AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಮೊದಲ ಎಸೆತ ಫೌಲ್, ಎರಡನೇ ಎಸೆತದಲ್ಲೇ ಚಿನ್ನ..!

Neeraj Chopra: ಪುರುಷರ ಜಾವೆಲಿನ್ ಥ್ರೋನಲ್ಲಿ ಈ ಬಾರಿ ಮೂವರು ಭಾರತೀಯರು ಕಾಣಿಸಿಕೊಂಡಿದ್ದು ವಿಶೇಷ. ಇವರಲ್ಲಿ ನೀರಜ್ ಚೋಪ್ರಾ ಅಗ್ರಸ್ಥಾನದೊಂದಿಗೆ ಪದಕಕ್ಕೆ ಮುತ್ತಿಟ್ಟರೆ, ಕಿಶೋರ್ ಜೆನಾ 5ನೇ ಸ್ಥಾನ ಅಲಂಕರಿಸಿದರು. ಇನ್ನು ಕನ್ನಡಿಗ ಮನು ಡಿಪಿ 6ನೇ ಸ್ಥಾನದೊಂದಿಗೆ ಗಮನ ಸೆಳೆದರು.

VIDEO: ಮೊದಲ ಎಸೆತ ಫೌಲ್, ಎರಡನೇ ಎಸೆತದಲ್ಲೇ ಚಿನ್ನ..!
Neeraj Chopra
TV9 Web
| Updated By: ಝಾಹಿರ್ ಯೂಸುಫ್|

Updated on:Aug 28, 2023 | 2:24 AM

Share

ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಗೆದ್ದು  ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. 12 ಆಟಗಾರರನ್ನು ಒಳಗೊಂಡ ಅಂತಿಮ ಹಣಾಹಣಿಯಲ್ಲಿ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದು ಚೋಪ್ರಾ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಹೊಸ ಇತಿಹಾಸ ನಿರ್ಮಿಸಿದರು.

ಸೋತು ಗೆದ್ದ ನೀರಜ್:

6 ಸುತ್ತಿನ ಈ ಸ್ಪರ್ಧೆಯ ಮೊದಲ ರೌಂಡ್​ನಲ್ಲೇ ನೀರಜ್ ಚೋಪ್ರಾ ಫೌಲ್ ಮಾಡಿದ್ದರು. ಆದರೆ ಅತ್ತ ಎಲ್ಲರೂ ಮೊದಲ ಎಸೆತದಲ್ಲೇ ಖಾತೆ ತೆರೆದಿದ್ದರು. ಇತ್ತ ನೀರಜ್ ಚೋಪ್ರಾ 12ನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಇನ್ನು ದ್ವಿತೀಯ ಸುತ್ತಿನಲ್ಲಿ ತಪ್ಪಾಗದಂತೆ ಎಚ್ಚರಿಕೆಯೊಂದಿಗೆ ಕಣಕ್ಕಿಳಿದ ನೀರಜ್ ಚೋಪ್ರಾ ಬರೋಬ್ಬರಿ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದರು. ಇದಾದ ಬಳಿಕ 86.32 ಮೀ, 84.64 ಮೀ, 87.73 ಮೀ, 83.98 ಮೀಟರ್​ವರೆಗೆ ಎಸೆದರೂ 2ನೇ ಸುತ್ತಿನ ದೂರವನ್ನು ಕ್ರಮಿಸಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ ಉಳಿದ ಸ್ಪರ್ಧಿಗಳು ನೀರಜ್ ಚೋಪ್ರಾ ಅವರ 88.17 ಮೀಟರ್​ ದೂರವನ್ನು ಹಿಂದಿಕ್ಕಲು ಸಫಲರಾಗಲಿಲ್ಲ. ಇದರೊಂದಿಗೆ ಭಾರತದ ಚಿನ್ನದ ಹುಡುಗನ ಪಾಲಿಗೆ ಮತ್ತೊಂದು ಚಿನ್ನದ ಪದಕ ಸೇರ್ಪಡೆಯಾಯಿತು.

