NZ vs IRE: ಒಂದು ಟವಲ್​ನಿಂದ ಮಿಸ್ಸಾಯ್ತು ವಿಕೆಟ್; ಔಟ್ ನೀಡಿ ಬಳಿಕ ನಾಟೌಟ್ ಎಂದ ಅಂಪೈರ್! ವಿಡಿಯೋ ನೋಡಿ

NZ vs IRE: ರನ್-ಅಪ್ ಸಮಯದಲ್ಲಿ ಬೌಲರ್ ಟಿಕ್ನರ್, ಬಾಲ್ ಒರೆಸಲು ಇಟ್ಟುಕೊಂಡಿದ್ದ ಟವಲ್ ಅನ್ನು ಬೀಳಿಸಿದ ಕಾರಣ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು.

NZ vs IRE: ಒಂದು ಟವಲ್​ನಿಂದ ಮಿಸ್ಸಾಯ್ತು ವಿಕೆಟ್; ಔಟ್ ನೀಡಿ ಬಳಿಕ ನಾಟೌಟ್ ಎಂದ ಅಂಪೈರ್! ವಿಡಿಯೋ ನೋಡಿ
NZ vs IRE
Follow us
TV9 Web
| Updated By: ಪೃಥ್ವಿಶಂಕರ

Updated on: Jul 15, 2022 | 6:04 PM

ಮೈದಾನದಲ್ಲಿ ಅಂಪೈರ್ ತನ್ನ ನಿರ್ಧಾರವನ್ನು ಬದಲಾಯಿಸುವುದು ಕ್ರಿಕೆಟ್‌ನಲ್ಲಿ ಅಪರೂಪ. ಜೊತೆಗೆ ಅಂಪೈರ್ ಒಮ್ಮೆ ಬ್ಯಾಟ್ಸ್‌ಮನ್‌ ಔಟ್ ಎಂದು ತೀರ್ಪು ನೀಡಿದ ಬಳಿಕ, ಆ ಅಂಪೈರ್ ಆ ನಿರ್ಧಾರವನ್ನು ಬದಲಾಯಿಸುವುದು ಕೂಡ ಅಪರೂಪ. ಆದರೆ, ಈ ಅಪರೂಪದ ಘಟನೆಗೆ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ (NZ vs IRE) ನಡುವಿನ ಎರಡನೇ ODI ಪಂದ್ಯ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ಮೂರು ವಿಕೆಟ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಆದರೆ ಈ ಪಂದ್ಯದ ವೇಳೆ ಅಂಪೈರ್ ಮೊದಲು ಬ್ಯಾಟ್ಸ್‌ಮನ್‌ ಔಟ್ ಎಂದು ತೀರ್ಪು ನೀಡಿದರು ಆದರೆ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿ, ಬ್ಯಾಟ್ಸ್‌ಮನ್​ಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಐರ್ಲೆಂಡ್ ಬ್ಯಾಟ್ಸ್‌ಮನ್‌ ಸಿಮಿ ಸಿಂಗ್, ನ್ಯೂಜಿಲೆಂಡ್ ಬೌಲರ್ ಬ್ಲೇರ್ ಟಿಕ್ನರ್ ಅವರ ಎಸೆತವನ್ನು ಆಡುವ ಯತ್ನದಲ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್​ ನೀಡಿದರು. ಅಂಪೈರ್​ ಕೂಡ ಅದು ಔಟ್ ಎಂದು ತೀರ್ಪು ನೀಡಿದರು. ಆದರೆ ನಂತರ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು. ಇದಕ್ಕೆ ಕಾರಣ ಕ್ರಿಕೆಟ್ ಕಾನೂನು.

