ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಧೋನಿ ಮನೆಗೆ ಬಂದ ತಿಳಿ ನೀಲಿ ಸುಂದರಿ! ಪತಿಯ ಉಡುಗೊರೆಗೆ ಸಾಕ್ಷಿ ಫುಲ್ ಫೀದಾ

ಸಾಕ್ಷಿ, ಧೋನಿ ಅವರನ್ನು ಮದುವೆಯಾಗಿ 11 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಗೆ ದೊಡ್ಡ ವಿಂಟೇಜ್ ಕಾರನ್ನು ಉಡುಗೊರೆಯಾಗಿ ನೀಡಿದರು.

ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಧೋನಿ ಮನೆಗೆ ಬಂದ ತಿಳಿ ನೀಲಿ ಸುಂದರಿ! ಪತಿಯ ಉಡುಗೊರೆಗೆ ಸಾಕ್ಷಿ ಫುಲ್ ಫೀದಾ
ಕುಟುಂಬದೊಂದಿಗೆ ಧೋನಿ
Follow us
ಪೃಥ್ವಿಶಂಕರ
| Updated By: ರಶ್ಮಿ ಕಲ್ಲಕಟ್ಟ

Updated on:Jul 05, 2021 | 10:05 AM

ಇಂದು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿವಾಹ ವಾರ್ಷಿಕೋತ್ಸವ. ಸಾಕ್ಷಿ, ಧೋನಿ ಅವರನ್ನು ಮದುವೆಯಾಗಿ 11 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಗೆ ದೊಡ್ಡ ವಿಂಟೇಜ್ ಕಾರನ್ನು ಉಡುಗೊರೆಯಾಗಿ ನೀಡಿದರು. ಸಾಕ್ಷಿ ಧೋನಿ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ಉಡುಗೊರೆಯ ಬಗ್ಗೆ ಮಾಹಿತಿ ನೀಡಿದರು. ಸಾಕ್ಷಿ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಧೋನಿಗೆ ವಾರ್ಷಿಕೋತ್ಸವದ ಉಡುಗೊರೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಈ ಕಾರು ತಿಳಿ ನೀಲಿ ಮತ್ತು ಬಿಳಿ ಬಣ್ಣದ್ದಾಗಿದೆ. ಕಾರು ಯಾವ ಕಂಪನಿ ಮತ್ತು ಯಾವ ಮಾದರಿಗೆ ಸೇರಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ತುಂಬಾ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಧೋನಿ ಸಾಕ್ಷಿ ಅವರನ್ನು ಜುಲೈ 4, 2010 ರಂದು ಡೆಹ್ರಾಡೂನ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ಕುಟುಂಬ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು.

ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಕ್ಷಿ ಇನ್ನೂ ಅನೇಕ ಸಂಗತಿಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಧೋನಿ ಈಗಾಗಲೇ ಅನೇಕ ಕಾರುಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಹೊಸ ಮತ್ತು ಹಳೆಯ ಎರಡೂ ಮಾದರಿಗಳು ಸೇರಿವೆ. ಇದಲ್ಲದೆ, ಅವರು ಬೈಕುಗಳ ದೊಡ್ಡ ಸಂಗ್ರಹವನ್ನೂ ಸಹ ಹೊಂದಿದ್ದಾರೆ. ಇತ್ತೀಚೆಗೆ ಎಂ.ಎಸ್.ಧೋನಿ ಕುದುರೆಯೊಂದನ್ನು ಸಹ ಖರೀದಿಸಿದ್ದಾರೆ. ಸಾಕ್ಷಿ ಧೋನಿ ಕೂಡ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಬಗ್ಗೆ ತಿಳಿಸಿದ್ದರು. ಇದಕ್ಕೂ ಮುನ್ನ 2019 ರಲ್ಲಿ ಧೋನಿ ಜೀಪ್ ಕಂಪನಿಯ ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಕಾರನ್ನು ಖರೀದಿಸಿದ್ದರು. ಈ ಕಾರಿನ ಬೆಲೆ ಸುಮಾರು 1.5 ಕೋಟಿ ರೂಪಾಯಿಗಳು.

dhoni-new-car

ಧೋನಿಯ ಹೊಸ ಕಾರು

ಧೋನಿ ಅನೇಕ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ ನಂತರ 2020 ರಲ್ಲಿ ಅವರು ಟ್ರಾನ್ಸ್-ಆಮ್ ಸರಣಿಯ ಕಾರನ್ನು ಸಹ ಖರೀದಿಸಿದರು. ಈ ಕಾರನ್ನು ಮೂಲತಃ ಅಮೆರಿಕದಲ್ಲಿ ರೇಸಿಂಗ್‌ನಲ್ಲಿ ಬಳಸಲಾಗುತ್ತದೆ. ಧೋನಿ ಪೊಟಿನೆಕ್ ಫೈರ್‌ಬರ್ಡ್ ಟ್ರಾನ್ಸ್-ಆಮ್ ಕಾರನ್ನು ಖರೀದಿಸಿದ್ದರು. ಇದರ ಬೆಲೆ ಸುಮಾರು 70 ಲಕ್ಷ ರೂ. ಇವುಗಳಲ್ಲದೆ, ಧೋನಿ ಪೋರ್ಚೆ 911, ಫೆರಾರಿ 599 ಜಿಟಿಒ, ಹಮ್ಮರ್ ಎಚ್ 2, ನಿಸ್ಸಾನ್ ಜೊಂಗಾ, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಮತ್ತು ಆಡಿ ಕ್ಯೂ 7 ನಂತಹ ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ.

ಧೋನಿ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ಕೊನೆಯ ಬಾರಿಗೆ 2019 ರ ಕ್ರಿಕೆಟ್ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಪರ ಆಡಿದ್ದರು. ಆ ಪಂದ್ಯದಲ್ಲಿ ಧೋನಿ 50 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿದ್ದಾರೆ.

Published On - 8:14 pm, Sun, 4 July 21