MI vs CSK, IPL 2021 Match 27 Result: ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಚೆನ್ನೈ; ಮುಂಬೈಗೆ 4 ವಿಕೆಟ್ ಗೆಲುವು!

| Updated By: ganapathi bhat

Updated on: Sep 05, 2021 | 10:42 PM

MI vs CSK Scorecard: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 27ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

MI vs CSK, IPL 2021 Match 27 Result: ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಚೆನ್ನೈ; ಮುಂಬೈಗೆ 4 ವಿಕೆಟ್ ಗೆಲುವು!
ಪೊಲಾರ್ಡ್ ಬ್ಯಾಟಿಂಗ್ ಅಬ್ಬರ

ದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಮುಂಬೈ ಇಂಡಿಯನ್ಸ್ ಪರ ಕೀರನ್ ಪೊಲಾರ್ಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 34 ಬಾಲ್​ಗೆ 8 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 87 ರನ್ ಕಲೆಹಾಕಿದ್ದಾರೆ. ಉಳಿದಂತೆ ಡಿ ಕಾಕ್ 38, ರೋಹಿತ್ ಶರ್ಮಾ 35 ಹಾಗೂ ಕೃನಾಲ್ ಪಾಂಡ್ಯ 32 ರನ್ ದಾಖಲಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 218 ರನ್ ದಾಖಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್​ಗೆ ಗೆಲ್ಲಲು 219 ರನ್​ಗಳ ಗುರಿ ನೀಡಿದೆ. ಚೆನ್ನೈ ಪರ ಫಫ್ ಡುಪ್ಲೆಸಿಸ್ ಹಾಗೂ ಮೊಯೀನ್ ಅಲಿ ಆಕರ್ಷಕ ಅರ್ಧಶತಕ ಬಾರಿಸಿ ಇನ್ನಿಂಗ್ಸ್ ಕಟ್ಟಿದ್ದಾರೆ. ಡುಪ್ಲೆಸಿಸ್ 28 ಬಾಲ್​ಗೆ 50 ಹಾಗೂ ಮೊಯೀನ್ ಅಲಿ 36 ಬಾಲ್​ಗೆ 58 ರನ್ ದಾಖಲಿಸಿದ್ದಾರೆ. ಕೊನೆಯ ಓವರ್​ಗಳಲ್ಲಿ ಅಂಬಟಿ ರಾಯುಡು ಅಬ್ಬರಿಸಿದ್ದಾರೆ. 27 ಬಾಲ್​ಗೆ 72 ರನ್ ಗಳಿಸಿ ಅದ್ಭುತ ಆಟವಾಡಿದ್ದಾರೆ. ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಕರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಪರವಾಗಿ ಪೊಲಾರ್ಡ್ 2 ಓವರ್ ಬೌಲಿಂಗ್ ಮಾಡಿ 12 ರನ್ ಬಿಟ್ಟುಕೊಟ್ಟು ಮುಖ್ಯ 2 ವಿಕೆಟ್ ಪಡೆದಿದ್ದಾರೆ. ಬೋಲ್ಟ್ ಹಾಗೂ ಬುಮ್ರಾ ತಲಾ 1 ವಿಕೆಟ್ ಕಿತ್ತಿದ್ದಾರೆ. ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗಿದೆ.

LIVE NEWS & UPDATES

The liveblog has ended.
  • 01 May 2021 11:34 PM (IST)

    ಮುಂಬೈಗೆ 4 ವಿಕೆಟ್​ಗಳ ಗೆಲುವು

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಮುಂಬೈ ತಂಡ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 219 ರನ್ ದಾಖಲಿಸಿ ಟಾರ್ಗೆಟ್ ಬೆನ್ನತ್ತಿದ್ದಾರೆ.

  • 01 May 2021 11:24 PM (IST)

    ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್ ಔಟ್

    ಹಾರ್ದಿಕ್ ಪಾಂಡ್ಯ 7 ಬಾಲ್​ಗೆ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಜೇಮ್ಸ್ ನೀಶಮ್ ಕೂಡ ಬ್ಯಾಟಿಂಗ್​ಗೆ ಆಗಮಿಸಿದಂತೆ ಔಟ್ ಆಗಿದ್ದಾರೆ. ಪೊಲಾರ್ಡ್ ಅಬ್ಬರ ಮುಂದುವರಿದಿದೆ. ಮುಂಬೈ ಇಂಡಿಯನ್ಸ್ 19 ಓವರ್​ಗೆ 6 ವಿಕೆಟ್ ಕಳೆದುಕೊಂಡು 203 ರನ್ ದಾಖಲಿಸಿದೆ. ತಂಡ ಗೆಲ್ಲಲು 6 ಬಾಲ್​ಗೆ 16 ರನ್ ಬೇಕಾಗಿದೆ.


  • 01 May 2021 11:19 PM (IST)

    ರೋಚಕ ಹಂತದತ್ತ ಪಂದ್ಯ; 12 ಬಾಲ್​ಗೆ 31 ರನ್ ಬೇಕು

    ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 12 ಬಾಲ್​ಗೆ 31 ರನ್ ಬೇಕಾಗಿದೆ. ಪೊಲಾರ್ಡ್ 27 ಬಾಲ್​ಗೆ 70 ರನ್ ಬೇಕಾಗಿದೆ. ಹಾರ್ದಿಕ್ ಪಂಡ್ಯ 2 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ತಂಡದ ಮೊತ್ತ 18 ಓವರ್​ಗೆ 188/4 ಆಗಿದೆ.

  • 01 May 2021 11:11 PM (IST)

    ಕೃನಾಲ್ ಪಾಂಡ್ಯ ಔಟ್; ಹಾರ್ದಿಕ್ ಪಾಂಡ್ಯ ಇನ್

    ಕೃನಾಲ್ ಪಾಂಡ್ಯ 23 ಬಾಲ್​ಗೆ 32 ರನ್ ಗಳಿಸಿ ಔಟ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​ಗೆ ಆಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 17 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಗೆಲುವಿಗೆ 18 ಬಾಲ್​ಗೆ 48 ರನ್ ಬೇಕಿದೆ.

  • 01 May 2021 11:04 PM (IST)

    ಪೊಲಾರ್ಡ್ ಭರ್ಜರಿ ಬ್ಯಾಟಿಂಗ್; ಅರ್ಧಶತಕ ಪೂರೈಕೆ

    ಕೀರನ್ ಪೊಲಾರ್ಡ್ 18 ಬಾಲ್​ಗೆ 6 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 54 ರನ್ ದಾಖಲಿಸಿದ್ದಾರೆ. 15 ಓವರ್​ಗೆ ಮುಂಬೈ 153 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 30 ಬಾಲ್​ಗೆ 66 ರನ್ ಬೇಕಿದೆ.

  • 01 May 2021 10:43 PM (IST)

    ಪೊಲಾರ್ಡ್ ಅಬ್ಬರ!

    ರವೀಂದ್ರ ಜಡೇಜಾ ಓವರ್​ನಲ್ಲಿ ಪೊಲಾರ್ಡ್ ಮೂರು ಸಿಕ್ಸರ್ ಸಿಡಿಸಿದ್ದಾರೆ. 9 ಬಾಲ್​ಗೆ 21 ರನ್ ಗಳಿಸಿ ಅವರು ಬ್ಯಾಟ್ ಬೀಸುತ್ತಿದ್ದಾರೆ. ಮುಂಬೈ ತಂಡದ ಮೊತ್ತ 13 ಓವರ್​ಗೆ 114/3 ಆಗಿದೆ.

