ರಾಯಚೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟು ಹಬ್ಬವನ್ನು ಅಭಿಮಾನಿಯೊಬ್ಬ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾನೆ. ಜುಲೈ 7 ಕ್ಕೆ 39 ವರ್ಷ ಪೂರೈಸಿ 40 ಕ್ಕೆ ಕಾಲಿಡುತ್ತಿರುವ ಧೋನಿಗೆ ನೇರವಾಗಿ ಉಡುಗೊರೆ ಕೊಡಲು ಆಗುತ್ತಿಲ್ಲ ಅಂತ ಈ ಅಭಿಮಾನಿ ಧೋನಿ ಚಿತ್ರವನ್ನು ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ವಿಜಯನಗರ ಜಿಲ್ಲೆ ಕೂಡ್ಲಿಗಿಯ ವೆಂಕಟೇಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮಹಾ ಅಭಿಮಾನಿ. ರಾಯಚೂರಿನ ಸಿಂಧನೂರು ಮೂಲದ ಟ್ಯಾಟೂ ಕಲಾವಿದ ಶಂಕರ್ ಬದಿ ಅವರು ಧೋನಿ ಟ್ಯಾಟೂವನ್ನು ಬಿಡಿಸಿದ್ದಾರೆ. ಈ ಹಿಂದೆ ಮೋದಿ, ಉಪೇಂದ್ರ, ಯಶ್ ಸೇರಿದಂತೆ ನಾನಾ ಗಣ್ಯ ವ್ಯಕ್ತಿಗಳ ಸುಂದರ ಟ್ಯಾಟೂಗಳ ಮೂಲಕ ಪ್ರಸಿದ್ಧಿಯಾಗಿರುವ ಶಂಕರ್ ಬದಿ ಎಂಬ ಕಲಾವಿದರನ್ನು ಹುಡುಕಿಕೊಂಡು ಬಂದು ಬೆಂಗಳೂರಿನ ಸ್ವಾಗತ್ ಟ್ಯಾಟೂ ಸ್ಟುಡಿಯೋದಲ್ಲಿ ವೆಂಕಟೇಶ್ ಧೋನಿಯ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಧೋನಿ ಹುಟ್ಟುಹಬ್ಬವನ್ನು ಕೇವಲ ಕೇಕ್ ಕತ್ತರಿಸುವ ಮೂಲಕ ಆಚರಿಸದರೆ ಮುಗಿಯುವುದಿಲ್ಲ. ಹೀಗಾಗಿ ಕೊನೆಯವರೆಗೂ ಧೋನಿ ಜೊತೆಯಲ್ಲಿರಬೇಕು ಅಂತ ಅಭಿಮಾನಿ ವೆಂಕಟೇಶ್ ತಮ್ಮ ಬಲ ಗೈ ಮೇಲೆ ಎಂ.ಎಸ್.ಧೋನಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಧೋನಿ ಕೇವಲ ಉತ್ತಮ ನಾಯಕ ಮಾತ್ರವಲ್ಲ ಉತ್ತಮ ಗೇಮ್ ಫಿನಿಶರ್, ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಿದೆ. ಟೀಂ ಇಂಡಿಯಾ ಟಿ20 ವರ್ಲ್ಡ್ ಕಪ್ ಗೆದ್ದಿದ್ದು ಧೋನಿ ನಾಯಕತ್ವದಲ್ಲಿ, ಹೀಗಾಗಿ ಧೋನಿ ಮೇಲಿನ ಅಭಿಮಾನಕ್ಕೆ ಟ್ಯಾಟೋ ಹಾಕಿಸಿಕೊಳ್ಳುತ್ತಿರುವುದಾಗಿದೆ ವೆಂಕಟೇಶ್ ಹೇಳಿದ್ದಾರೆ.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಧೋನಿ ಮನೆಗೆ ಬಂದ ತಿಳಿ ನೀಲಿ ಸುಂದರಿ! ಪತಿಯ ಉಡುಗೊರೆಗೆ ಸಾಕ್ಷಿ ಫುಲ್ ಫೀದಾ
ಧೋನಿಯ ದಾಂಪತ್ಯ ಜೀವನಕ್ಕೆ ಭರ್ತಿ 11 ವರ್ಷ; ಈ ಜೋಡಿ ಹಕ್ಕಿಗಳ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ?
Published On - 8:26 am, Wed, 7 July 21