Cristiano Ronaldo: ಅಬ್ಬಬ್ಬಾ…! ರೊನಾಲ್ಡೊ ಒಂದು ಸಹಿಯಿಂದ ಗಳಿಸುವ ಆದಾಯ ಬರೋಬ್ಬರಿ 2400 ಕೋಟಿ..!

| Updated By: ಪೃಥ್ವಿಶಂಕರ

Updated on: Jul 15, 2022 | 6:57 PM

Cristiano Ronaldo: ವರದಿಗಳ ಪ್ರಕಾರ, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗುತ್ತಾರೆ. ಆದರೆ, ಯಾವ ಕ್ಲಬ್ ಅವರಿಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಿದೆ ಎಂಬುದಿನ್ನು ಬಹಿರಂಗವಾಗಿಲ್ಲ.

Cristiano Ronaldo: ಅಬ್ಬಬ್ಬಾ...! ರೊನಾಲ್ಡೊ ಒಂದು ಸಹಿಯಿಂದ ಗಳಿಸುವ ಆದಾಯ ಬರೋಬ್ಬರಿ 2400 ಕೋಟಿ..!
37 ವರ್ಷದ ರೊನಾಲ್ಡೊ ಅವರು 20 ವರ್ಷಗಳ ಹಿಂದೆ ಸ್ಪೋರ್ಟಿಂಗ್ ಲಿಸ್ಬನ್‌ನೊಂದಿಗೆ ತಮ್ಮ ಕ್ಲಬ್ ಫುಟ್‌ಬಾಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ 20 ವರ್ಷಗಳಲ್ಲಿ, ಅವರು ಸ್ಪೋರ್ಟಿಂಗ್ ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್‌ ಕ್ಲಬ್ ತಂಡಗಳಿಗಾಗಿ ಆಡಿದ್ದಾರೆ. ಒಟ್ಟು 944 ಪಂದ್ಯಗಳನ್ನು ಆಡಿರುವ ರೊನಾಲ್ಡೊ 700 ಗೋಲುಗಳನ್ನು ಗಳಿಸಿದ್ದಾರೆ.
Follow us on

ಸೌದಿ ಅರೇಬಿಯಾದಲ್ಲಿನ ಫುಟ್ಬಾಲ್ ಕ್ಲಬ್​ವೊಂದು ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊಗೆ (Cristiano Ronaldo) 300 ಮಿಲಿಯನ್ ಯುರೋಗಳ (ಸುಮಾರು ರೂ. 2400 ಕೋಟಿ) ಒಪ್ಪಂದವನ್ನು ನೀಡಿದೆ. ವರದಿಗಳ ಪ್ರಕಾರ, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗುತ್ತಾರೆ. ಆದರೆ, ಯಾವ ಕ್ಲಬ್ ಅವರಿಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಿದೆ ಎಂಬುದಿನ್ನು ಬಹಿರಂಗವಾಗಿಲ್ಲ. ಕೆಲವು ದಿನಗಳ ಹಿಂದೆ ಅವರು ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ ಪರ ಆಡಲು ಬಯಸುವುದಾಗಿ ಹೇಳಿಕೊಂಡಿದ್ದರು.

ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ವಿಫಲವಾಗಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಅವರು ಥೈಲ್ಯಾಂಡ್‌ನಲ್ಲಿ ತಂಡದೊಂದಿಗೆ ಫ್ರೀ ಸೆಷನ್ ತರಬೇತಿಯಲ್ಲಿ ಭಾಗವಹಿಸಿರಲಿಲ್ಲ. ಆದಾಗ್ಯೂ, ಕ್ಲಬ್‌ನ ಕೋಚ್ ಎರಿಕ್ ಟೆನ್ ಹಾಗ್ ಅವರು ರೊನಾಲ್ಡೊ ಅವರೊಂದಿಗೆ ಮಾತನಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕ್ಲಬ್ ಇನ್ನೂ ರೊನಾಲ್ಡೊ ಬಿಡುಗಡೆ ಮಾಡಬೇಕಾಗಿದೆ. ಆದರೆ ಈ ಸೀಸನ್​ನಲ್ಲಿ ರೊನಾಲ್ಡೊ ತಂಡದ ಕಾರ್ಯತಂತ್ರದ ಭಾಗವಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ವರ್ಷ ಒಪ್ಪಂದ ಮುಗಿಯಲಿದೆ