  • 01 May 2021 10:39 PM (IST)

    ಮುಂಬೈ ಗೆಲ್ಲಲು 48 ಬಾಲ್​ಗೆ 125 ರನ್ ಬೇಕು

    ಮುಂಬೈ ಇಂಡಿಯನ್ಸ್ ಗೆಲುವಿಗೆ 48 ಬಾಲ್​ಗೆ 125 ರನ್ ಬೇಕಾಗಿದೆ. ತಂಡದ ಮೊತ್ತ 12 ಓವರ್​ಗೆ 94/3 ಆಗಿದೆ. ಪೊಲಾರ್ಡ್, ಕೃನಾಲ್ ಪಾಂಡ್ಯ ಕ್ರೀಸ್​ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ನೀಶಮ್ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ. ಪೊಲಾರ್ಡ್ ಅಥವಾ ಪಾಂಡ್ಯ ಸಹೋದರರು ಸಿಡಿದರೆ ಮುಂಬೈ ಪಂದ್ಯ ಗೆಲ್ಲಬಹುದಾಗಿದೆ. ಇಲ್ಲವಾದಲ್ಲಿ ಮುಂಬೈಗೆ ಗೆಲುವು ಕಬ್ಬಿಣದ ಕಡಲೆಯಾಗಬಹುದು.

  • 01 May 2021 10:31 PM (IST)

    ಡಿ ಕಾಕ್ ವಿಕೆಟ್ ಪತನ

    ಆರಂಭಿಕರಾಗಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಮೊಯೀನ್ ಅಲಿ ಬೌಲಿಂಗ್​ಗೆ ಮೊಯೀನ್ ಅಲಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 28 ಬಾಲ್​ಗೆ 38 ರನ್ ಗಳಿಸಿದ್ದ ಡಿ ಕಾಕ್ ವಿಕೆಟ್ ಪತನವಾಗಿರುವುದು ಮುಂಬೈಗೆ ಮತ್ತೆ ಆಘಾತ ನೀಡಿದೆ. ತಂಡದ ಮೊತ್ತ 10 ಓವರ್ ಅಂತ್ಯಕ್ಕೆ ಮುಂಬೈ ಮೊತ್ತ 81/3 ಆಗಿದೆ. ಕೃನಾಲ್ ಪಾಂಡ್ಯ ಮತ್ತು ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 01 May 2021 10:28 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಮುಂಬೈ ಇಂಡಿಯನ್ಸ್ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ 3 ಬಾಲ್​ಗೆ 3 ರನ್ ಗಳಿಸಿ ನಿರ್ಗಮಿಸಿದ್ದಾರೆ. ರವೀಂದ್ರ ಜಡೇಜಾ ಬೌಲಿಂಗ್​ಗೆ ಧೋನಿ ಕ್ಯಾಚ್ ಪಡೆದಿದ್ದಾರೆ. 9 ಓವರ್ ಅಂತ್ಯಕ್ಕೆ ಮುಂಐ ಮೊತ್ತ 80/2 ಆಗಿದೆ.

  • 01 May 2021 10:17 PM (IST)

    ಚಹರ್​ ಕೋಟ ಮುಕ್ತಾಯ

    ದೀಪಕ್ ಚಹರ್ ಅವರು ಇಂದು ಸಿಎಸ್ಕೆ ಪರ ಯಾವುದೇ ವಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಚಹರ್ ಅವರ ಕೊನೆಯ ಓವರ್ ಕೂಡ ದುಬಾರಿಯಾಗಿದೆ ಮತ್ತು ಡಿಕಾಕ್ ಕೂಡ ಅದರಲ್ಲಿ ಬೌಂಡರಿ ಪಡೆದರು. ಚಹರ್ ತಮ್ಮ 4 ಓವರ್‌ಗಳಲ್ಲಿ 37 ರನ್ ನೀಡಿ ಖಾಲಿ ಕೈಯಲ್ಲಿ ಮರಳಿದರು.

