IPL 2021: ಪಾಂಡೆ ಬೌಂಡರಿ ಮತ್ತು ಸಿಕ್ಸ್ರಗಳನ್ನು ಬಾರಿಸಲು ಅಸಫಲರಾಗಿದ್ದೇ ಹೈದರಾಬಾದ್ ಸೋಲಿಗೆ ಕಾರಣಯಿತು: ಸೆಹ್ವಾಗ್
ಪಾಂಡೆ ಚೆನ್ನಾಗಿ ಆಡಿದ್ದು ನಿರ್ವಿವಾದಿತ. ಆದರೆ, ಅದು ಅವರ ಖ್ಯಾತಿಗೆ ತಕ್ಕ ಆಟವಾಗಿರಲಿಲ್ಲ. ಟಿ20 ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಅವರು ಬಹಳ ವರ್ಷಗಳಿಂದ ಆಡುತ್ತಿದ್ದಾರೆ. ಈ ಪಂದ್ಯಗಳಲ್ಲಿ ಬಹಳ ಯೋಜಿತವಾಗಿ ಬ್ಯಾಟ್ ಮಾಡಬೇಕಾಗುತ್ತದೆ. ದುರ್ಬಲ ಎಸೆತಗಳಿಗೆ ಕಾಯುವಷ್ಟು ಸಮಯ ಇಲ್ಲಿರುವುದಿಲ್ಲ. ಉತ್ತಮ ಎಸೆತಗಳನ್ನೇ ಬೌಂಡರಿಗಟ್ಟುವ ಅವಶ್ಯಕತೆ ಇರುತ್ತದೆ.
ಸನ್ರೈಸರ್ಸ್ ಹೈದರಾಬಾದ ತಂಡ ಮತ್ತು ಕೊಲ್ಕತಾ ನೈಟ್ರೈಡರ್ಸ್ ನಡುವೆ ನಿನ್ನೆ ಚೆನೈನ ಎಮ್ ಎ ಚಿದಂಬರಂ ಮೈದಾನದಲ್ಲಿ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ 14ನೇ ಸೀಸನ್ನಿನ ಮೂರನೇ ಪಂದ್ಯದಲ್ಲಿ ಕೊಲ್ಕತಾ 10 ರನ್ಗಳ ಗೆಲುವು ಸಾಧಿಸಿತು. ಆದರೆ, ಹೈದರಾಬಾದ್ ಟೀಮಿನ ಮನೀಶ್ ಪಾಂಡೆ ಮತ್ತು ಜಾನಿ ಬೇರ್ಸ್ಟೋ ಬ್ಯಾಟ್ ಮಾಡುತ್ತಿದ್ದಾಗ ದಕ್ಷಿಣದ ತಂಡವೇ ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬೇರ್ಸ್ಟೋ ಔಟಾದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು. ಪಂದ್ಯ ಕೊನೆಗೊಂಡಾಗ 61 ರನ್ಗಳೊಂದಿಗೆ ಅಜೇಯರಾಗಿ ಉಳಿದ ಪಾಂಡೆ ಉತ್ತಮವಾಗಿ ಸೆಟ್ಲ್ ಆಗಿದ್ದರೂ ಕೊನೆ ಓವರ್ಗಲ್ಲಿ ಅವರಿಗೆ ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸಿಲಾಗಲಿಲ್ಲ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಇನ್ನೊಂದು ತುದಿಯಲ್ಲಿ ಅವರಿಗೆ ಸರಿಯಾದ ಬೆಂಬಲವೂ ಸಿಗಲಿಲ್ಲ.
