ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Lionel Messi) ದಕ್ಷಿಣ ಅಮೆರಿಕಾದ ತಂಡ ಬ್ರೆಜಿಲ್ ಅನ್ನು ಸೋಲಿಸಿ ಕೋಪಾ ಅಮೇರಿಕಾ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. ಆದರೆ ಮೆಸ್ಸಿ ಈಗ ಭಾರತೀಯ ಅಭಿಮಾನಿಗಳ ಹೃದಯದಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳುವ ಹಂತದಲ್ಲಿದ್ದಾರೆ. ಈಗ ಭಾರತದೆಲ್ಲೆಡೆ ಸಖತ್ ಸುದ್ದಿ ಮಾಡುತ್ತಿದೆ ಮೆಸ್ಸಿ ಬೀಡಿ ಪ್ಯಾಕೆಟ್. ಬೀಡಿ, ತಂಬಾಕು ಪದರಗಳಿಂದ ತುಂಬಿದ ತೆಳುವಾದ ಸಿಗರೇಟ್ ಮತ್ತು ಸಾಮಾನ್ಯವಾಗಿ ಟೆಂಡು ಎಲೆಗಳಲ್ಲಿ ಸುತ್ತಿಡಲ್ಪಟ್ಟಿರುತ್ತದೆ. ಈಗ ತಂಬಾಕು ಉತ್ಪನ್ನ ಪ್ಯಾಕೆಟ್‌ನಲ್ಲಿರುವ 34 ವರ್ಷದ ಫುಟ್‌ಬಾಲ್ ಆಟಗಾರ ಮೆಸ್ಸಿ ಫೋಟೋ ವೈರಲ್ ಆಗಿದೆ. ಕಪ್ಪು, ಹಳದಿ ಮತ್ತು ಬಿಳಿ ಬಣ್ಣಗಳಲ್ಲಿ ಮೆಸ್ಸಿಯ ನಗುತ್ತಿರುವ ಫೋಟೋದೊಂದಿಗೆ ಪ್ಯಾಕೆಟ್ ಮೇಲೆ ಮೆಸ್ಸಿ ಬೀಡಿ ಎಂದು ಸ್ಟ್ಯಾಂಪ್ ಮಾಡಲಾಗಿದೆ.
ಟ್ವಿಟರ್ ಬಳಕೆದಾರ ರಿಪಿನ್ ಶರ್ಮಾ ಈ ವಿಚಾರವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮಾಷೆಯ ಹೆಡ್ಡಿಂಗ್ ನೀಡಿದ್ದು, ಭಾರತದಲ್ಲಿ ಮೆಸ್ಸಿಯ ಮೊದಲ ಅನುಮೋದನೆ ಎಂದು ಬರೆದುಕೊಂಡಿದ್ದಾರೆ. ಈಗ ಈ ಫೋಟೋ ಸಖತ್ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಈ ಫೋಟೋವನ್ನಿಟ್ಟುಕೊಂಡು ನಾನಾ ರೀತಿಯ ಟ್ರೋಲ್ ಮಾಡುತ್ತಿದ್ದಾರೆ.
Messi's first endorsement in India
☺️☺️☺️☺️☺️ pic.twitter.com/07vh7bTMwC— Rupin Sharma IPS (@rupin1992) July 13, 2021
ಉಚಿತ ವ್ಯಾಕ್ಸಿನೇಷನ್ ಚಾಲನೆ ನೀಡಲು ಸಹಾಯ
ಇತ್ತೀಚೆಗೆ ನಡೆದ ಒಂದು ಪ್ರತ್ಯೇಕ ಘಟನೆಯಲ್ಲಿ, ಕೇರಳದ ಬೀಡಿ ಕಾರ್ಮಿಕರೊಬ್ಬರು ತಮ್ಮ ಸಂಪೂರ್ಣ ಉಳಿತಾಯವನ್ನು ಮುಖ್ಯಮಂತ್ರಿಯವರ ನಿಧಿಗೆ ದೇಣಿಗೆ ನೀಡಿ ರಾಜ್ಯಕ್ಕೆ ಉಚಿತ ವ್ಯಾಕ್ಸಿನೇಷನ್ ಚಾಲನೆ ನೀಡಲು ಸಹಾಯ ಮಾಡಿದರು. ಅವರ ಉಪಕಾರ ಕೃತ್ಯವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಂಚಿಕೊಂಡಿದ್ದು, ಶನಿವಾರ ಸಂಜೆ ಟ್ವೀಟ್ನಲ್ಲಿ ಆತನ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಭಾರತದ ಅನೇಕ ರಾಜ್ಯಗಳಲ್ಲಿನ ಸ್ಥಳೀಯ ಕಾರ್ಖಾನೆಗಳು ಈ ತಂಬಾಕು ಉತ್ಪನ್ನಗಳನ್ನು ತಯಾರಿಸುತ್ತವೆ ಮತ್ತು ಅವುಗಳ ಬೆಲೆ ತುಂಬಾ ಕಡಿಮೆ. ಬೀಡಿ ಕಾರ್ಖಾನೆಗಳು ಈ ಸಿಗರೇಟುಗಳನ್ನು ಉರುಳಿಸುವ ಮೂಲಕ ಮಹಿಳೆಯರು ಮತ್ತು ಪ್ರತಿದಿನ ಅಲ್ಪ ಮೊತ್ತವನ್ನು ಗಳಿಸುವ ಮಕ್ಕಳನ್ನು ಸಹ ಬಳಸಿಕೊಳ್ಳುತ್ತವೆ. ಆದರೆ ಕೆಲಸದ ಪರಿಸ್ಥಿತಿಗಳ ಕಾರಣದಿಂದಾಗಿ ಅವರು ಹೆಚ್ಚಾಗಿ ಆರೋಗ್ಯದ ಅಪಾಯಗಳನ್ನು ಎದುರಿಸುತ್ತಾರೆ.
Smoke and you will never miss a penalty in life. Special packing for England team. ?? https://t.co/8wH0eK346m
— Vins (@vinayverma99) July 13, 2021
Argentina football star Messi won the Copa America by his country and immediately got a brand to endorse. "Messi Biri"?. Great achievement ? Enjoy ? pic.twitter.com/RaydB0r1DI
— Dipak Pujari (@PujariDipak) July 13, 2021
COPA AMERICA FINAL#ArgentinaVsBrazil
1-0After his first major Cup win for Argentina, Lionel #Messi finally gets his first endorsement contract in India..#MessiBiri pic.twitter.com/dMR36mmUM1
— @Akashtv1Soni (@Akashtv1Soni) July 13, 2021