  • 01 May 2021 10:10 PM (IST)

    ರೋಹಿತ್ ಸಿಕ್ಸರ್

    ರೋಹಿತ್ ಮತ್ತು ಡಿಕಾಕ್ ಇಲ್ಲಿಯವರೆಗೆ ಒಂದೇ ರೀತಿಯ ಬ್ಯಾಟಿಂಗ್ ಮಾಡಿದ್ದಾರೆ. ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ ಲುಂಗಿ ಎನ್‌ಜಿಡಿಯ ಮೊದಲ ಎಸೆತವನ್ನು ಲಾಂಗ್ ಓನ್‌ನ ಹೊರಗೆ ಒಂದು ಸಿಕ್ಸರ್‌ಗೆ ಕಳುಹಿಸಿದರು. ಅದೇ ಸಮಯದಲ್ಲಿ, ಐದನೇ ಎಸೆತದಲ್ಲಿ, ಕ್ವಿಂಟನ್ ಡಿಕಾಕ್ ಅತ್ಯುತ್ತಮ ಆನ್-ಡ್ರೈವ್ ಗಳಿಸಿದರು ಮತ್ತು ನಾಲ್ಕು ಪಡೆದರು.

  • 01 May 2021 10:07 PM (IST)

    ದೀಪಕ್ ಚಹರ್ ಬೆಸ್ಟ್ ಬೌಲಿಂಗ್

    ಮೊದಲ ಬಾರಿಗೆ ಈ ಓವರ್ ಸಿಎಸ್ಕೆಗೆ ಆರ್ಥಿಕವಾಗಿ ಬದಲಾಗಿದೆ. ದೀಪಕ್ ಚಹರ್ ಅವರ ಈ ಓವರ್‌ನಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್‌ನ ಹಿಂದೆ ಶಾಟ್ ಆಡಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಈ ಓವರ್‌ನಲ್ಲಿ ಯಾವುದೇ ಬೌಂಡರಿ ಕೂಡ ಇರಲಿಲ್ಲ.

  • 01 May 2021 10:02 PM (IST)

    ರೋಹಿತ್ ಬೌಂಡರಿ

    ಮುಂಬೈಗೆ ಮತ್ತೊಂದು ಓವರ್ ಉತ್ತಮವಾಗಿ ಬಂದಿತು, ಇದರಲ್ಲಿ ತಂಡಕ್ಕೆ ಬೌಂಡರಿ ಸಿಕ್ಕಿತು. ಚೆಂಡು ಶಾರ್ಟ್​ ಆಗಿತ್ತು, ರೋಹಿತ್‌ಗೆ ಜೋರಾಗಿ ಬಾರಿಸಲು ಸಾಧ್ಯವಾಗಲಿಲ್ಲ, ಆದರೆ ಮಿಡ್‌ವಿಕೆಟ್‌ನಲ್ಲಿ ಬೌಂಡರಿ ಸಿಕ್ಕಿತು.

  • 01 May 2021 09:58 PM (IST)

