ಬೇರೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ; ತಂಡಕ್ಕೆ ಮರಳದಿರಲು ಕಾರಣ ನೀಡಿದ ಡಿವಿಲಿಯರ್ಸ್

| Updated By: Skanda

Updated on: May 20, 2021 | 9:21 AM

AB de Villiers: ಕೆಲವು ದಿನಗಳಿಂದ ತಂಡದ ಭಾಗವಾಗಿರುವ ಯಾವುದೇ ಆಟಗಾರನ ಸ್ಥಾನವನ್ನು ಕಿತ್ತುಕೊಳ್ಳಲು ಎಬಿಡಿ ಅವರಿಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.

ಬೇರೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ; ತಂಡಕ್ಕೆ ಮರಳದಿರಲು ಕಾರಣ ನೀಡಿದ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Follow us on

ಎಬಿ ಡಿವಿಲಿಯರ್ಸ್, ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂಬುದನ್ನು ಯಾವುದೇ ಮುಲಾಜಿಲ್ಲದೆ ಹೇಳಬಹುದಾಗಿದೆ. ಇಂತಹ ಅಪ್ರತಿಮ ಆಟಗಾರ ತಮ್ಮ ನಿವೃತ್ತಿಯಿಂದ ಮರಳಲಿದ್ದಾರೆ ಮತ್ತು ಟಿ 20 ವಿಶ್ವಕಪ್ ಆಡಲಿದ್ದಾರೆ ಎಂಬ ಊಹಾಪೋಹಗಳಿದ್ದವು. ಆದರೆ, ಈ ವರದಿಗಳನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಅಲ್ಲಗಳೆದಿದೆ. ಪ್ರಸ್ತುತ ವಿಶ್ವದಾದ್ಯಂತ ಟಿ 20 ಲೀಗ್‌ಗಳಲ್ಲಿ ಡಿವಿಲಿಯರ್ಸ್ ಬೌಲರ್‌ಗಳನ್ನು ದಂಡಿಸುವ ರೀತಿ, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ರೀತಿಯಿಂದಾಗಿ ಅವರು ಮತ್ತೊಮ್ಮೆ ದೇಶಕ್ಕಾಗಿ ಆಡಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅವರು 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು
ಈಗ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಡಿವಿಲಿಯರ್ಸ್ ಬಗ್ಗೆ ಹೇಳಿಕೆ ನೀಡಿದ್ದಾರೆ. ತಂಡದ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಅವರು ಡಿವಿಲಿಯರ್ಸ್ ಇನ್ನೂ ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅಂತಾರಾಷ್ಟ್ರೀಯ ನಿವೃತ್ತಿಯಿಂದ ಹಿಂದಿರುಗುವ ಮೂಲಕ ಟಿ 20 ವಿಶ್ವಕಪ್‌ಗೆ ಮರಳದಿರಲು ಅವರ ಬಳಿ ಸಾಕಷ್ಟು ಕಾರಣಗಳಿವೆ ಎಂದು ಬೌಚರ್ ತಿಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯಿಂದ ಮರಳದಿರಲು ಡಿವಿಲಿಯರ್ಸ್ ನಿರ್ಧರಿಸಿದ್ದಾರೆ ಎಂದು ಸಿಎಸ್‌ಎ ಪ್ರಕಟಿಸಿದೆ.

ಅಬಿಡಿ ಮಾಜಿ ಜೊತೆಗಾರ ಮತ್ತು ಪ್ರಸ್ತುತ ರಾಷ್ಟ್ರೀಯ ತರಬೇತುದಾರ ಬೌಚರ್ ಡಿವಿಲಿಯರ್ಸ್ ನಿರ್ಧಾರಕ್ಕೆ ಕಾರಣಗಳನ್ನು ನೀಡಿದ್ದಾರೆ. ಅದೆನೆಂದರೆ, ಕೆಲವು ದಿನಗಳಿಂದ ತಂಡದ ಭಾಗವಾಗಿರುವ ಯಾವುದೇ ಆಟಗಾರನ ಸ್ಥಾನವನ್ನು ಕಿತ್ತುಕೊಳ್ಳಲು ಎಬಿಡಿ ಅವರಿಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ಬೌಚರ್ ದಿ ಸಿಟಿಜನ್ ವೆಬ್‌ಸೈಟ್‌ಗೆ ಮಾತಾನಾಡುತ್ತಾ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ತೀರ್ಮಾನವನ್ನು ಗೌರವಿಸಿ
ತಂಡದ ಸಂಯೋಜನೆಯನ್ನು ಹಾಳುಮಾಡಲು ಡಿವಿಲಿಯರ್ಸ್ ಬಯಸುವುದಿಲ್ಲ ಮತ್ತು ಆದ್ದರಿಂದ ಅವರು ಈ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಬೌಚರ್ ಹೇಳಿದರು. ತರಬೇತುದಾರನಾಗಿ, ನನ್ನ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ತರಲು ನಾನು ಪ್ರಯತ್ನಿಸಬೇಕು. ಎಬಿಗೆ ಎಂತಹದೆ ತಂಡವನ್ನು ಬಲಿಷ್ಠಗೊಳಿಸುವ ಸಾಮರ್ಥ್ಯವಿದೆ. ಆದರೆ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.

ಸಿಎಸ್ಎ ಈ ವಿಷಯ ತಿಳಿಸಿದೆ
ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯಿಂದ ಡಿವಿಲಿಯರ್ಸ್ ಹಿಂತಿರುಗುವ ಬಗ್ಗೆ ನಿರಂತರ ಮಾತುಕತೆ ನಡೆಯುತ್ತಿತ್ತು. ಆದರೆ ಆ ನಿರೀಕ್ಷೆಗೆ ಈಗ ತೆರೆಬಿದ್ದಿದೆ. ಎಬಿ ಡಿವಿಲಿಯರ್ಸ್ ನಿವೃತ್ತಿಯಿಂದ ಹಿಂದಿರುಗುವುದಿಲ್ಲ ಎಂದು ಹೇಳಲಾಗಿದೆ. ಮಂಡಳಿಯ ಪರವಾಗಿ, ಡಿವಿಲಿಯರ್ಸ್ ಜೊತೆ ಮಾತನಾಡಲಾಗಿದೆ. ಇದರಲ್ಲಿ, ಅವರ ನಿವೃತ್ತಿ ಅಂತಿಮವಾಗಿರುತ್ತದೆ ಎಂದು ಹೇಳಿದರು. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಿಂದಿರುಗುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ. ಡಿವಿಲಿಯರ್ಸ್ 114 ಟೆಸ್ಟ್, 224 ಏಕದಿನ ಮತ್ತು 78 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

ಇದನ್ನೂ ಓದಿ:
ಕ್ರಿಕೆಟ್ ಅಚ್ಚರಿ: ಡಿವಿಲಿಯರ್ಸ್​ ಅಭಿಮಾನಿಗಳಿಗೆ ಸಿಹಿ ಸುದ್ದಿ.. ಇಷ್ಟರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಮಿ. 360!