ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಕೊನೆಯ ಒಲಿಂಪಿಕ್ಸ್ ಆಡುವ ಕನಸು ನುಚ್ಚುನೂರಾಗಿದೆ. ಸೈನಾ ನೆಹ್ವಾಲ್ ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅವರಲ್ಲದೆ, ಮಾಜಿ ವಿಶ್ವ ನಂಬರ್ ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಬಿಡಬ್ಲ್ಯುಎಫ್ ನಿಯಮಗಳ ಪ್ರಕಾರ, ಟಾಪ್ 16 ಆಟಗಾರರು ರೋಡ್ ಟು ಟೋಕಿಯೊ ಶ್ರೇಯಾಂಕದಲ್ಲಿ ನೇರ ಪ್ರವೇಶವನ್ನು ಪಡೆಯುತ್ತಾರೆ. ಇಬ್ಬರೂ ಆಟಗಾರರು ಅಗ್ರ 16 ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.