    ಡಿ ಕಾಕ್ ಸಿಕ್ಸರ್

    ದೀಪಕ್ ಚಹರ್ ಅವರ ಓವರ್ ಮುಂಬೈಗೆ ಅದ್ಭುತವಾಗಿದೆ. ಈ ಓವರ್‌ನಲ್ಲಿ ತಂಡವು ಸಾಕಷ್ಟು ರನ್ ಗಳಿಸಿತು ಮತ್ತು ರೋಹಿತ್ ಶರ್ಮಾ ಕೂಡ ಔಟಾಗುವುದನ್ನು ತಪ್ಪಿಸಿದರು. ಓವರ್‌ನ ಮೊದಲ ಎರಡು ಎಸೆತಗಳಲ್ಲಿ ರೋಹಿತ್ ಮೂರನೇ ವ್ಯಕ್ತಿಯ ಮೇಲೆ ಸತತ ಬೌಂಡರಿ ಪಡೆದರು. ಅಂಪೈರ್ ನಾಲ್ಕನೇ ಎಸೆತದಲ್ಲಿ ರೋಹಿತ್ ವಿರುದ್ಧ ಎಲ್ಬಿಡಬ್ಲ್ಯೂ ನೀಡಿದರು. ರೋಹಿತ್ ಕೊನೆಯ ಕ್ಷಣದಲ್ಲಿ ಡಿಆರ್‌ಎಸ್ ತೆಗೆದುಕೊಂಡರು . ಜೀವದಾನ ಸಿಕ್ಕಿತು. ನಂತರ ಕೊನೆಯ ಎಸೆತದಲ್ಲಿ ಆಫ್ ಸ್ಟಂಪ್‌ನಿಂದ, ಡಿಕಾಕ್ ಚೆಂಡನ್ನು ಸಿಕ್ಸರ್ ಬಾರಿಸಿದರು.

  • 01 May 2021 09:50 PM (IST)

    ಡಿ ಕಾಕ್ ಬೌಂಡರಿ

    ಅಗಾಧವಾದ ಗುರಿಯನ್ನು ಸಾಧಿಸುವುದು ಮುಂಬೈನ ಮುಂದಿರುವ ಸವಾಲು. ಕ್ವಿಂಟನ್ ಡಿಕಾಕ್ ತಂಡಕ್ಕೆ ಉತ್ತಮ ರೀತಿಯಲ್ಲಿ ಪ್ರಾರಂಭಿಸಿದ್ದಾರೆ. ಡಿಕಾಕ್ ಮೊದಲ ಓವರ್‌ನಲ್ಲಿ ದೀಪಕ್ ಚಹರ್ ಅವರ ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿದರು. ಡಿಕಾಕ್ ಮತ್ತು ರೋಹಿತ್ ಉತ್ತಮ ಪಾಲುದಾರಿಕೆಯನ್ನು ರೂಪಿಸಬೇಕಾಗುತ್ತದೆ, ಆಗ ಮಾತ್ರ ತಂಡವು ಈ ಗುರಿಯನ್ನು ಸಾಧಿಸಬಹುದು. ಎಂಐಐ ಇಲ್ಲಿಯವರೆಗೆ ಐಪಿಎಲ್‌ನಲ್ಲಿ 200 ಕ್ಕೂ ಹೆಚ್ಚು ಗುರಿಯನ್ನು ಸಾಧಿಸಿಲ್ಲ.

  • 01 May 2021 09:21 PM (IST)

    ಚೆನ್ನೈ ಸೂಪರ್ ಕಿಂಗ್ಸ್ 218/4 (20 ಓವರ್)

    ನಿಗದಿತ 20 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡು 218 ರನ್ ದಾಖಲಿಸಿದೆ. ಚೆನ್ನೈ ಪರ ಅಂತಿಮ ಓವರ್​ಗಳಲ್ಲಿ ಅಂಬಟಿ ರಾಯುಡು ಮಿಂಚಿದ್ದಾರೆ. ಮುಂಬೈ ಇಂಡಿಯನ್ಸ್​ಗೆ ಗೆಲ್ಲಲು 219 ರನ್ ಬೇಕಿದೆ.

  • 01 May 2021 09:16 PM (IST)

    200 ರನ್ ಗಡಿದಾಟಿದ ಚೆನ್ನೈ!

    ಅಂಬಟಿ ರಾಯುಡು ಅಬ್ಬರದ ಆಟದ ಫಲವಾಗಿ ಚೆನ್ನೈ ಸೂಪರ್ ಕಿಂಗ್ಸ್ 200 ರನ್​ಗಳ ಗಡಿದಾಟಿದೆ. ಚೆನ್ನೈ ಸೂಪರ್ ಕಿಂಗ್ಸ್ 19 ಓವರ್​ಗೆ 4 ವಿಕೆಟ್ ಕಳೆದುಕೊಂಡು 204 ರನ್ ದಾಖಲಿಸಿದೆ. ರಾಯುಡು 23 ಬಾಲ್​ಗೆ 61 ರನ್ ಬಾರಿಸಿದ್ದಾರೆ.

