ಮೈಸೂರು: ಕೊರೊನಾ ವಾರಿಯರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಚಾಲನೆ ನೀಡಿದ್ದಾರೆ. ಜಿಲ್ಲೆಯ ಜೆ.ಕೆ.ಮೈದಾನದಲ್ಲಿ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ ಬಳಿಕ ಬ್ಯಾಟ್ ಬೀಸಿ ಕ್ರಿಕೆಟ್ ಆಡುವ ಮೂಲಕ ತಂಡಗಳಿಗೆ ಹುರಿದುಂಬಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಆಯೋಚಿಸಲಾಗಿದ್ದ ಕೊರೊನಾ ವಾರಿಯರ್ಸ್ ಕಪ್ ಕ್ರಿಕೆಟ್ ಟೂರ್ನಿಗೆ ರೋಹಿಣಿ ಸಿಂಧೂರಿ ಬ್ಯಾಟ್ ಬೀಸಿ ಚಾಲನೆ ನೀಡಿದ್ರು. ಜೆ.ಕೆ.ಮೈದಾನದಲ್ಲಿ ಬ್ಯಾಟ್ ಬೀಸಿ ಎಂಜಾಯ್ ಮಾಡಿದ್ರು. ಇಂದಿನಿಂದ ಮೂರು ದಿನ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಶಿವರಾತ್ರಿಯ ದಿನದಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಫೀಲ್ಡ್ಗೆ ಇಳಿದಿದ್ದು ವಿಶೇಷವಾಗಿತ್ತು. ರಾತ್ರಿ ವೇಳೆಗೆ ಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲ ಕಡೆ ಫ್ಲಡ್ಲೈಟ್ ಕ್ರಿಕೆಟ್ ಪಂದ್ಯಗಳು ನಡೆದಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಕಾರಿಗೆ ಪಂಕ್ಚರ್ ಹಾಕಿದ್ರಾ ಮೈಸೂರು DC ರೋಹಿಣಿ ಸಿಂಧೂರಿ? ವಿಡಿಯೋ ಫುಲ್ ವೈರಲ್
Published On - 10:34 am, Fri, 12 March 21