ಬಾಕ್ಸಿಂಗ್ ರಿಂಗ್​ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 18 ರ ಪ್ರಾಯದ ಮೆಕ್ಸಿಕನ್ ಬಾಕ್ಸರ್ ಜಾನೆಟ್ ಕೊನೆಯುಸಿರೆಳೆದಿದ್ದಾಳೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2021 | 4:29 PM

ಬೌಟ್ ನಾಲ್ಕನೇ ಸುತ್ತಿನಲ್ಲಿ ಹೌಲ್ ಅವರ ಎಡಗೈ ಪಂಚ್ ಮತ್ತು ಬಲಗೈ ಹುಕ್ ಜಪಾಟಾ ಅವರನ್ನು ನೆಲಕ್ಕುರುಳುವಂತೆ ಮಾಡಿತ್ತು. ಆರು ಸುತ್ತುಗಳ ವೃತ್ತಿಪರ ಬಾಕ್ಸಿಂಗ್ ಈವೆಂಟ್ನಲ್ಲಿ ಆಕೆ 5 ನೇ ಸುತ್ತಿಗಾಗಿ ಗಂಟೆ ಬಾರಿಸಿದಾಗ ಮೇಲೇಳಲಿಲ್ಲ.

ಬಾಕ್ಸಿಂಗ್ ರಿಂಗ್​ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 18 ರ ಪ್ರಾಯದ ಮೆಕ್ಸಿಕನ್ ಬಾಕ್ಸರ್ ಜಾನೆಟ್ ಕೊನೆಯುಸಿರೆಳೆದಿದ್ದಾಳೆ
ಜಾನೆಟ್​ ಜಕರೀಯಸ್ ಜಪಾಟಾ
Follow us on

ಬಾಕ್ಸಿಂಗ್ ರಿಂಗ್​ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ನಾಕ್ ಔಟ್ ಆಗಿದ್ದ ಮೆಕ್ಸಿಕೋದ ಹದಿ ಹರೆಯದ ಬಾಕ್ಸರ್ ಜಾನೆಟ್ ಜಕರೀಯ ಜಪಾಟಾ ಐದು ದಿನಗಳ ಕಾಲು ಸಾವು-ಬದುಕಿನೊಂದಿಗೆ ಹೋರಾಟ ನಡೆಸಿ ಸಾವಿಗೆ ಶರಣಾಗಿದ್ದಾರೆ. ಪ್ರಮೋಟರ್ ಯವಾನ್ ಮೈಕೆಲ್ ಸದರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ‘ಜಪಾಟಾ ಶುಕ್ರವಾರ ಮಧ್ಯಾಹ್ನ 3:45ಕ್ಕೆ ಕೊನೆಯುಸಿರೆಳೆದಿರುವ ಅತ್ಯಂತ ದುಃಖಕರ ಮತ್ತು ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುವ ಸಂಗತಿ ಆಕೆಯ ಕುಟಂಬದ ಸದಸ್ಯರಿಂದ ಗೊತ್ತಾಗಿದೆ,’ ಅಂತ ಮೈಕೆಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಜಪಾಟಾ ಅವರು ಕಳೆದ ಶನಿವಾರ ಮಾಂಟ್ರಿಯಲ್ ನಲ್ಲಿ ನಡೆದ ಜಿವೈಎಮ್ ಗಲಾ ಅಂತರರಾಷ್ಟ್ರೀಯ ಬಾಕ್ಸಿಂಗ್ ಸ್ಫರ್ಧೆಯ ವೆಲ್ಟರ್ ವೇಟ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯವೊಂದರಲ್ಲಿ ಮಾರೀ ಪೀರ್ ಹೌಲ್ ಅವರಿಂದ ಪರಾಭವಗೊಂಡಿದ್ದರು.

ಈ ಬೌಟ್ ನಾಲ್ಕನೇ ಸುತ್ತಿನಲ್ಲಿ ಹೌಲ್ ಅವರ ಎಡಗೈ ಪಂಚ್ ಮತ್ತು ಬಲಗೈ ಹುಕ್ ಜಪಾಟಾ ಅವರನ್ನು ನೆಲಕ್ಕುರುಳುವಂತೆ ಮಾಡಿತ್ತು. ಆರು ಸುತ್ತುಗಳ ವೃತ್ತಿಪರ ಬಾಕ್ಸಿಂಗ್ ಈವೆಂಟ್ನಲ್ಲಿ ಆಕೆ 5 ನೇ ಸುತ್ತಿಗಾಗಿ ಗಂಟೆ ಬಾರಿಸಿದಾಗ ಮೇಲೇಳಲಿಲ್ಲ. ಅಕೆಯ ದೇಹ ಸೆಟೆದಂತೆ ಕಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಗ್ರೂಪೆಯಲ್ಲಿರುವ ಯವನ್ ಮೈಕೆಲ್ ಅವರ ಇಡೀ ತಂಡ ವಿಷಯ ತಿಳಿದು ದಿಗ್ಮೂಢಗೊಂಡಿದೆ. ಆಕೆಯ ಸತ್ತಿದ್ದಾಳೆಂದು ಯಾರೂ ನಂಬುತ್ತಿಲ್ಲ, ಎಂದು ಪ್ರಮೋಟರ್ಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ. ನತದೃಷ್ಟ ಜಾನೆಟ್ ಅವರ ಪತಿ ಜೊವನ್ನಿ ಮಾರ್ಟಿನೆಜ್ ಅವರಿಗೆ ಪ್ರತ್ಯೇಕ ಸಂದೇಶವನ್ನು ಜಾನೆಟ್ ಪ್ರಮೋಟರ್ಗಳು ಕಳಿಸಿದ್ದಾರೆ.

ಕುಟುಂಬದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಮಾರ್ಟಿನೆಜ್ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ತಮ್ಮ ಫೇಸ್​ಬುಕ್​​ ಅಕೌಂಟ್​ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಹೌಲ್, ಈ ಬೌಟ್​ನ ಫಲಿತಾಂಶ ದುರಂತದಲ್ಲಿ ಕೊನೆಗೊಂಡಿರುವುದು ತನ್ನಲ್ಲಿ ಪಾಪಪ್ರಜ್ಞೆ ಮೂಡಿಸಿದೆ ಎಂದು ಹೇಳಿದ್ದಾರೆ.

‘ಬಾಕ್ಸಿಂಗ್ ಅನೇಕ ಅಪಾಯ ಮತ್ತು ಗಂಡಾಂತರಗಳಿಂದ ಕೂಡಿರುತ್ತದೆ. ಆದರೇನು ಮಾಡುವುದು? ಇದು ನಮ್ಮ ವೃತ್ತಿ ಮತ್ತು ಪ್ಯಾಶನ್. ನನ್ನ ಎದುರಾಳಿ ಯಾರೇ ಆಗರಲಿ, ಅವರನ್ನು ಗಾಯಗೊಳಿಸಬೇಕೆನ್ನುವ ಉದ್ದೇಶ ನನಗೆ ಯಾವತ್ತೂ ಇರಲ್ಲ,’ ಎಂದು ಹೌಲ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Lovlina Borgohain: ಊರಿನ ಭವಿಷ್ಯ ಬದಲಿಸಿದ ಆ ಒಂದು ಗೆಲುವು: ದಶಕಗಳಿಂದ ಅಭಿವೃದ್ದಿ ಕಾಣದ ಲವ್ಲಿನಾ ಹಳ್ಳಿಗೆ ಹೊಸ ರಸ್ತೆ ನಿರ್ಮಾಣ