿ ಪಡೆಯುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿಯಾಗಿದೆ.  ಈ ಅಣುಕು ಪ್ರದರ್ಶನದ ಆಧಾರದ ಮೇಲೆ ನೋಡಿದರೆ ಈ ಬಾರಿಯ ಹರಾಜಿನಲ್ಲಿ ಈ ಮೂವರಿಗಾಗಿ ಭರ್ಜರಿ ಪೈಪೋಟಿ ಕಂಡು ಬರಲಿದೆ.

ಪೃಥ್ವಿ ಶಾ ಸೋಲ್ಡ್-ಸ್ಮಿತ್ ಅನ್​ಸೋಲ್ಡ್​:

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದ ಪೃಥ್ವಿ ಶಾ ಅವರ ಖರೀದಿಗೆ ಈ ಬಾರಿ ಫ್ರಾಂಚೈಸಿಗಳು ಆಸಕ್ತಿ ತೋರುವ ಸಾಧ್ಯತೆಯಿದೆ. ಏಕೆಂದರೆ ಅಣುಕು ಹರಾಜಿನಲ್ಲೇ ಪೃಥ್ವಿ ಅವರ ಖರೀದಿಗೆ ಕೆಲ ಫ್ರಾಂಚೈಸಿಗಳು ಮುಂದಾಗಿದೆ. ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ಅಂತಿಮವಾಗಿ 5.25 ಕೋಟಿ ರೂ. ನೀಡಿ ಪೃಥ್ವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಯುವ ಸ್ಪಿನ್ನರ್ ರವಿಬಿಷ್ಣೋಯ್ ಅವರ ಖರೀದಿಗೂ ಹೆಚ್ಚಿನ ಆಸಕ್ತಿ ತೋರಲಿದ್ದಾರೆ ಎಂಬುದು ಅಣುಕು ಹರಾಜಿನ ಮೂಲಕ ಬಹಿರಂಗವಾಗಿದೆ. ಇಲ್ಲಿ ಸ್ಪಿನ್ನರ್​ಗಳ ಕೊರತೆ ಅನುಭವಿಸುತ್ತಿರುವ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಿಷ್ಣೋಯ್ ಅವರನ್ನು ಖರೀದಿಸುವ ಸಾಧ್ಯತೆಯಿದೆ. ಏಕೆಂದರೆ ಮೋಕ್ ಆಕ್ಷನ್​ನಲ್ಲಿ ಬಿಷ್ಣೋಯ್​ಗಾಗಿ ಎಸ್​ಆರ್​ಹೆಚ್​ ಬರೋಬ್ಬರಿ 10.5 ಕೋಟಿ ರೂ. ವ್ಯಯಿಸಿದೆ.

ಇದನ್ನೂ ಓದಿ: IPL 2026: 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ ಭಾರತದ ಇಬ್ಬರು ಆಟಗಾರರು

ಮತ್ತೊಂದೆಡೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟಿವ್ ಸ್ಮಿತ್ ಈ ಬಾರಿ ಕೂಡ ಹರಾಜಾಗದೇ ಉಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಅನ್​ಸೋಲ್ಡ್ ಆಗಿದ್ದ ಸ್ಮಿತ್ ಅವರಿಗಾಗಿ ಬಿಡ್ ಮಾಡಲು ಅಣುಕು ಹರಾಜಿನಲ್ಲೂ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಲ್ಲ ಎಂಬುದು ವಿಶೇಷ.

ಅಶ್ವಿನ್​ ಅವರ ಅಣಕು ಹರಾಜಿನಲ್ಲಿ ಸೋಲ್ಡ್-ಅನ್​ಸೋಲ್ಡ್​ ಆಟಗಾರರು:

