Rafael Nadal: ಇಂಜುರಿ ಸಮಸ್ಯೆ.. ಯುಎಸ್ ಓಪನ್ಗೆ ಗೈರಾಗಲಿದ್ದಾರೆ ರಾಫೆಲ್ ನಡಾಲ್! 2021ರ ಕ್ರೀಡಾ ಋತುವೂ ಅಂತ್ಯ
Rafael Nadal: ಒಂದು ವರ್ಷದಿಂದ ಕಾಲಿನ ಗಾಯದಿಂದ ಬಳಲುತ್ತಿರುವ ಸ್ಪೇನಿಯಾರ್ಡ್ ರಾಫೆಲ್ ನಡಾಲ್ ತನ್ನ 2021 ರ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಶುಕ್ರವಾರ ಹೇಳಿದ್ದಾರೆ.

ಒಂದು ವರ್ಷದಿಂದ ಕಾಲಿನ ಗಾಯದಿಂದ ಬಳಲುತ್ತಿರುವ ಸ್ಪೇನಿಯಾರ್ಡ್ ರಾಫೆಲ್ ನಡಾಲ್ ತನ್ನ 2021 ರ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಇದರರ್ಥ ಆಗಸ್ಟ್ 30 ರಿಂದ ಆರಂಭವಾಗುವ 2021 ಯುಎಸ್ ಓಪನ್‌ನಲ್ಲಿ ನಡಾಲ್ ಭಾಗವಹಿಸುವುದಿಲ್ಲ.ದುರದೃಷ್ಟವಶಾತ್ ನಾನು 2021 ರ ಋತುವನ್ನು ಕೊನೆಗೊಳಿಸುತ್ತಿದ್ದೇನೆ ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಪ್ರಾಮಾಣಿಕವಾಗಿ, ನಾನು ಒಂದು ವರ್ಷದಿಂದ ನನ್ನ ಕಾಲಿನ ನೋವಿನಿಂದ ಹೆಚ್ಚು ಬಳಲುತ್ತಿದ್ದೇನೆ. ಹೀಗಾಗಿ ನಾನು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಶ್ವದ ನಾಲ್ಕನೇ ಶ್ರೇಯಾಂಕದ ನಡಾಲ್ ಟ್ವೀಟ್ ಮಾಡಿದ್ದಾರೆ.
20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತರಾದ ನಡಾಲ್ ಅವರನ್ನು ಕಾಡುತ್ತಿರುವ ಗಾಯ ಕಳೆದ ವಾರ ಸಿನ್ಸಿನಾಟಿ ಮಾಸ್ಟರ್ಸ್ ಮತ್ತು ಕೆನಡಿಯನ್ ಓಪನ್ ನಿಂದ ಹಿಂದೆ ಸರಿಯುವಂತೆ ಮಾಡಿತು. ಪ್ರಕಟಣೆಯೊಂದಿಗೆ, ರೋಜರ್ ಫೆಡರರ್ ಮತ್ತು ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ನಂತರ ನಡಾಲ್ ಯುಎಸ್ ಓಪನ್‌ನಿಂದ ಹೊರಬಂದ ಮೂರನೇ ದೊಡ್ಡ ಟೆನಿಸ್ ಆಟಗಾರ ಆಗಿದ್ದಾರೆ.
ಕಳೆದ ಶನಿವಾರ, ಫೆಡರರ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಮತ್ತು ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಆದರೆ ಮಣಿಕಟ್ಟಿನ ಗಾಯದಿಂದಾಗಿ ಥೀಮ್ ಯುಎಸ್ ಓಪನ್‌ನಿಂದ ಹೊರನಡೆದಿದ್ದರು ಮತ್ತು ವರ್ಷದ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಹೇಳಿದ್ದರು. ಜೂನ್ ನಲ್ಲಿ ನಡೆದ ಮಲ್ಲೋರ್ಕಾ ಓಪನ್‌ನಲ್ಲಿ ಆಡುವಾಗ ಅವರು ಗಾಯಗೊಂಡಿದ್ದರು.
ಇದನ್ನೂ ಓದಿ:Tokyo Olympics: ರಾಫೆಲ್ ನಡಾಲ್, ಡೊಮಿನಿಕ್ ಥೀಮ್ ನಂತರ ಒಲಿಂಪಿಕ್ಸ್‌ನಲ್ಲಿ ಆಡದಿರಲು ಸೆರೆನಾ ವಿಲಿಯಮ್ಸ್ ನಿರ್ಧಾರ
