ಒಲಿಂಪಿಕ್ಸ್‌ನಲ್ಲಿ ಮಿಂಚಿದ ಲಾಲ್ರೆಮ್ಸಿಯಾಮಿಗೆ ಹಾಕಿ ಮುಖ್ಯ ಕೋಚ್ ಹುದ್ದೆ ನೀಡಿದ ಮಿಜೋರಾಂ ಸರ್ಕಾರ
ಮಿಜೋರಾಂ ಸರ್ಕಾರವು ರಾಷ್ಟ್ರೀಯ ಹಾಕಿ ಆಟಗಾರ್ತಿ ಮತ್ತು ರಾಜ್ಯದ ಏಕೈಕ ಒಲಿಂಪಿಯನ್ ಆದ ಲಾಲ್ರೆಮ್ಸಿಯಾಮಿ, ಗ್ರೂಪ್ ಎ ನಲ್ಲಿ ಮುಖ್ಯ ತರಬೇತುದಾರರಾಗಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಅಡಿಯಲ್ಲಿ ನೇಮಿಸಲು ನಿರ್ಧರಿಸಿದೆ
ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾಗಿರಬಹುದು, ಆದರೆ ದೇಶದ ದೃಷ್ಟಿಯಲ್ಲಿ ಅವರು ವಿಜೇತರಿಗಿಂತ ಏನು ಕಡಿಮೆಯಿಲ್ಲ. ಈ ತಂಡವನ್ನು ವಿಜೇತರಂತೆ ಸ್ವಾಗತಿಸಲಾಗುತ್ತಿದೆ ಮತ್ತು ಗೌರವಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಹೊರತಾಗಿ, ರಾಜ್ಯ ಸರ್ಕಾರಗಳು ತಮ್ಮ ಆಟಗಾರರಿಗಾಗಿ ವಿಶೇಷವಾದ ಗೌರವ, ಸವಲತ್ತುಗಳನ್ನು ನೀಡಿ ಪುರಸ್ಕರಿಸುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯೆ ಲಾಲ್ರೆಮ್ಸಿಯಾಮಿಯನ್ನು ಮಿಜೋರಾಂ ಕ್ರೀಡಾ ಮತ್ತು ಯುವಜನ ಸೇವಾ ಸಚಿವಾಲಯವು ಮುಖ್ಯ ಕೋಚ್, ಮತ್ತು ಗ್ರೂಪ್ ಎ ಅಧಿಕಾರಿಯಾಗಿ ನೇಮಿಸಿದೆ.
ಮಿಜೋರಾಂ ಸರ್ಕಾರವು ಗುರುವಾರ ಲಾಲ್ರೆಮ್ಸಿಯಾಮಿಗೆ ಎ ಗ್ರೂಪ್ ಉದ್ಯೋಗವನ್ನು ನೀಡಿದೆ. ಮಿಜೋರಾಂನ ಮೊದಲ ಮಹಿಳಾ ಒಲಿಂಪಿಯನ್ ಲಾಲ್ರೆಮ್ಸಿಯಾಮಿಗೆ ಸಹಾಯಕ ನಿರ್ದೇಶಕರ ಪದಕಕ್ಕೆ ಸಮನಾದ ಎ ಗುಂಪಿನ ಕೆಲಸವನ್ನು ನೀಡಲಾಗಿದೆ. ಮುಖ್ಯಮಂತ್ರಿ ಜೋರಮಥಂಗ ಟ್ವೀಟ್ ಮಾಡಿ, ಮಿಜೋರಾಂ ಸರ್ಕಾರವು ರಾಷ್ಟ್ರೀಯ ಹಾಕಿ ಆಟಗಾರ್ತಿ ಮತ್ತು ರಾಜ್ಯದ ಏಕೈಕ ಒಲಿಂಪಿಯನ್ ಆದ ಲಾಲ್ರೆಮ್ಸಿಯಾಮಿ, ಗ್ರೂಪ್ ಎ ನಲ್ಲಿ ಮುಖ್ಯ ತರಬೇತುದಾರರಾಗಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಅಡಿಯಲ್ಲಿ ನೇಮಿಸಲು ನಿರ್ಧರಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಲಾಲ್ರೆಮ್ಸಿಯಾಮಿಗೆ ಭೂಮಿ ಮತ್ತು ಹಣ ನೀಡಲಾಗಿದೆ ಮೊದಲು ಅವರ ಊರಾದ ಕೊಲಾಸಿಬ್‌ನಲ್ಲಿ ಅವರಿಗೆ 85 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನೂ ನೀಡಲಾಗಿದೆ. ರಾಜ್ಯ ಸರ್ಕಾರವು ಅವರಿಗೆ 25 ಲಕ್ಷ ನಗದು ಬಹುಮಾನವನ್ನು ಘೋಷಿಸಿತ್ತು, ಅದರಲ್ಲಿ 10 ಲಕ್ಷವನ್ನು ಅವರ ತಾಯಿಗೆ ನೀಡಲಾಗಿದೆ. ಲಾಲ್ರೆಮ್ಸಿಯಾಮಿ ಆಗಸ್ಟ್ 25 ರಂದು ಮಿಜೋರಾಂ ತಲುಪಲಿದ್ದಾರೆ. ರಾಜ್ಯ ಕ್ರೀಡಾ ನಿರ್ದೇಶಕ ಲಾಲ್ಸಂಗ್ಲಿಯಾನಾ ಅವರ ಗೌರವಾರ್ಥವಾಗಿ ಆಗಸ್ಟ್ 26 ರಂದು ವನಪ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಅದೇ ಸಮಯದಲ್ಲಿ, ಅವರಿಗೆ ಉಳಿದ 15 ಲಕ್ಷ ರೂ. ಹಣ, ನೇಮಕಾತಿ ಪತ್ರ ಮತ್ತು ಇತರ ಪ್ರಶಸ್ತಿಗಳನ್ನು ನೀಡಲಾಗುವುದು .
ಮಿಜೋರಾಂನ ಏಕೈಕ ಒಲಿಂಪಿಯನ್ ಲಾಲ್ರೆಮ್ಸಿಯಾಮಿ ಲಾಲ್ರೆಮ್ಸಿಯಾಮಿ ಮಿಜೋರಾಂನ ಮೊದಲ ಮಹಿಳಾ ಒಲಿಂಪಿಯನ್. ರಾಜ್ಯದ ಕೊನೆಯ ಒಲಿಂಪಿಯನ್ ಸಿ ಲಾಲ್ರೆಮ್ಸಂಗ, ಅವರು 1992 ಬಾರ್ಸಿಲೋನಾ ಮತ್ತು 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಒಲಿಂಪಿಕ್ ಅರ್ಹತೆ ಪಡೆಯಲು, ತಂಡವು ಒಲಿಂಪಿಕ್ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು. ಆದಾಗ್ಯೂ, ಈ ಸಮಯದಲ್ಲಿ ಲಾಲ್ರೆಮ್ಸಿಯಾಮಿ ಅವರ ತಂದೆ ತೀರಿಕೊಂಡರು. ಆಗಲೂ ಅವರ ದೇಶಕ್ಕೆ ಹಿಂತಿರುಗದೆ ಟೋಕಿಯೊದಲ್ಲಿ ತಂಡದೊಂದಿಗೆ ಉಳಿದು ದೇಶಾಭಿಮಾನ ಮೆರೆದಿದ್ದರು.
ಇದನ್ನೂ ಓದಿ:ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
Published On - 3:43 pm, Fri, 20 August 21