ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ ಟ್ವೀಟ್, 2020ರ ಅತಿಹೆಚ್ಚು ಲೈಕ್ ಪಡೆದ ಟ್ವೀಟ್ ಎಂದು ಟ್ವೀಟ್ ಇಂಡಿಯಾ ಘೋಷಿಸಿದೆ.
ಆಗಸ್ಟ್ 27ರಂದು ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಲು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಮತ್ತು ಟ್ವಿಟರ್ ಬಳಸಿಕೊಂಡಿದ್ದರು. ಅನುಷ್ಕಾ ಜೊತೆಗಿನ ಫೋಟೊ ಟ್ವೀಟ್ ಮಾಡಿದ್ದ ಕೊಹ್ಲಿ ‘ಜನವರಿ 2021ಕ್ಕೆ ಇನ್ನು ನಾವು ಮೂವರು’ ಎಂದು ಬರೆದುಕೊಂಡರು. ಇದನ್ನು ಈ ವರ್ಷದ ಟ್ವೀಟ್ಗಳಲ್ಲಿ ಹೆಚ್ಚು ಲೈಕ್ ಪಡೆದ ಟ್ವೀಟ್ ಎಂದು ಟ್ವೀಟ್ ಇಂಡಿಯಾ ಇದೀಗ ಘೋಷಿಸಿದೆ.
ಟ್ವಿಟರ್ನಲ್ಲಿ ಅತಿ ಹೆಚ್ಚು ಬಳಸಿದ ಹ್ಯಾಶ್ ಟ್ಯಾಗ್ ಕೋವಿಡ್-19. ಬಾಲಿವುಡ್ ಟಾಪಿಕ್ಗಳಲ್ಲಿ ಅತೀ ಹೆಚ್ಚು ಬಳಕೆಯಾಗಿದ್ದು ಅಮಿತಾಭ್ ಬಚ್ಚನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ದಿಲ್ ಬೇಚಾರಾ’. ಇನ್ನು, ಕಿರುತೆರೆಯಲ್ಲಿ ಚರ್ಚಿತವಾದ ವಿಷಯ ಬಿಗ್ ಬಾಸ್.
The most Liked Tweet of 2020
2020 का सबसे ज्यादा लाइक किया गया ट्वीट
2020ம் ஆண்டின்அதிகம் லைக் செய்யப்பட்ட டுவீட் pic.twitter.com/lMN18Z5KEd— Twitter India (@TwitterIndia) December 8, 2020
And then, we were three! Arriving Jan 2021 ❤️? pic.twitter.com/0BDSogBM1n
— Virat Kohli (@imVkohli) August 27, 2020
Published On - 5:51 pm, Tue, 8 December 20