Virat Kohli, Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಳಿ ಇರುವ 4 ಅತಿ ದುಬಾರಿ ವಸ್ತುಗಳಿವು!

Virushka: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅತಿ ಶ್ರೀಮಂತ ಭಾರತೀಯ ಸೆಲೆಬ್ರಿಟಿಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿರುಷ್ಕಾ ಜೋಡಿಯ ಬಳಿ ಇರುವ ಐದು ದುಬಾರಿ ವಸ್ತುಗಳೇನು ಎಂದು ನೋಡೋಣ.

Virat Kohli, Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಳಿ ಇರುವ 4 ಅತಿ ದುಬಾರಿ ವಸ್ತುಗಳಿವು!
ಪತ್ನಿ ಅನುಷ್ಕಾ ಮತ್ತು ಮಗಳೊಂದಿಗೆ ವಿರಾಟ್​ ಕೊಹ್ಲಿ
Follow us
TV9 Web
| Updated By: ganapathi bhat

Updated on:Sep 05, 2021 | 10:45 PM

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರತದ ಫೇವರಿಟ್ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು ಎಂದು ಮರುಯೋಚಿಸದೆ ಹೇಳಬಹುದು. ಅಭಿಮಾನಿಗಳಿಂದ ವಿರುಷ್ಕಾ ಎಂದು ಕರೆಯಲ್ಪಡುವ ಸೆಲೆಬ್ರಿಟಿ ಜೋಡಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.‌ ಇತ್ತೀಚೆಗೆ ಮಗಳು ವಮಿಕಾ ಕಾರಣಕ್ಕೆ ವಿರಾಟ್- ಅನುಷ್ಕಾ ದಂಪತಿ ಹೆಸರು ಕೇಳಿಬಂದಿತ್ತು. ಬಾಲಿವುಡ್ ನಟಿ, ನಟನೆಯ ಮೂಲಕ ಜನರ ಪ್ರೀತಿ ಪಡೆದ ಅನುಷ್ಕಾ ಹಾಗೂ ಕ್ರಿಕೆಟ್ ಜಗತ್ತಿನ ಇಂದಿನ ಪ್ರಮುಖ ಹೆಸರು ವಿರಾಟ್ ಕೊಹ್ಲಿ ಹಲವು ಯುವಜನರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಮೋಸ್ಟ್ ವ್ಯಾಲ್ಯುಯೇಬಲ್ ಸೆಲೆಬ್ರಿಟಿ ಲಿಸ್ಟ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರು‌. ಅತಿ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರ ಫೋರ್ಬ್ಸ್ ಪಟ್ಟಿಯಲ್ಲೂ ಕೊಹ್ಲಿ ಸ್ಥಾನ ಪಡೆದಿದ್ದರು. ಫೊರ್ಬ್ಸ್‌ನ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕ್ರಿಕೆಟಿಗನಾಗಿಯೂ ಹೊರಹೊಮ್ಮಿದ್ದರು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅತಿ ಶ್ರೀಮಂತ ಭಾರತೀಯ ಸೆಲೆಬ್ರಿಟಿಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿರುಷ್ಕಾ ಜೋಡಿಯ ಬಳಿ ಇರುವ ಐದು ದುಬಾರಿ ವಸ್ತುಗಳೇನು ಎಂದು ನೋಡೋಣ.

ಕೊಹ್ಲಿ ಬಳಿ ಇದೆ ದುಬಾರಿ ರೋಲೆಕ್ಸ್ ವಾಚ್ ವಿರಾಟ್ ಕೊಹ್ಲಿ ಬಳಿ ದುಬಾರಿ ರೋಲೆಕ್ಸ್ ವಾಚ್ ಇದೆ. ಅದರ ಬೆಲೆ ಎಷ್ಟು ಅಂದರೆ ನೀವು ಒಂದುಕ್ಷಣ ಗಾಬರಿಯಾಗಬಹುದು. ಹೌದು. ಕೊಹ್ಲಿ ಸಮಯ ನೋಡುವ ರೋಲೆಕ್ಸ್ ವಾಚ್ ಬೆಲೆ ಬರೋಬ್ಬರಿ 87 ಲಕ್ಷ. ಈ ಕೈಗಡಿಯಾರವನ್ನು ರೋಲೆಕ್ಸ್ ಸ್ಪಾನ್ಸರ್ ಮಾಡಿದೆ ಎನ್ನಲಾಗುತ್ತದೆ. ಆನ್ ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್‌ನ ಸ್ಟೈಲಿಷ್ ಆಟಗಾರ ಕೊಹ್ಲಿ ಬಳಿ ಜೆನೆವಾ ಮೂಲದ ವಾಚ್ ತಯಾರಿಕ ಕಂಪೆನಿ ರೋಲೆಕ್ಸ್‌ನ ಹಲವು ವಾಚ್‌ಗಳಿವೆ. ಅವರ ಇನ್‌ಸ್ಟಾಗ್ರಾಂ ಖಾತೆ ಗಮನಿಸಿದರೆ ಈ ವಿಚಾರ ತಿಳಿಯುತ್ತದೆ.