ಪಾಂಡೆ ಚೆನ್ನಾಗಿ ಆಡಿದ್ದು ನಿರ್ವಿವಾದಿತ. ಆದರೆ, ಅದು ಅವರ ಖ್ಯಾತಿಗೆ ತಕ್ಕ ಆಟವಾಗಿರಲಿಲ್ಲ. ಟಿ20 ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಅವರು ಬಹಳ ವರ್ಷಗಳಿಂದ ಆಡುತ್ತಿದ್ದಾರೆ. ಈ ಪಂದ್ಯಗಳಲ್ಲಿ ಬಹಳ ಯೋಜಿತವಾಗಿ ಬ್ಯಾಟ್ ಮಾಡಬೇಕಾಗುತ್ತದೆ. ದುರ್ಬಲ ಎಸೆತಗಳಿಗೆ ಕಾಯುವಷ್ಟು ಸಮಯ ಇಲ್ಲಿರುವುದಿಲ್ಲ. ಉತ್ತಮ ಎಸೆತಗಳನ್ನೇ ಬೌಂಡರಿಗಟ್ಟುವ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಚೆನ್ನಾಗಿ ಸೆಟ್ಲ್ ಆಗಿದ್ದ ಪಾಂಡೆ ಅವರು ಕೊನೆಯ ಆರು ಓವರ್ಗಳಲ್ಲಿ ಬಾಂಡರಿ ಬಾರಿಸಲು ವಿಫಲರಾಗಿದ್ದು ಅಕ್ಷಮ್ಯ.
ಭಾರತದ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ಅದನ್ನೇ ಹೇಳಿದ್ದಾರೆ. ಕ್ರಿಕ್ಬಜ್ ವೆಬ್ಸೈಟ್ನೊಂದಿಗೆ ನಡೆಸಿದ ಮಾತುಕತೆಯಲ್ಲಿ ಸೆಹ್ವಾಗ್ ಅವರು ಪಾಂಡೆ ಕೊನೆಯ ಓವರುಗಳಲ್ಲಿ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿದ್ದರೆ ಹೈದರಾಬಾದ ತಂಡ ಸುಲಭವಾಗಿ ಪಂದ್ಯ ಗೆಲ್ಲುತಿತ್ತು ಎಂದು ಹೇಳಿದ್ದಾರೆ. ಪಾಂಡೆ ಬೌಂಡರಿ ಬಾರಿಸುವಲ್ಲಿ ಅಸಫಲರಾಗಿದ್ದೇ ಸೋಲಿಗೆ ಕಾರಣವಾಯಿತು, ಅವರು ಪಂದ್ಯದ ಕೊನೆ ಎಸೆತದಲ್ಲ ಸಿಕ್ಸ್ ಬಾರಿಸಿದ್ದು ಫಲಿತಾಂಶದ ಮೇಲೆ ಬೇರೆ ಪರಿಣಾಮ ಬೀರುವುದು ಸಾಧ್ಯವಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
‘ಪಾಂಡೆ, ಕೆಕೆಆರ್ ವಿರುದ್ಧ ಕೊನೆಯ ಮೂರು ಓವರ್ಗಳಲ್ಲಿ ಒಂದು ಬೌಂಡರಿಯನ್ನೂ ಬಾರಿಸಲಿಲ್ಲ. ಒಂದು ಸಿಕ್ಸರ್ ಸಿಡಿದದ್ದು ಇನ್ನಿಂಗ್ಸ್ನ ಕೊನೆ ಎಸೆತದಲ್ಲಿ. ಆದರೆ ಅಷ್ಟರಲ್ಲಾಗಲೇ ಪಂದ್ಯದ ಫಲಿತಾಂಶ ಗೊತ್ತಾಗಿಬಿಟ್ಟಿತ್ತು. ಪಾಂಡೆ ನಿರ್ಣಾಯಕ ಪಾತ್ರ ವಹಿಸಬಹುದಾಗಿತ್ತು. ಅವರು ಅದಾಗಲೇ ಒತ್ತಡವನ್ನು ಅನುಭವಿಸಿದ್ದರು ಮತ್ತು ಸೆಟ್ಲ್ ಸಹ ಆಗಿದ್ದರು. ಪಾಂಡೆ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿ ಬೌಂಡರಿಗಳನ್ನು ಬಾರಿಸಲು ಮುಂದಾಗಿದ್ದರೆ ಹೈದರಾಬಾದ ತಂಡ ಪಂದ್ಯ ಸೋಲುತ್ತಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
‘ಕೆಲವೊಮ್ಮೆ ಹಾಗಾಗುತ್ತದೆ. ಚೆನ್ನಾಗಿ ಸೆಟ್ಲ್ ಆಗಿರುವ ಬ್ಯಾಟ್ಸ್ಮನ್ಗೂ ಬೌಂಡರಿಗಟ್ಟುವಂಥ ಎಸೆತಗಳು ಸಿಗೋದಿಲ್ಲ. ಪ್ರಾಯಶಃ ಪಾಂಡೆ ಅವರೊಂದಿಗೂ ಅದೇ ಅಯಿತು. ಅವರ ಜೋನ್ನಲ್ಲಿ ಎಸೆತಗಳು ಸಿಗಲಿಲ್ಲ. ಅವರಿಗೆ ಒಂದು ಸಿಕ್ಸ್ ಬಾರಿಸುವುದೂ ಸಹ ಸಾಧ್ಯವಾಗಲಿಲ್ಲ,’ ಎಂದು ಸೆಹ್ವಾಗ್ ಹೇಳಿದ್ದಾರೆ.
Teams that will have stat padding batsmen end up batting long overs without changing gears quickly will struggle. Depriving hitters and finishers by leaving very less balls and making it very difficult. Happened last year, and such teams will struggle always #IPL
— Virender Sehwag (@virendersehwag) April 11, 2021
ತಮ್ಮ ಟ್ವೀಟ್ನಲ್ಲಿ ಸೆಹ್ವಾಗ್, ‘ಅಂಕಿ-ಅಂಶಗಳ ಹಿನ್ನೆಲೆಯಿಂದ ಉತ್ತಮ ಎನಿಸಿಕೊಳ್ಳುವ ಬ್ಯಾಟ್ಸ್ಮನ್ಗಳು ಬಹಳ ಒವರ್ಗಳನ್ನಾಡಿಯೂ ಗೇರ್ಗಳನ್ನು ಬದಲಾಯಿಸಿ ಸ್ಕೋರಿನ ವೇಗ ಹೆಚ್ಚಿಸಲು ವಿಫಲರಾಗುತ್ತಾರೆ. ಹಾಗಾಗಿ, ಹಿಟ್ಟರ್ಗಳಿಗೆ ಎಸೆತಗಳೇ ಉಳಿಯದಂತಾಗಿಬಿಡುತ್ತದೆ. ಇದು ಕಳೆದ ಐಪಿಎಲ್ನಲ್ಲೂ ಸಂಭವಿಸಿತ್ತು, ಅಂಥ ಅಟಗಾರರನ್ನು ಹೊಂದಿರುವ ಟೀಮುಗಳು ತೊಂದರೆಗೆ ಸಿಕ್ಕಿಕೊಳ್ಳುತ್ತವೆ,’ ಎಂದು ಸೆಹ್ವಾಗ್ ಹೇಳಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು, ಕೆಕೆಆರ್ ತಂಡದ ನಾಯಕ ಅಯಾನ್ ಮೋರ್ಗನ್ ಅವರನ್ನ ರಣನೀತಿಯನ್ನು ಶ್ಲಾಘಿಸಿದ್ದಾರೆ.
‘ಮನೀಶ್ ಪಾಂಡೆ ಅವರು ಮಿಡ್ವಿಕೆಟ್ ಮತ್ತು ಲಾಂಗಾನ್ ಪ್ರದೇಶದಲ್ಲಿ ಹೆಚ್ಚು ರನ್ ಗಳಿಸುತ್ತಾರೆ. ಮಿಡ್ವಿಕೆಟ್ ಫೀಲ್ಡರ್ 30 ಯಾರ್ಡ್ಗಳ ಸರ್ಕಲ್ನಲ್ಲಿದ್ದಾಗ ಪಾಂಡೆ ಅವನ ತಲೆ ಮೇಲಿಂದ ಚೆಂಡನ್ನು ಬಾರಿಸಿ ರನ್ ಗಳಿಸುತ್ತಾರೆ. ಅದನ್ನು ಗಮನಿಸಿದ ಮೋರ್ಗನ್ ಅವರು ಪಾಂಡೆ ಬ್ಯಾಟಿಂಗ್ ಕ್ರೀಸಿಗೆ ಬಂದಾಗ ಡೀಪ್ ಮಿಡ್ವಿಕೆಟ್ ಮತ್ತು ಲಾಂಗಾನ್ನಲ್ಲಿ ಫೀಲ್ಡರ್ಗಳನ್ನು ಪ್ಲೇಸ್ ಮಾಡಿ ಅವರನ್ನು ಕಟ್ಟಿ ಹಾಕಿದರು. ಅವರ ನಾಯಕತ್ವಕ್ಕೆ ಹ್ಯಾಟ್ಸಾಫ್,’ ಎಂದು ನೆಹ್ರಾ ಹೇಳಿದ್ದಾರೆ.