ಟೀಂ ಇಂಡಿಯಾ ಸೋಲನ್ನು ಟೀಕಿಸಿದ ಮೈಕಲ್​ ವಾನ್​ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ವಾಸಿಂ ಜಾಫರ್

2002ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲನೇ ಟೆಸ್ಟ್ ಇರಡನೇ ಇನಿಂಗ್ಸ್‌ನಲ್ಲಿ ಜಾಫರ್ ಅವರನ್ನು ವಾನ್‌ 53ಕ್ಕೆ ಔಟ್‌ ಮಾಡಿದ್ದ ಸಂಗತಿಯ ಮೂಲಕ ಮಾಜಿ ಆರಂಭಿಕನ ಕಾಲೆಳೆದರು.

ಟೀಂ ಇಂಡಿಯಾ ಸೋಲನ್ನು ಟೀಕಿಸಿದ ಮೈಕಲ್​ ವಾನ್​ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ವಾಸಿಂ ಜಾಫರ್
ವಾಸಿಮ್‌ ಜಾಫರ್‌, ಮೈಕಲ್‌ ವಾನ್‌
Follow us
ಪೃಥ್ವಿಶಂಕರ
|

Updated on: Mar 13, 2021 | 6:30 PM

ಅಹ್ಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್​ ತಂಡ 8 ವಿಕೆಟ್‌ಗಳಿಂದ ಭರ್ಜರಿ ಜಯ ಗಳಿಸಿದ ಬೆನ್ನಲ್ಲೆ, ಟೀಂ ಇಂಡಿಯಾವನ್ನು ಮಾತಿನಲ್ಲೇ ಕುಟುಕಿರುವ ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಕೊಹ್ಲಿ ಪಡೆಯನ್ನು ವ್ಯಂಗ್ಯ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. 20 ರನ್​ಗಳಾಗಿರುವಾಗಲೇ ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ತು. ಆರಂಭಿಕರಾದ ಶಿಖರ್ ಧವನ್, ಕೆ.ಎಲ್.ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಒಬ್ಬರ ಹಿಂದೊಬ್ರು ಪರೇಡ್ ನಡೆಸಿದ್ರು.

ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಕೊಹ್ಲಿಯ ವಿಕೆಟ್​ ಬಳಿಕ ಮಿಡಲ್ ಆರ್ಡರ್​ನಲ್ಲಿ ಬಂದ ರಿಷಬ್ ಪಂತ್ 21 ರನ್​ಗಳಿಸಿದ್ರೆ, ಹಾರ್ದಿಕ್ ಪಾಂಡ್ಯಾ 19 ರನ್​ಗಳಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಇವರಿಬ್ಬರ ಜೊತೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. 48 ಎಸೆತಗಳನ್ನ ಎದುರಿಸಿದ ಶ್ರೇಯಸ್ ಅಯ್ಯರ್, 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 67 ರನ್​ಗಳಿಸಿದ್ರು.

ಅಯ್ಯರ್ ಅದ್ಭುತ ಆಟದಿಂದಲೇ ಕೊಹ್ಲಿ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಭೀತಿಯಿಂದ ಪಾರಾಯ್ತು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 124 ರನ್​ಗಳಿಸಲಷ್ಟೇ ಶಕ್ತವಾಯ್ತು. ಇಂಗ್ಲೆಂಡ್ ಪರ ಅದ್ಭುತ ಬೌಲಿಂಗ್ ಮಾಡಿದ ಜೊಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದ್ರು.

ಸುಲಭ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್ ಟೀಂ ಇಂಡಿಯಾ ನೀಡಿದ 125 ರನ್​ಗಳ ಸುಲಭ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್​ಗೆ, ಆರಂಭಿಕರಾದ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಭರ್ಜರಿ ಓಪನಿಂಗ್ ನೀಡಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ಜೇಸನ್ ರಾಯ್ 32 ಬಾಲ್​ಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 49 ರನ್​ಗಳಿಸಿದ್ರೆ, ಜೋಸ್ ಬಟ್ಲರ್ 28 ರನ್​ಗಳಿಸಿದ್ರು.

ನಂತರ ಬಂದ ಡೇವಿಡ್ ಮಲನ್ ಅಜೇಯ 24 ರನ್ ಮತ್ತು ಜಾನಿ ಬೈರ್‌ಸ್ಟೋವ್ ಅಜೇಯ 26 ರನ್​ಗಳಿಸೋ ಮೂಲಕ, 15.3 ಓವರ್​ಗಳಲ್ಲೇ ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ರು. ಇದರೊಂದಿಗೆ ಇಂಗ್ಲೆಂಡ್ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸ್ತು. 1-0 ಅಂತರದಲ್ಲಿ ಮುನ್ನಡೆ ಸಾಧಿಸೋ ಮೂಲಕ ಟೆಸ್ಟ್ ಸರಣಿಯಲ್ಲಾದ ಅವಮಾನಕ್ಕೆ ಟಿ20 ಸರಣಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಸೂಚನೆ ನೀಡಿದೆ.

ಮೈಕಲ್‌ ವಾನ್, ಜಾಫರ್​ ಟ್ವೀಟ್​ ವಾರ್​.. ಟೀಂ ಇಂಡಿಯಾದ ಈ ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌, ಪ್ರಸ್ತುತ ಟೀಂ ಇಂಡಿಯಾದ ಟಿ20 ತಂಡಕ್ಕಿಂತ ಐಪಿಎಲ್‌ನ ಮುಂಬೈ ಇಂಡಿಯನ್ಸ್ ಅತ್ಯುತ್ತಮ ತಂಡ ಎಂದು ಬರೆದುಕೊಂಡಿದ್ದಾರೆ.

ಮೈಕಲ್‌ ವಾನ್‌ ಟ್ವೀಟ್​ಗೆ ಪ್ರತಿಕ್ರಿಯಿಸಿದ ಭಾರತ ಟೆಸ್ಟ್​ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಾಸಿಮ್‌ ಜಾಫರ್‌, ಎಲ್ಲಾ ತಂಡಗಳು ನಾಲ್ಕು ವಿದೇಶಿ ಆಟಗಾರರೊಂದಿಗೆ ಆಡುವಷ್ಟು ಅದೃಷ್ಟಶಾಲಿಯಾಗಿಲ್ಲ ಮೈಕಲ್‌ ಎಂದು ಇಂಗ್ಲೆಂಡ್‌ ಮಾಜಿ ನಾಯಕನಿಗೆ ತೀರುಗೇಟು ನೀಡಿದರು. ಐಪಿಎಲ್‌ ತಂಡಗಳಲ್ಲಿ ಒಟ್ಟು ನಾಲ್ಕು ಮಂದಿ ವಿದೇಶಿ ಆಟಗಾರರು ಕಣಕ್ಕಿಳಿಯುವ ನಿಯಮ ಐಪಿಎಲ್​ ಮಂಡಳಿ ಜಾರಿಗೆ ತಂದಿದೆ. ಆದರೆ, ಇಂಗ್ಲೆಂಡ್‌ ತಂಡದಲ್ಲಿ ಜೇಸನ್ ರಾಯ್‌ (ದಕ್ಷಿಣ ಆಫ್ರಿಕಾ ಮೂಲ), ಬೆನ್‌ ಸ್ಟೋಕ್ಸ್ (ನ್ಯೂಜಿಲೆಂಡ್‌ ಮೂಲ), ಜೋಫ್ರ ಆರ್ಚರ್‌ (ಬಾರ್ಬಡೋಸ್‌ ಮೂಲ) ಹಾಗೂ ಇಯಾನ್‌ ಮಾರ್ಗನ್‌ (ಐರ್ಲೆಂಡ್‌ ಮೂಲ) ಆಡುತ್ತಿದ್ದಾರೆನ್ನುವ ಮೂಲಕ ವಾನ್‌ಗೆ, ವಾಸಿಮ್‌ ಜಾಫರ್‌ ಕಿಚಾಯಿಸಿದರು.

ಲಾರ್ಡ್ಸ್‌ನಲ್ಲಿ ಔಟ್‌ ಆಗಿದ್ದರಿಂದ ಇನ್ನೂ ನೀವು ಚೇತರಿಸಿಕೊಳ್ಳಲಿಲ್ಲವೇ? ಇವರಿಬ್ಬರ ನಡುವಿನ ಟ್ವೀಟ್ ವಾರ್​ ಇಲ್ಲಿಗೆ ಮುಗಿಯಲಿಲ್ಲ. ಜಾಫರ್‌ ಪ್ರತಿಕ್ರಿಯೆಗೆ ಸುಮ್ಮನಿರದ ಮೈಕಲ್‌ ವಾನ್‌, ಲಾರ್ಡ್ಸ್‌ನಲ್ಲಿ ಔಟ್‌ ಆಗಿದ್ದರಿಂದ ಇನ್ನೂ ನೀವು ಚೇತರಿಸಿಕೊಳ್ಳಲಿಲ್ಲವೇ? ಎಂದು 2002ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲನೇ ಟೆಸ್ಟ್ ಇರಡನೇ ಇನಿಂಗ್ಸ್‌ನಲ್ಲಿ ಜಾಫರ್ ಅವರನ್ನು ವಾನ್‌ 53ಕ್ಕೆ ಔಟ್‌ ಮಾಡಿದ್ದ ಸಂಗತಿಯ ಮೂಲಕ ಮಾಜಿ ಆರಂಭಿಕನ ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾಫರ್‌, ಅವುಗಳು ಜೀವನದ ಅದ್ಭುತ ಅನುಭವಗಳು, ಎಂದು ಮರು ಟ್ವೀಟ್‌ ಮಾಡಿದರು. ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮಾರ್ಚ್‌ 14ರಂದು ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾರತ ತಕ್ಕ ತಿರುಗೇಟು ನೀಡುವ ನಿರೀಕ್ಷೆ ಇದೆ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