ಕೊಹ್ಲಿ- ಅನುಷ್ಕಾ ಶ್ರೀಮಂತ ಮನೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನೆ ಬಹುದುಬಾರಿಯಾದದ್ದು. ಬಹುಮೂಲಗಳ ಮಾಹಿತಿ ಪ್ರಕಾರ ಅನುಷ್ಕಾ- ವಿರಾಟ್ ನಿವಾಸ 34 ಕೋಟಿ ರೂಪಾಯಿಯದ್ದಾಗಿದೆ. ಮುಂಬೈನಲ್ಲಿ ಈ ಮನೆಯಿದೆ. ಕೆಲವು ಬೆಡ್‌ರೂಂಗಳು, ಖಾಸಗಿ ಟೆರೇಸ್, ಗಾರ್ಡನ್ ಏರಿಯಾ ಹಾಗೂ ಜಿಮ್ ಹೊಂದಿದೆ. ವಿರುಷ್ಕಾ ಜೋಡಿಯ ಕನಸಿನ ಮನೆ ಓಮ್‌ಕಾರ್ ರಿಯಲ್ಟರ್ಸ್ ಹಾಗೂ ಡೆವೆಲಪರ್ಸ್‌ ಯೋಜನೆಯ ಟವರ್ ಸಿನ 35ನೇ ಮಹಡಿಯಲ್ಲಿದೆ! ಸುಮಾರು 7,171 ಸ್ಕ್ವಾರ್ ಫೀಟ್ ವಿಸ್ತಾರವಾಗಿದೆ. ಮುಂಬೈ ನಗರ ಹಾಗೂ ಸಮುದ್ರವನ್ನೂ ಈ ಮನೆಯಿಂದ ನೋಡಬಹುದಾಗಿದೆ.

ಕೊಹ್ಲಿ ಬಳಿ ಇದೆ ಕಾಸ್ಟ್ಲಿ ಕಾರ್ ಕೊಹ್ಲಿ- ಅನುಷ್ಕಾ ಜೋಡಿ ತಮ್ಮ ಮಗಳು ವಮಿಕಾಳನ್ನು ಸ್ವಾಗತಿಸುವ ಮುನ್ನ, 2021 ಆರಂಭದಲ್ಲಿ ಕ್ಲಿನಿಕಲ್ ಟೆಸ್ಟ್‌ಗೆ ಎಂದು ಬಂದಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಕೊಹ್ಲಿ ಹಾಗೂ ಅನುಷ್ಕಾ ಸೂಪರ್ ಕಾರ್ ಒಂದರಲ್ಲಿ ಬಂದದ್ದು ಟಾಕ್ ಆಫ್ ದಿ ಟೌನ್ ಆಗಿತ್ತು. ಬೆಂಟ್ಲಿ ಕಾಂಟಿನೆಂಟಲ್‌ ಎಂಬ ಕಾರ್‌ನಲ್ಲಿ ಅವರು ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ಕಾರ್‌ನ ಬೆಲೆ ಎಷ್ಟಾಗಬಹುದು? ಅಂತೀರಾ.. ಸುಮಾರು 3.40 ಇಂದ 4.60 ಕೋಟಿ!

ಅನುಷ್ಕಾ ಕಾರ್ ಯಾವುದು ಗೊತ್ತಾ? ಅನುಷ್ಕಾ ಶರ್ಮಾ ಬಳಿ ಕೂಡ ಕಾಸ್ಟ್ಲಿ ಕಾರ್ ಒಂದಿದೆ. ಸ್ಟೈಲಿಷ್ ಕಾರ್‌ನಲ್ಲಿ ಓಡಾಡುವ ವಿಷಯಕ್ಕೆ ಬಂದಾಗ ಅನುಷ್ಕಾ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ಲ್ಯಾಂಡ್ ರೋವರ್, ರೇಂಜ್ ರೋವರ್ ಹೊಂದಿರುವ ಸೆಲೆಬ್ರಿಟಿ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ‌ ಕೂಡ ಇದ್ದಾರೆ. ಇಂಡಿಯಾ ಟುಡೇ ಮಾಹಿತಿ ಪ್ರಕಾರ, ಅನುಷ್ಕಾ ಶರ್ಮಾ ಲಕ್ಸುರಿ ಎಸ್‌ಯುವಿ ಕಾರ್, ರೇಂಜ್ ರೋವರ್ ಅಟೊಬಯೊಗ್ರಫಿ ಹೊಂದಿದ್ದಾರೆ. ಇದರ ಬೆಲೆ ಸುಮಾರು 4 ಕೋಟಿ!

ಇದನ್ನೂ ಓದಿ: IPL 2021: ಸಿಎಸ್​ಕೆ ವಿರುದ್ಧ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ದಂಡದ ಬರೆ! ಮತ್ತೆ ಈ ತಪ್ಪಾದರೆ ವಿರಾಟ್​ಗೆ ಒಂದು ಪಂದ್ಯದಿಂದ ಗೇಟ್ ಪಾಸ್

ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

Published On - 3:46 pm, Tue, 27 April 21

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