ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?

  • TV9 Web Team
  • Published On - 11:29 AM, 13 Sep 2019
ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.

ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು ಆದರೆ ರಾತ್ರಿಯಾದರು ಧೋನಿ ನಿವೃತ್ತಿ ಘೋಷಿಸಲಿಲ್ಲಾ.

ಇಂತಹ ಅತಂಕಕ್ಕೆ ಎಡೆ ಮಾಡಿದ ಆ ಟ್ವೀಟ್ ನಲ್ಲಿ ಏನಿದೆ…?
ಈ ಪಂದ್ಯವನ್ನ ನಾನು ಯಾವತ್ತೂ ಮರೆಯೋದಿಲ್ಲ. ಅದು ವಿಶೇಷ ರಾತ್ರಿಯಾಗಿತ್ತು. ಅವತ್ತು ನನ್ನನ್ನು ಈ ಮನುಷ್ಯ ಪಿಚ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ ಹಾಗೆ ಧೋನಿ ಓಡಿಸಿದ್ರು.

ಇದು ಕೊಯ್ಲಿ 2016 ರಲ್ಲಿ ನಡೆದ T20 ಲೀಗ್ ಪಂದ್ಯ ದ ಅವಿಸ್ಮರಣೀಯ ಕ್ಷಣವನ್ನ ನೆನಪಿಸಿಕೊಂಡಿದ್ದಾರೆ. ಆದರೆ ಇದನ್ನು ಓದುಗರು ಬೇರೆಯೇ ರೀತಿಯ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ಹಬ್ಬಿದಂತೆ ಬಿಸಿಸಿಐ ಹಾಗೂ ಧೋನಿ ಪತ್ನಿ ಸಾಕ್ಷಿ ಧೋನಿ ಮರು ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಯ್ಲಿ ಮಾಡಿದ ಆ ಒಂದು ಟ್ವೀಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಿವೃತ್ತಿಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಲು ದಾರಿ ಮಾಡಿಕೊಟ್ಟಿತು. ಸಾಕ್ಷಿ ಧೋನಿ, ಬಿಸಿಸಿಐ ಸ್ಪಷ್ಟಿಕರಣದ ನಂತರ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.