  • 01 May 2021 09:10 PM (IST)

    ರಾಯುಡು ವೇಗದ ಆಟ; ಅರ್ಧಶತಕ ಪೂರೈಕೆ

    ಅಂಬಟಿ ರಾಯುಡು ಅಂತಿಮ ಓವರ್​ಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. 20 ಬಾಲ್​ಗೆ 5 ಸಿಕ್ಸರ್ 3 ಬೌಂಡರಿ ಸಹಿತ 53 ರನ್ ದಾಖಲಿಸಿದ್ದಾರೆ. ರವೀಂದ್ರ ಜಡೇಜಾ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡದ ಮೊತ್ತ 18 ಓವರ್​ಗಳ ಅಂತ್ಯಕ್ಕೆ 194ಕ್ಕೆ 4 ಆಗಿದೆ.

  • 01 May 2021 09:02 PM (IST)

    150 ರನ್ ದಾಖಲಿಸಿದ ಚೆನ್ನೈ

    ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 153 ರನ್ ದಾಖಲಿಸಿದೆ. ರಾಯುಡು ವೇಗದ ಆಟವಾಡುತ್ತಿದ್ದಾರೆ. ಅವರು 13 ಬಾಲ್​ಗೆ 29 ರನ್ ಗಳಿಸಿದ್ದಾರೆ. ಜಡೇಜಾ ಕ್ರೀಸ್​ನಲ್ಲಿದ್ದಾರೆ.

  • 01 May 2021 08:47 PM (IST)

    ಚೆನ್ನೈ ಸೂಪರ್ ಕಿಂಗ್ಸ್ 126/4 (14 ಓವರ್)

    14 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು 126 ರನ್ ದಾಖಲಿಸಿದೆ. ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರಮುಖ ನಾಲ್ಕು ವಿಕೆಟ್ ಪತನದ ಬಳಿಕ ಚೆನ್ನೈ ರನ್ ವೇಗ ಕುಸಿತ ಕಂಡಿದೆ.

  • 01 May 2021 08:39 PM (IST)

    ರೈನಾ ಔಟ್

    ಪೊಲಾರ್ಡ್ ತಾವು ಎಸೆದ ಮೊದಲ ಓವರ್​ನಲ್ಲೇ ಮುಖ್ಯ ಎರಡು ವಿಕೆಟ್ ಉರುಳಿಸಿದ್ದಾರೆ. ರೈನಾ ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. 4 ಬಾಲ್​ಗೆ 2 ರನ್ ಗಳಿಸಿ ರೈನಾ ವಿಕೆಟ್ ಒಪ್ಪಿಸಿದ ಬಳಿಕ ಅಂಬಟಿ ರಾಯುಡು ಹಾಗೂ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಓವರ್​ಗೆ ಸಿಎಸ್​ಕೆ ಮೊತ್ತ 116/4 ಆಗಿದೆ.

  • 01 May 2021 08:36 PM (IST)

    ಅರ್ಧಶತಕದ ಬೆನ್ನಲ್ಲೇ ಔಟಾದ ಡುಪ್ಲೆಸಿಸ್

    ಪೊಲಾರ್ಡ್ ಬೌಲಿಂಗ್​ಗೆ ಬುಮ್ರಾಗೆ ಕ್ಯಾಚ್ ನೀಡಿ 28 ಬಾಲ್​ಗೆ 50 ರನ್ ಗಳಿಸಿದ್ದ ಫಫ್ ಡುಪ್ಲೆಸಿಸ್ ಔಟ್ ಆಗಿದ್ದಾರೆ.