ವಾಸ್ತವವಾಗಿ ಕಿವೀಸ್ ವೇಗಿ ಟಿಕ್ನರ್ ಆಫ್-ಸ್ಟಂಪ್‌ನ ಹೊರಗೆ ಬೌಲ್ ಮಾಡಿದ ಚೆಂಡು ಸಿಮಿ ಸಿಂಗ್ ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಕೀಪರ್ ಟಾಮ್ ಲ್ಯಾಥಮ್ ಅವರ ಕೈಗೆ ಹೋಯಿತು. ಕ್ಯಾಚ್ ತೆಗೆದುಕೊಳ್ಳುವಲ್ಲಿ ಲ್ಯಾಥಮ್ ಕೂಡ ಯಾವುದೇ ತಪ್ಪು ಮಾಡಲಿಲ್ಲ. ನ್ಯೂಜಿಲೆಂಡ್ ತಂಡ ಕೂಡಲೇ ಅಂಪೈರ್ ಬಳಿ ಬ್ಯಾಟರ್​ ಔಟ್​ಗೆ ಮನವಿ ಸಲ್ಲಿಸಿತು. ಅಂಪೈರ್ ಕೂಡ ಮನವಿಯನ್ನು ಸ್ವೀಕರಿಸಿದರು, ಆದರೆ ಸ್ವಲ್ಪ ಸಮಯದ ನಂತರ ತನ್ನ ನಿರ್ಧಾರವನ್ನು ಬದಲಾಯಿಸಿದರು.

ಇದನ್ನೂ ಓದಿ
Image
IND vs ENG: ಭಾರತೀಯರೇ ತೆಗಳುತ್ತಿರುವಾಗ ಕೊಹ್ಲಿ ಬೆನ್ನಿಗೆ ನಿಂತ ಪಾಕ್ ನಾಯಕ ಬಾಬರ್; ಹೇಳಿದ್ದೇನು ಗೊತ್ತಾ?
Image
ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
Image
IND vs WI: ರೋಹಿತ್ ಶರ್ಮಾ ಹೊಗಳುವ ಆಟಗಾರರಿಗೆಲ್ಲ ಸಿಗ್ತಿದೆ ತಂಡದಿಂದ ಕೋಕ್! ಏನಿದರ ಮರ್ಮ?

ಇದು ಕಾರಣ

ರನ್-ಅಪ್ ಸಮಯದಲ್ಲಿ ಬೌಲರ್ ಟಿಕ್ನರ್, ಬಾಲ್ ಒರೆಸಲು ಇಟ್ಟುಕೊಂಡಿದ್ದ ಟವಲ್ ಅನ್ನು ಬೀಳಿಸಿದ ಕಾರಣ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ನಿಯಮಗಳ ಪ್ರಕಾರ ನಿರ್ಧಾರ ಬದಲಿಸಿದ್ದು ಸರಿಯಾಗಿಯೇ ಇತ್ತು. ನಿಯಮ 20.4.2.6′ ಪ್ರಕಾರ, “ಸ್ಟ್ರೈಕರ್ ಯಾವುದೇ ಶಬ್ದ ಅಥವಾ ಚಲನೆಯಿಂದ ತೊಂದರೆಗೊಳಗಾದರೆ ಅಥವಾ ಚೆಂಡನ್ನು ಆಡುವ ಮೊದಲು ಅಥವಾ ಆಡುವಾಗ ತೊಂದರೆಗಳೊಗಾದರೆ ಆ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಬಹುದು. ಹೀಗಾಗಿ ಬೌಲರ್ ಬೌಲಿಂಗ್ ಮಾಡುವ ವೇಳೆ ಟವಲ್ ಬೀಳಿಸಿದ ಕಾರಣದಿಂದ ಐರ್ಲೆಂಡ್ ಬ್ಯಾಟರ್ ಔಟಾಗಿದ್ದರೂ, ನಾಟೌಟ್ ಆಗಿ ಉಳಿಯಲು ಸಾಧ್ಯವಾಯಿತು.

ಆಟದ ಬಗ್ಗೆ ಮಾತನಾಡುವುದಾದರೆ, ನ್ಯೂಜಿಲೆಂಡ್ ಈ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಬೋರ್ಡ್ ಮೇಲೆ 216 ರನ್ ಗಳಿಸಿ ಬಂಡಲ್ ಔಟ್ ಆಗಿತ್ತು. ಜಾರ್ಜ್ ಡಾಕ್ರೆಲ್ 61 ಎಸೆತಗಳಲ್ಲಿ 74 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪ್ರತ್ಯುತ್ತರವಾಗಿ, ಫಿನ್ ಅಲೆನ್ ಅವರ 60 ಮತ್ತು ಟಾಮ್ ಲ್ಯಾಥಮ್ ಅವರ 55 ರನ್ಗಳ ನೆರವಿನಿಂದ ನ್ಯೂಜಿಲೆಂಡ್ ಇನ್ನೂ 71 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು.