IND vs WI: ರೋಹಿತ್ ಶರ್ಮಾ ಹೊಗಳುವ ಆಟಗಾರರಿಗೆಲ್ಲ ಸಿಗ್ತಿದೆ ತಂಡದಿಂದ ಕೋಕ್! ಏನಿದರ ಮರ್ಮ?

IND vs WI: ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ ಬರಲಿದೆ. ಟಿ20 ವಿಶ್ವಕಪ್ ದೃಷ್ಟಿಯಲ್ಲಿ ನಾವು ಇದನ್ನೆಲ್ಲ ಮಾಡಲು ಬಯಸುತ್ತೇವೆ. ಉಮ್ರಾನ್ ಒಬ್ಬ ಶ್ರೇಷ್ಠ ಬೌಲರ್ ಎಂದು ರೋಹಿತ್ ಹೊಗಳಿದ್ದರು.

IND vs WI: ರೋಹಿತ್ ಶರ್ಮಾ ಹೊಗಳುವ ಆಟಗಾರರಿಗೆಲ್ಲ ಸಿಗ್ತಿದೆ ತಂಡದಿಂದ ಕೋಕ್! ಏನಿದರ ಮರ್ಮ?
Rohit Sharma
Follow us
TV9 Web
| Updated By: ಪೃಥ್ವಿಶಂಕರ

Updated on:Jul 14, 2022 | 4:33 PM

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ (Team India) ಪ್ರಕಟವಾಗಿದೆ. ಆಯ್ಕೆದಾರರು 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ, ಇದರಲ್ಲಿ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದರಲ್ಲಿ ಒಬ್ಬ ಮ್ಯಾಚ್-ವಿನ್ನರ್ ಅನ್ನು ತಂಡದಿಂದ ಕೈಬಿಡಲಾಗಿದೆ. ಟೀಂ ಇಂಡಿಯಾದಿಂದ ಕೈಬಿಟ್ಟಿರುವ ಆಟಗಾರನೆಂದರೆ ಅದು ಉಮ್ರಾನ್ ಮಲಿಕ್ (Umran Malik). ಈ ಬಲಗೈ ವೇಗದ ಬೌಲರ್ ಐಪಿಎಲ್ 2022 ರಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ತಂಡಕ್ಕೆ ಆಯ್ಕೆಯಾಗಿದ್ದರು. ಆದಾಗ್ಯೂ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಅವರ ಪ್ರದರ್ಶನವು ವಿಶೇಷವಾಗಿರಲಿಲ್ಲ. ಈಗ ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಗೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದರರ್ಥ ಉಮ್ರಾನ್ ಇಂಗ್ಲೆಂಡ್‌ನಿಂದ ನೇರವಾಗಿ ಭಾರತಕ್ಕೆ ಮರಳಲಿದ್ದು, ತಂಡದ ಇತರ ಸದಸ್ಯರು ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳಸಲಿದ್ದಾರೆ.

ಉಮ್ರಾನ್ ಇಂಗ್ಲೆಂಡ್-ಐರ್ಲೆಂಡ್‌ನಲ್ಲಿ ಫ್ಲಾಪ್

ಇದನ್ನೂ ಓದಿ
Image
IND vs WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ! ಮೂವರು ಇನ್, ನಾಲ್ವರು ಔಟ್
Image
Breaking News: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಕೊಹ್ಲಿ, ಬುಮ್ರಾಗೆ ವಿಶ್ರಾಂತಿ
Image
ICC T20 Rankings: 44 ಸ್ಥಾನ ಜಿಗಿದು ಟಾಪ್ 5ನೇ ಸ್ಥಾನಕ್ಕೆ ಸೂರ್ಯಕುಮಾರ್ ಎಂಟ್ರಿ; ಟಾಪ್ 20ರಲ್ಲೂ ಇಲ್ಲ ಕೊಹ್ಲಿ..!

ಉಮ್ರಾನ್ ಮಲಿಕ್ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಆದರೆ ಈ ಪಂದ್ಯಗಳಲ್ಲಿ ಅವರು ಎರಡು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಯಿತು. ಸಮಸ್ಯೆಯೆಂದರೆ ಅವರ ಎಕಾನಮಿ ದರ ಪ್ರತಿ ಓವರ್‌ಗೆ 12.44 ರನ್ ಆಗಿತ್ತು. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಉಮ್ರಾನ್ 4 ಓವರ್​ಗಳಲ್ಲಿ 56 ರನ್ ಬಿಟ್ಟುಕೊಟ್ಟಿದ್ದರು.

ಆದರೆ ಈ ಹಿಂದೆ ರೋಹಿತ್ ಶರ್ಮಾ ಉಮ್ರಾನ್ ಮಲಿಕ್ ಅವರನ್ನು ಹೊಗಳಿದ್ದರು . ಉಮ್ರಾನ್ ನಮ್ಮ ಯೋಜನೆಗಳ ಭಾಗವಾಗಿದ್ದಾರೆ ಎಂದು ರೋಹಿತ್ ಹೇಳಿದ್ದರು. ಜೊತೆಗೆ ಉಮ್ರಾನ್​ಗೆ ಬೇಕಾದ ತಿಳುವಳಿಕೆಯನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ ಬರಲಿದೆ. ಟಿ20 ವಿಶ್ವಕಪ್ ದೃಷ್ಟಿಯಲ್ಲಿ ನಾವು ಇದನ್ನೆಲ್ಲ ಮಾಡಲು ಬಯಸುತ್ತೇವೆ. ಉಮ್ರಾನ್ ಒಬ್ಬ ಶ್ರೇಷ್ಠ ಬೌಲರ್ ಎಂದು ರೋಹಿತ್ ಹೊಗಳಿದ್ದರು. ಆದರೆ, ರೋಹಿತ್ ಶರ್ಮಾ ಹೊಗಳಿದ ನಂತರವೇ ಉಮ್ರಾನ್ ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡಲಾಗಿದೆ. ಈ ಹಿಂದೆ ರೋಹಿತ್, ಸಂಜು ಸ್ಯಾಮ್ಸನ್​ರನ್ನು ಹೊಗಳಿದ್ದರು. ಆದರೆ ಅವರಿಗೂ ತಂಡದಲ್ಲಿ ಕಾಯಂ ಸ್ಥಾನ ಸಿಗಲಿಲ್ಲ. ಜೊತೆಗೆ ಹಲವರು ಕೊಹ್ಲಿಯನ್ನು ತೆಗಳುತ್ತಿದ್ದರೆ, ರೋಹಿತ್ ಮಾತ್ರ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದರು. ಆದರೆ ಕೊಹ್ಲಿಯನ್ನು ಸಹ ತಂಡದಿಂದ ಕೈಬಿಡಲಾಗಿದೆ ಎಂದು ಹಲವು ನೆಟ್ಟಿಗರು ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.​

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ

ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಕೆಎಲ್ ರಾಹುಲ್ (ಫಿಟ್ನೆಸ್ ಅವಲಂಬಿಸಿ), ಕುಲದೀಪ್ ಯಾದವ್ (ಫಿಟ್ನೆಸ್ ಅವಲಂಬಿಸಿರುತ್ತದೆ)

Published On - 4:33 pm, Thu, 14 July 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್