ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಹಾಕಿದ ಎಂ.ಎಸ್. ಧೋನಿ! ಅರ್ಜಿಯಲ್ಲಿ ತಂದೆ ಹೆಸರು ಕಂಡು ದಂಗಾದ ಅಧಿಕಾರಿಗಳು

ಎಂ.ಎಸ್.ಧೋನಿ ಕೂಡ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದಾರೆ. ಶಿಕ್ಷಕ ಹುದ್ದೆಗೆ ಎಂ.ಎಸ್.ಧೋನಿ ಅವರ ನಾಮನಿರ್ದೇಶನವನ್ನು ನೋಡಿದ ನಂತರ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ.

ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಹಾಕಿದ ಎಂ.ಎಸ್. ಧೋನಿ! ಅರ್ಜಿಯಲ್ಲಿ ತಂದೆ ಹೆಸರು ಕಂಡು ದಂಗಾದ ಅಧಿಕಾರಿಗಳು
ಎಂ ಎಸ್ ಧೋನಿ
pruthvi Shankar

|

Jul 03, 2021 | 5:17 PM

ಹೆಸರು- ಎಂ.ಎಸ್.ಧೋನಿ. ತಂದೆಯ ಹೆಸರು- ಸಚಿನ್ ತೆಂಡೂಲ್ಕರ್. ಎಲ್ಲರೂ ಆಶ್ಚರ್ಯಗೊಳ್ಳುತ್ತಿದ್ದೀರಾ?. ಹೌದು ಈ ಸುದ್ದಿಯನ್ನು ನೋಡಿದಾಗ ನಮಗೂ ಹೀಗೆ ಆಯಿತು. ಈ ಆಘಾತಕಾರಿ ಸುದ್ದಿ ಛತ್ತೀಸ್​ಗಡ್​​ನಿಂದ ಬಂದಿದ್ದು, ಅಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 14850 ಶಿಕ್ಷಕರ ನೇಮಕಾತಿಗಾಗಿ ರಾಜ್ಯದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದಕ್ಕಾಗಿ ಎಂ.ಎಸ್.ಧೋನಿ ಕೂಡ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದಾರೆ. ಶಿಕ್ಷಕ ಹುದ್ದೆಗೆ ಎಂ.ಎಸ್.ಧೋನಿ ಅವರ ನಾಮನಿರ್ದೇಶನವನ್ನು ನೋಡಿದ ನಂತರ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ಎಂಎಸ್ ಧೋನಿ ತನ್ನ ತಂದೆಯ ಹೆಸರನ್ನು ಸಚಿನ್ ತೆಂಡೂಲ್ಕರ್ ಎಂದು ಬರೆದಿದ್ದಾರೆ ಎಂದು ತಿಳಿದ ಕೂಡಲೇ ಎರಡನೇ ಬಾರಿಗೆ ಎಲ್ಲರೂ ಕಣ್ಣಗಳಿಸಿ ಮತ್ತೊಮ್ಮೆ ಅರ್ಜಿಯನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

ಆದರೆ ಇದಕ್ಕಿಂತ ಇನ್ನೊಂದು ದೊಡ್ಡ ಆಶ್ಚರ್ಯ ಏನೆಂದರೆ. ಈ ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಗಳು ಇದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಪರೀಕ್ಷಿಸದೆ ಈ ಅರ್ಜಿದಾರನನ್ನು ಶಿಕ್ಷಕರ ನೇಮಕಾತಿ ಸಂದರ್ಶನಕ್ಕಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಈ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಬಹುಶಃ ಅದರ ಹಿಂದಿನ ನೈಜ ಕಥೆ ಹೊರಬರುತ್ತಿರಲಿಲ್ಲ. ಶಿಕ್ಷಕರ ಸಂದರ್ಶನಕ್ಕೆ ಎಂ.ಎಸ್.ಧೋನಿ ಸೇರಿದಂತೆ 15 ಜನರನ್ನು ಅಧಿಕಾರಿಗಳು ಶುಕ್ರವಾರ ಕರೆದಿದ್ದರು. ಇದರಲ್ಲಿ ಎಲ್ಲರೂ ಹಾಜರಿದ್ದರು ಆದರೆ ಎಂ.ಎಸ್.ಧೋನಿ ಮಾತ್ರ ಗೈರು ಹಾಜರಾಗಿದ್ದರು. ಅಲ್ಲಿಯೇ ಅನುಮಾನದ ಸೂಜಿ ಗಾಢವಾಯಿತು. ಹೀಗಾಗಿ ಈ ಅರ್ಜಿ ನಕಲಿ ಎಂದು ಅಧಿಕಾರಿಗಳು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ.

ಎಂ.ಎಸ್.ಧೋನಿ ಹೆಸರಿನಲ್ಲಿ ಮೋಸ, ಕಾನೂನು ತನಿಖೆ ನಡೆಯಲಿದೆಯೇ? ಶಿಕ್ಷಕ ಹುದ್ದೆಗೆ ಭರ್ತಿ ಮಾಡಿದ ನಮೂನೆಯ ಪ್ರಕಾರ, ಎಂ.ಎಸ್.ಧೋನಿ ಅವರು ದುರ್ಗ್‌ನ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ, ಅದು ಸಖತ್ ವೈರಲ್ ಆಗುತ್ತಿದೆ, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ. ನಕಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಈ ಅರ್ಜಿ ನಕಲಿ ಎಂಬುದು ಮೇಲ್ನೋಟಕೆ ಕಂಡು ಬರುತ್ತಿದ್ದರೂ, ಸಂದರ್ಶನಕ್ಕೆ ಅಭ್ಯರ್ಥಿಯ ಆಯ್ಕೆ ಮಾಡಿರುವುದು ಎಲ್ಲರಿಗೂ ಆಘಾತಕಾರಿಯಾಗಿ ಕಂಡುಬರುತ್ತಿದೆ. ನಿಸ್ಸಂಶಯವಾಗಿ, ಈ ಪ್ರಕರಣಗಳನ್ನು ಕಾನೂನು ಕ್ರಮದಲ್ಲಿಯೂ ತನಿಖೆ ಮಾಡಲಾಗುತ್ತದೆ. ಹೀಗಾಗಿ ಈ ಕಥೆಯಲ್ಲಿ ಇನ್ನೂ ಕೆಲವು ತಿರುವುಗಳನ್ನು ನಾವು ಕಾಣಬಹುದಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada