ಟೆಸ್ಟ್ ಕ್ರಿಕೆಟ್ ಆಡಲು ತಮ್ಮ ರಾಷ್ಟ್ರೀಯ ತಂಡ ಆಯ್ಕೆಯಾಗುವ ಆಟಗಾರರು ಪದಾರ್ಪಣೆಯ ಟೆಸ್ಟ್ನಲ್ಲಿ ಮಿಂಚಿದ ಉದಾಹರಣೆಗಳು ಜಾಸ್ತಿಯಿಲ್ಲ. ಚೊಚ್ಚಲು ಟೆಸ್ಟ್ನಲ್ಲೇ ಶತಕ ಬಾರಿಸಿದ ಅಥವಾ 5 ವಿಕೆಟ್ ಪಡೆಯುವ ಸಾಧನೆ ಮಾಡಿದ ಆಟಗಾರರು ಬೆರಳಣಿಕೆಯಷ್ಟು ಮಾತ್ರ. ಹಾಗೆಯೇ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕುದುರಿಕೊಂಡ ಆಟಗಾರರೆಲ್ಲ ತಾವಾಡುವ ಪ್ರತಿ ಪಂದ್ಯದಲ್ಲಿ ಮಿಂಚಲಾರರು. ಆಟಗಾರನೊಬ್ಬ ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನ ಕರೀಯರ್ನಲ್ಲಿ ಏರಿಳಿತಗಳಿರುತ್ತವೆ. ಬ್ಯಾಟ್ಸ್ಮನ್ಗಳ ಸಾಧನೆಗಳನ್ನೇ ಒಮ್ಮೆ ಗಮನಿಸಿ. ಕೇವಲ ಬ್ಯಾಟಿಂಗ್ ಪಿತಾಮಹ ಡಾನ್ ಬ್ರಾಡ್ಮನ್ಗೆ ಮಾತ್ರ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಕಡಿಮೆ 100 ರಷ್ಟು (99.96) ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೆಲವೇ ಕೆಲ ಬ್ಯಾಟ್ಸ್ಮನ್ಗಳನ್ನು ಬಿಟ್ಟರೆ, ಗ್ರೇಟ್, ಲೆಜೆಂಡರಿ ಅಂಕ ಕರೆಸಿಕೊಂಡ ಬ್ಯಾಟ್ಸ್ಮನ್ಗಳ ಕರೀಯರ್ ಸರಾಸರಿ 50ರಿಂದ 58 ರನ್ ಇದೆ. ಇದನ್ನೆಲ್ಲ ಹೇಳುವ ಹಿಂದಿನ ತಾತ್ಪರ್ಯವೆಂದರೆ, ಬ್ಯಾಟ್ಸ್ಮನ್ಗಳ ಸಾಮರ್ಥ್ಯ ಏನೇ ಆಗಿದ್ದರೂ ವೃತ್ತಿಬದುಕಿನಲ್ಲಿ ಸತತವಾಗಿ ರನ್ಗಳಿಸುತ್ತಾ ಸಾಗುವುದು ಸಾಧ್ಯವಾಗುವುದಿಲ್ಲ.
ನಮ್ಮ ಹುಡುಗ ಕೆ ಎಲ್ ರಾಹುಲ್ ಅಪ್ಪಟ ಪ್ರತಿಭಾವಂತ ಅನ್ನುವುದರಲ್ಲಿ ಎರಡು ಮಾತಿಲ್ಲ. ನೀವೊಂದು ಅಂಶ ಗಮನಿಸರಬಹುದು. ಒಬ್ಬ ಬ್ಯಾಟ್ಸ್ಮನ್ನಲ್ಲಿ ಪ್ರತಿಭೆ ಹೇರಳವಾಗಿದ್ದರೆ, ಅವನು ಯಾವುದೇ ಫಾರ್ಮಾಟ್ಗೆ ಒಗ್ಗಿಕೊಳ್ಳುತ್ತಾನೆ ಮತ್ತು ಮೂರು ಆವೃತ್ತಿಗಳಲ್ಲೂ ಸರಾಗವಾಗಿ ರನ್ ಗಳಿಸುತ್ತಾನೆ. ರಾಹುಲ ಅಂಥ ಆಟಗಾರರರಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರಿಗೆ ವಿಪುಲ ಅವಕಾಶಗಳು ಸಿಗುತ್ತಿಲ್ಲವಾದರೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವರು ಟೀಮಿನ ಖಾಯಂ ಸದಸ್ಯ.