  • 01 May 2021 08:32 PM (IST)

    ಮೊಯೀನ್ ಅಲಿ ಔಟ್; ಕ್ರೀಸ್​ಗೆ ಇಳಿದ ರೈನಾ

    ಅರ್ಧಶತಕದ ಆಟವಾಡಿ ಇನ್ನಿಂಗ್ಸ್ ಕಟ್ಟಲು ನೆರವಾಗಿದ್ದ ಮೊಯೀನ್ ಅಲಿ ಔಟ್ ಆಗಿದ್ದಾರೆ. ಅವರು 36 ಬಾಲ್​ಗೆ 58 ರನ್ ಗಳಿಸಿ ನಿರ್ಗಮಿಸಿದ್ದಾರೆ. ಬುಮ್ರಾ ಬೌಲಿಂಗ್​ಗೆ ಡಿ ಕಾಕ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 11 ಓವರ್​ಗೆ 2 ವಿಕೆಟ್ ಕಳೆದುಕೊಂಡು 112 ರನ್ ದಾಖಲಿಸಿದೆ. ಡುಪ್ಲೆಸಿಸ್​ಗೆ ಸುರೇಶ್ ರೈನಾ ಜೊತೆಯಾಗಿದ್ದಾರೆ.

  • 01 May 2021 08:21 PM (IST)

    ಮೊಯೀನ್ ಅಲಿ ಅರ್ಧಶತಕ

    ಮೊಯೀನ್ ಅಲಿ 33 ಬಾಲ್​ಗೆ 50 ರನ್ ದಾಖಲಿಸಿದ್ದಾರೆ. 3 ಬೌಂಡರಿ, 5 ಸಿಕ್ಸರ್ ಸಹಿತ ಆಕ್ರ್ಷಕ ಇನ್ನಿಂಗ್ಸ್ ಅಟ್ಟಿದ್ದಾರೆ. 10 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 95 ರನ್ ದಾಖಲಿಸಿದೆ.

  • 01 May 2021 08:17 PM (IST)

    ಚೆನ್ನೈ ಸೂಪರ್ ಕಿಂಗ್ಸ್ 77/1 (9 ಓವರ್)

    9 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 77 ರನ್ ದಾಖಲಿಸಿದೆ. ಮೊಯೀನ್ ಅಲಿ 31 ಬಾಲ್​ಗೆ 43 ರನ್ ಗಳಿಸಿ ಆಡುತ್ತಿದ್ದಾರೆ. ಡುಪ್ಲೆಸಿಸ್ 19 ಬಾಲ್​ಗೆ 28 ರನ್ ಪೇರಿಸಿದ್ದಾರೆ.

  • 01 May 2021 08:14 PM (IST)

    ಮೊಯೀನ್ ಅಲಿ- ಡುಪ್ಲೆಸಿಸ್ ಅರ್ಧಶತಕದ ಜೊತೆಯಾಟ

    ಚೆನ್ನೈ ಸೂಪರ್ ಕಿಂಗ್ಸ್ ಪರ ಮೊಯೀನ್ ಅಲಿ ಹಾಗೂ ಫಫ್ ಡುಪ್ಲೆಸಿಸ್ ಆಕರ್ಷಕ ಆಟವಾಡುತ್ತಿದ್ದಾರೆ. 8 ಓವರ್ ಅಂತ್ಯಕ್ಕೆ ಚೆನ್ನೈ ತಂಡ 61 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

  • 01 May 2021 08:01 PM (IST)

    ಪವರ್​ಪ್ಲೇ ಅಂತ್ಯಕ್ಕೆ 49/1

    ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 49 ರನ್ ದಾಖಲಿಸಿದೆ. ಡುಪ್ಲೆಸಿಸ್ ಹಾಗೂ ಮೊಯೀನ್ ಅಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪವರ್​ಪ್ಲೇ ಅವಧಿಯಲ್ಲಿ ಬೋಲ್ಟ್ 3 ಓವರ್ ಬೌಲಿಂಗ್ ಮಾಡಿದ್ದು 22 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