ಇದನ್ನೂ ಓದಿ
NZ vs IRE: ಒಂದು ಟವಲ್​ನಿಂದ ಮಿಸ್ಸಾಯ್ತು ವಿಕೆಟ್; ಔಟ್ ನೀಡಿ ಬಳಿಕ ನಾಟೌಟ್ ಎಂದ ಅಂಪೈರ್! ವಿಡಿಯೋ ನೋಡಿ
Mohammed Shami: ಇಂಜುರಿ, ವೈಯಕ್ತಿಕ ಸಮಸ್ಯೆ, ಕಳಪೆ ಪ್ರದರ್ಶನಗಳ ನಡುವೆ ಬೌಲಿಂಗ್​ನಲ್ಲಿ ಅದ್ಭುತ ದಾಖಲೆ ಬರೆದ ಶಮಿ
IND vs ENG: ಭಾರತೀಯರೇ ತೆಗಳುತ್ತಿರುವಾಗ ಕೊಹ್ಲಿ ಬೆನ್ನಿಗೆ ನಿಂತ ಪಾಕ್ ನಾಯಕ ಬಾಬರ್; ಹೇಳಿದ್ದೇನು ಗೊತ್ತಾ?

ಇಂಗ್ಲಿಷ್ ಕ್ಲಬ್‌ನೊಂದಿಗಿನ ಅವರ ಒಪ್ಪಂದವು ಮುಂದಿನ ವರ್ಷ ಜೂನ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ರೊನಾಲ್ಡೊ ಬಯಸಿದರೆ ಕ್ಲಬ್‌ನೊಂದಿಗಿನ ಅವರ ಒಪ್ಪಂದವನ್ನು ವಿಸ್ತರಿಸಲು ಅವಕಾಶವಿದೆ. ಆದರೆ 37 ವರ್ಷದ ಫುಟ್ಬಾಲ್ ಆಟಗಾರ ಕ್ಲಬ್ ತೊರೆಯಲು ಮನಸ್ಸು ಮಾಡಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರೊನಾಲ್ಡೊ ಕ್ಲಬ್ ತೊರೆಯುತ್ತಿದ್ದಾರೆ ಎಂದು ಹಲವು ವದಂತಿಗಳು ಹಬ್ಬಲು ಆರಂಭಿಸಿವೆ.

ರೊನಾಲ್ಡೊ ಚೆಲ್ಸಿಯಾಗೆ ಹೋಗದಿರಬಹುದು

ಕಳೆದ ವಾರ ಇಂಗ್ಲೆಂಡ್ ತಂಡದ ಫಾರ್ವರ್ಡ್ ಆಟಗಾರ ರಹೀಂ ಸ್ಟಿರ್ಲಿಂಗ್‌ಗೆ ಚೆಲ್ಸಿಯಾ ಕ್ಲಬ್​ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಈ ಕ್ಲಬ್ ರೊನಾಲ್ಡೊ ಜೊತೆಗಿನ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ. ಆದಾಗ್ಯೂ, ಬೇಯರ್ನ್ ಮ್ಯೂನಿಚ್ ಮತ್ತು ಅಟ್ಲೆಟಿಕೊ ಮ್ಯಾಡ್ರಿಡ್ ಕ್ಲಬ್​ಗಳು ಇನ್ನೂ ರೊನಾಲ್ಡೊಗೆ ಸಹಿ ಹಾಕುವ ಸ್ಪರ್ಧೆಯಲ್ಲಿವೆ.

ಒಂದು ವರ್ಷದ ಹಿಂದೆ ಯುನೈಟೆಡ್‌ ಕ್ಲಬ್ ಸೇರಿದ್ದ ರೊನಾಲ್ಡೊ

ಪೋರ್ಚುಗೀಸ್ ಸ್ಟಾರ್ ರೊನಾಲ್ಡೊ ಒಂದು ವರ್ಷದ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್​ಗೆ ಮರಳಿದ್ದರು. ಆದರೆ, ಅವರ ಎರಡನೇ ಸೀಸನ್ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಕಳೆದ ಸೀಸನ್​ನಲ್ಲಿ ರೊನಾಲ್ಡೊ ಇಂಗ್ಲಿಷ್ ಕ್ಲಬ್‌ ಪರ 18 ಗೋಲುಗಳನ್ನು ಗಳಿಸಿದರು. ಆದಾಗ್ಯೂ, ಕ್ಲಬ್ ಪ್ರೀಮಿಯರ್ ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿತು. ಜೊತೆಗೆ ಚಾಂಪಿಯನ್ಸ್ ಲೀಗ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.