ಅವರ ಟೆಸ್ಟ್ ಕರೀಯರ್ ಹೇಗೆ ಆರಂಭವಾಯಿತೆನ್ನುವುದು ನಿಮಗೆ ನೆನಪಿದೆಯಾ? 2014 ರಲ್ಲಿ ಭಾರತ ಡೌನ್ ಅಂಡರ್ ಪ್ರವಾಸ ಹೋಗಿದ್ದಾಗ ಮೆಲ್ಬರ್ನ್ (ಎಮ್ಸಿಜಿ) ಟೆಸ್ಟ್ನಲ್ಲಿ ಅವರು ಡೆಬ್ಯೂ ಮಾಡಿದರು. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂಕ್ಕಿಂತ ಮೊದಲು ಎಮ್ಸಿಜಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿತ್ತು. ಈ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ರಾಹುಲ್ ರನ್ ಗಳಿಸಲು ವಿಫಲಾಗಿ ತೀವ್ರ ಹತಾಷೆಗೊಳಗಾಗಿದ್ದರು.
ಮುಂದಿನ ಟೆಸ್ಟ್ಗೆ ಸೆಲಕ್ಟ್ ಆಗಲಾರೆ, ತನ್ನ ಕರೀಯರ್ ಇನ್ನು ಮುಗೀತು, ಅಂತ ಖಿನ್ನರಾಗಿ ರಾಹುಲ್ ಹೋಟೆಲ್ನ ತಮ್ಮ ರೂಮಿನಲ್ಲಿ ಕೂತಿದ್ದಾಗ ಅಲ್ಲಿಗೆ ಅಗಮಿಸಿದ ಅನುಷ್ಕಾ ಶರ್ಮ (ಆಗ ಅವರನ್ನೂ ವಿರಾಟ್ ಕೊಹ್ಲಿಯವರ ಗರ್ಲ್ ಫ್ರೆಂಡ್ಮಾತ್ರ ಆಗಿದ್ದರು) ತನ್ನ ಮತ್ತು ವಿರಾಟ್ ಜೊತೆ ಡಿನ್ನರ್ ಮಾಡುವುದಕ್ಕೆ ಆಹ್ವಾನಿಸಿದರು.
ಮುಂದಿನ ಕತೆಯನ್ನು ರಾಹುಲ್ ಅವರ ಬಾಯಿಂದಲೇ ಕೇಳಿ.