  • 01 May 2021 07:56 PM (IST)

    ಮೊಯೀನ್ ಅಲಿ ಸಿಕ್ಸರ್ ಆಟ

    ಮೊದಲನೇ ವಿಕೆಟ್ ಬಳಿಕ ಕಣಕ್ಕಿಳಿದ ಮೊಯೀನ್ ಅಲಿ ವೇಗದ ಆಟಕ್ಕೆ ಮುಂದಾಗಿದ್ದಾರೆ. 15 ಬಾಲ್​ಗೆ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 22 ರನ್ ಪೇರಿಸಿದ್ದಾರೆ. 5 ಓವರ್ ಅಂತ್ಯಕ್ಕೆ ಚೆನ್ನೈ ಮೊತ್ತ 42/1 ಆಗಿದೆ.

  • 01 May 2021 07:54 PM (IST)

    ಚೆನ್ನೈ ಸೂಪರ್ ಕಿಂಗ್ಸ್ 33/1 (4 ಓವರ್)

    4 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 33 ರನ್ ದಾಖಲಿಸಿದೆ. ಡುಪ್ಲೆಸಿಸ್ ಹಾಗೂ ಮೊಯೀನ್ ಅಲಿ ಉತ್ತಮ ಆಟವಾಡುತ್ತಿದ್ದಾರೆ. ಡುಪ್ಲೆಸಿಸ್ 10 ಬಾಲ್​ಗೆ 14 ಮತ್ತು ಮೊಯೀನ್ ಅಲಿ 15 ಬಾಲ್​ಗೆ 22 ರನ್ ದಾಖಲಿಸಿದ್ದಾರೆ.

  • 01 May 2021 07:40 PM (IST)

    ಮೊದಲ ವಿಕೆಟ್ ಕಳೆದುಕೊಂಡ ಚೆನ್ನೈ

    ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಋತುರಾಜ್ ಗಾಯಕ್​ವಾಡ್ 4 ಬಾಲ್​ಗೆ 4 ರನ್ ಗಳಿಸಿ ನಿರ್ಗಮಿಸಿದ್ದಾರೆ. ಬೋಲ್ಟ್ ಎಸೆದ ಮೊದಲ ಓವರ್​ಗೆ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಚೆನ್ನೈ ಮೊದಲ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದೆ. 2 ಓವರ್​ಗಳ ಅಂತ್ಯಕ್ಕೆ ಚೆನ್ನೈ ಮೊತ್ತ 15/1 ಆಗಿದೆ.

  • 01 May 2021 07:21 PM (IST)

    ಚೆನ್ನೈ- ಮುಂಬೈ ಹಣಾಹಣಿ

    ಗೆಲುವಿನ ಅಲೆಯಲ್ಲಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ರೋಹಿತ್ ಪಡೆಯನ್ನು ಮತ್ತೆ ಸೋಲಿನ ಕೂಪಕ್ಕೆ ತಳ್ಳುತ್ತದಾ ಅಥವಾ ಮುಂಬೈ ಗೆಲುವಿನ ಆಟ ಶುರುಮಾಡುತ್ತಾ ಎಂದು ಕಾದುನೋಡಬೇಕಿದೆ

  • 01 May 2021 07:20 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಋತುರಾಜ್ ಗೈಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ, ದೀಪಕ್ ಚಹರ್

  • 01 May 2021 07:18 PM (IST)

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ರಾಹುಲ್ ಚಹರ್, ಧವಲ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 01 May 2021 07:08 PM (IST)

    ಮುಂಬೈ ಇಂಡಿಯನ್ಸ್ ಟಾಸ್ ವಿನ್

    ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಮಾಡಲಿದೆ.

Published On - 11:35 pm, Sat, 1 May 21

Follow us on