  1. ಕ್ಯಾಮರೋನ್ ಗ್ರೀನ್ – 21 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್​)
  2. ಲಿಯಾಮ್ ಲಿವಿಂಗ್‌ಸ್ಟೋನ್ – 18.5 ಕೋಟಿ ರೂ. (ಕೊಲ್ಕತ್ತಾ ನೈಟ್ ರೈಡರ್ಸ್​)
  3. ವೆಂಕಟೇಶ್ ಅಯ್ಯರ್ – 17.5 ಕೋಟಿ ರೂ. (ಕೊಲ್ಕತ್ತಾ ನೈಟ್ ರೈಡರ್ಸ್​)
  4. ರವಿ ಬಿಷ್ಣೋಯ್ – 10.5 ಕೋಟಿ ರೂ. (ಸನ್​ರೈಸರ್ಸ್ ಹೈದರಾಬಾದ್)
  5. ಜೇಸನ್ ಹೋಲ್ಡರ್ – 9 ಕೋಟಿ ರೂ. (ಲಕ್ನೋ ಸೂಪರ್ ಜೈಂಟ್ಸ್​)
  6. ಮಥೀಶ ಪತಿರಾಣ – 7 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್​)
  7. ಪೃಥ್ವಿ ಶಾ – 5.25 ಕೋಟಿ ರೂ. (ಕೊಲ್ಕತ್ತಾ ನೈಟ್ ರೈಡರ್ಸ್​)
  8. ಡೇವಿಡ್ ಮಿಲ್ಲರ್ – 4.5 ಕೋಟಿ ರೂ. (ಪಂಜಾಬ್ ಕಿಂಗ್ಸ್​)
  9. ಜಾನಿ ಬೈರ್‌ಸ್ಟೋವ್ – 3.75 ಕೋಟಿ ರೂ. (ಕೊಲ್ಕತ್ತಾ ನೈಟ್ ರೈಡರ್ಸ್​)
  10. ಟಿಮ್ ಸೈಫರ್ಟ್​ – 3 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್​)
  11. ಬೆನ್ ಡಕೆಟ್ – 4 ಕೋಟಿ ರೂ. (ಕೊಲ್ಕತ್ತಾ ನೈಟ್ ರೈಡರ್ಸ್​)
  12. ಜೇಮಿ ಸ್ಮಿತ್ – 3.75 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್​)
  13. ಆಕಾಶ್ ದೀಪ್ – 3.25 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್​)
  14. ಆಕಿಬ್ ನಬಿ – 3 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್​).
  15. ವನಿಂದು ಹಸರಂಗ – 2 ಕೋಟಿ ರೂ. (ಲಕ್ನೋ ಸೂಪರ್ ಜೈಂಟ್ಸ್​)
  16. ರಚಿನ್ ರವೀಂದ್ರ – 2.25 ಕೋಟಿ ರೂ. (ಪಂಜಾಬ್ ಕಿಂಗ್ಸ್​)
  17. ಮುಸ್ತಫಿಝುರ್ ರೆಹಮಾನ್ – 3.5 ಕೋಟಿ ರೂ. (ರಾಯಲ್ ಚಾಲೆಂಜರ್ಸ್​ ಬೆಂಗಳೂರು)
  18. ಅನ್ರಿಕ್ ನೋಕಿಯ – 3 ಕೋಟಿ ರೂ. (ಸನ್​ರೈಸರ್ಸ್ ಹೈದರಾಬಾದ್)
  19. ರಾಹುಲ್ ಚಹರ್ – 3.25 ಕೋಟಿ ರೂ. (ರಾಜಸ್ಥಾನ್ ರಾಯಲ್ಸ್​)
  20. ಜೋಶ್ ಇಂಗ್ಲಿಸ್ – 2 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್​)
  21. ಅಕೀಲ್ ಹುಸೇನ್ – 2 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್​)
  22. ಅಭಿನವ್ ಮನೋಹರ್ – 1.75 ಕೋಟಿ ರೂ (ಲಕ್ನೋ ಸೂಪರ್ ಜೈಂಟ್ಸ್​)
  23. ಸ್ಟೀವ್ ಸ್ಮಿತ್ – ಅನ್‌ಸೋಲ್ಡ್
  24. ಡೆವೊನ್ ಕಾನ್ವೇ – ಅನ್​ಸೋಲ್ಡ್
  25. ಜೇಕ್ ಫ್ರೇಸರ್ ಮೆಕ್‌ಗರ್ಕ್ – ಅನ್‌ಸೋಲ್ಡ್

Published On - 12:30 pm, Sat, 13 December 25