‘ಅವರಿಬ್ಬರ (ಅನುಷ್ಕಾ ಮತ್ತು ವಿರಾಟ್) ಒಳ್ಳೆಯತನವನ್ನು ನಾನ್ಯಾವತ್ತೂ ಮರೆಯಲಾರೆ. ಅವರ ನನಗೆ ಮಾಡಿದ ಉಪಕಾರದ ಕತೆಯನ್ನು ನಿಮಗೆ ಹೇಳಬೇಕಿದೆ. ಮೆಲ್ಬರ್ನ್ ಪಂದ್ಯ ನೋಡಲು ಅನುಷ್ಕಾ ಬಂದಿದ್ದರು. ಸದರಿ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಫೇಲಾದ ನಂತರ ನಾನು ಹತಾಷಗೊಳಗಾಗಿರುವುದನ್ನು ಆಕೆ ಗಮನಿಸಿದ್ದರು. ನನ್ನ ಟೆಸ್ಟ್ ಕರೀಯರ್ ಮಗೀತು ಅಂತ ನಾನು ಯೋಚಿಸುತ್ತಾ ರೂಮಿನಲ್ಲಿ ಕೂತಿದ್ದಾಗ ಆಕೆ ಅಲ್ಲಿಗೆ ಬಂದು, ನೀವು ಹೀಗೆ ತಲೆ ಮೇಲೆ ಕೈ ಹೊತ್ತು ಕೂರೋದನ್ನು ನಾನು ನೋಡಲಾರೆ. ದಿನವಿಡೀ ಕ್ರಿಕೆಟ್ ಬಗ್ಗೆ ಮಾತ್ರ ಯೋಚಿಸುವುದು ಸರಿಯಲ್ಲ. ನಾನು ಮತ್ತು ವಿರಾಟ್ ರಾತ್ರಿ ಊಟಕ್ಕೆ ನಿಮ್ಮನ್ನು ಹೊರಗೆ ಕರೆದೊಯ್ಯಲು ನಿರ್ಧರಿಸಿದ್ದೇವೆ, ಬೇಗ ರೆಡಿಯಾಗಿ ಅಂತ ಹೇಳಿದರು,’ ಎಂದು ರಾಹುಲ್ ಓಪನ್ ಹೌಸ್ ವಿದ್ ರೆನಿಲ್ ಕಾರ್ಯಕ್ರಮದಲ್ಲಿ ರಾಹುಲ್ ಹೇಳಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಜೊತೆ ಸಮಯ ಕಳೆದ ನಂತರ ತನ್ನಲ್ಲಿ ಮನೆ ಮಾಡಿದ್ದ ಹತಾಷೆ ಮಾಯವಾಯಿತು ಎಂದು ಅವರು ಹೇಳಿದ್ದಾರೆ.
ನಿಮಗೆ ನೆನಪಿರಬಹುದು, ಮುಂದಿನ ಟೆಸ್ಟ್ನಲ್ಲೇ ರಾಹುಲ್ ಅಮೋಘ ಶತಕ ಬಾರಿಸಿದರು. ಅದಾಗಿ ಈಗ ಹೆಚ್ಚು ಕಡಿಮೆ 6 ವರ್ಷ ಕಳೆದಿವೆ. ರಾಹುಲ್ ಇದುವರೆಗೆ 36 ಟೆಸ್ಟ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿ 5 ಶತಕ ಮತ್ತು 11 ಅರ್ಧ ಶತಕಗಳೊಂದಿಗೆ 2000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈಗ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ 5 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ರಾಹುಲ್ ಟೀಮಿನ ಭಾಗವಾಗಿದ್ದರೆ, ಆರಂಭ ಆಟಗಾರ ಶುಭ್ಮನ್ ಗಿಲ್ಗೆ ಗಾಯದ ಸಮಸ್ಯೆ ಕಾಡುತ್ತಿರವುದರಿಂದ ಕನ್ನಡಿಗ ಆಡುವ ಎಲೆವೆನ್ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸುಲಭ ಸೋಲನ್ನಪ್ಪಿದ ನಂತರ ತೀವ್ರ ಸ್ವರೂಪದ ಟೀಕೆಗೆ ಗುರಿಯಗಿರುವ ವಿರಾಟ್ ಕೊಹ್ಲಿ ಮತ್ತು ಟೀಮ್ ಕೆರಳಿದ ಸಿಂಹಗಳಂತಾಗಿದ್ದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಸರಣೆಯಲ್ಲಿ ಟೀಮ್ ಪುಟಿದೇಳುವ ಸಾಧ್ಯತೆಯಂತೂ ಇದ್ದೇ ಇದೆ.
ಇದನ್ನೂ ಓದಿ: Virat Kohli, Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಳಿ ಇರುವ 4 ಅತಿ ದುಬಾರಿ ವಸ್ತುಗಳಿವು!