ಜಾವೆಲಿನ್ ಥ್ರೋ ಫೈನಲ್ ರೌಂಡ್ ಫಲಿತಾಂಶ:

  1.  ನೀರಜ್ ಚೋಪ್ರಾ (ಭಾರತ)- 88.17 ಮೀ
  2.  ಅರ್ಷದ್ ನದೀಮ್ (ಪಾಕಿಸ್ತಾನ್)- 87.82 ಮೀ
  3.  ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್)- 86.67ಮೀ
  4. ಜೂಲಿಯನ್ ವೆಬರ್ (ಜರ್ಮನಿ)- 85.79ಮೀ
  5.  ಕಿಶೋರ್ ಜೆನಾ (ಭಾರತ)- 84.77 ಮೀ
  6. ಮನು ಡಿಪಿ (ಭಾರತ)- 84.14 ಮೀ
  7.  ಆಲಿವರ್ ಹೆಲ್ಯಾಂಡರ್ (ಫಿನ್​ಲ್ಯಾಂಡ್)- 83.38 ಮೀ
  8.  ಎಡಿಸ್ ಮಾಟುಸೆವಿಸಿಯಸ್ (ಲಿಥುವೇನಿಯಾ)- 82.29 ಮೀ
  9.  ಡೇವಿಡ್ ವೆಗ್ನರ್ (ಪೊಲೆಂಡ್)- 80.75 ಮೀ
  10.  ಇಹಾಬ್ ಅಬ್ದೆಲ್​ರೆಹ್ಮಾನ್ (ಈಜಿಪ್ಟ್)- 80.64 ಮೀ
  11.  ಆಂಡ್ರಿಯನ್ ಮರ್ಡೇರೆ (ಮೊಲ್ಡೊವಾ)- 79.66 ಮೀ
  12.  ಟಿಮೋತಿ ಹರ್ಮನ್ (ಬೆಲ್ಜಿಯಂ)- 74.56 ಮೀ

ಫೈನಲ್​ನಲ್ಲಿ ಮೂವರು ಭಾರತೀಯರು:

ಪುರುಷರ ಜಾವೆಲಿನ್ ಥ್ರೋನಲ್ಲಿ ಈ ಬಾರಿ ಮೂವರು ಭಾರತೀಯರು ಕಾಣಿಸಿಕೊಂಡಿದ್ದು ವಿಶೇಷ. ಇವರಲ್ಲಿ ನೀರಜ್ ಚೋಪ್ರಾ ಅಗ್ರಸ್ಥಾನದೊಂದಿಗೆ ಪದಕಕ್ಕೆ ಮುತ್ತಿಟ್ಟರೆ, ಕಿಶೋರ್ ಜೆನಾ 5ನೇ ಸ್ಥಾನ ಅಲಂಕರಿಸಿದರು. ಇನ್ನು ಕನ್ನಡಿಗ ಮನು ಡಿಪಿ 6ನೇ ಸ್ಥಾನದೊಂದಿಗೆ ಗಮನ ಸೆಳೆದರು.

ಫೈನಲ್​ನ 6 ಸುತ್ತಿನಲ್ಲಿ ಭಾರತೀಯ ಪ್ರದರ್ಶನ:

ನೀರಜ್ ಚೋಪ್ರಾ:

  1. ಫೌಲ್​
  2. 88.17 ಮೀ
  3. 86.32 ಮೀ
  4. 84.64 ಮೀ
  5. 87.73 ಮೀ
  6. 83.98 ಮೀ

ಡಿಪಿ ಮನು:

  1. 78.44 ಮೀ
  2. ಫೌಲ್
  3. 83.72 ಮೀ
  4. ಫೌಲ್
  5. 83.48 ಮೀ
  6. 84.14 ಮೀ

ಇದನ್ನೂ ಓದಿ: ಬರೋಬ್ಬರಿ 23 ಪದಕಗಳನ್ನು ಗೆದ್ದ ನೀರಜ್ ಚೋಪ್ರಾ: ಇಲ್ಲಿದೆ ಸಂಪೂರ್ಣ ಪಟ್ಟಿ

ಕಿಶೋರ್ ಜೆನಾ:

  1. 75.70ಮೀ
  2. 82.82ಮೀ
  3. ಫೌಲ್
  4. 80.19 ಮೀ
  5. 84.77 ಮೀ
  6. ಫೌಲ್​

Published On - 1:57 am, Mon, 28 August 23