ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕಕ್ಕೆ ಕೊರಳೊಡ್ದಿದರು. ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡು ದಾಖಲೆ ಬರೆದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಮೊಟ್ಟ ಮೊದಲ ಭಾರತೀಯ ಎಂಬ ದಾಖಲೆ ನೀರಜ್ ನಿರ್ಮಿಸಿದರು. ಈ ಈವೆಂಟ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಸ್ಥಾನವನ್ನು ಗಳಿಸಿದರು.
ಫೈನಲ್ನಲ್ಲಿ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಕುತೂಹಲಕಾರಿ ಪಂದ್ಯದಲ್ಲಿ ಪಾಕ್ ಆಟಗಾರನನ್ನು ನೀರಜ್ ಸೋಲಿಸಿದಾಗ ಇಡೀ ಭಾರತವೇ ಇದನ್ನು ಸಂಭ್ರಮಿಸಿತು. ಇದೀಗ ಚೋಪ್ರಾ ಅವರ ತಾಯಿ, ಸರೋಜ್ ದೇವಿ ತನ್ನ ಮಗನ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನೀರಜ್ ಪಾಕಿಸ್ತಾನಿ ಎದುರಾಳಿಯನ್ನು ಗೆದ್ದ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.
9 ಸಿಕ್ಸರ್, 7 ಫೋರ್: ತೂಫಾನ್ ಶತಕ ಸಿಡಿಸಿದ ಕರುಣ್ ನಾಯರ್
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸರೋಜ್ ದೇವಿ ಅವರು ತಮ್ಮ ಮಗನ ಗಮನಾರ್ಹ ಸಾಧನೆಯ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವುದು ಕಂಡುಬಂದಿದೆ. ನೀರಜ್ ಪಾಕಿಸ್ತಾನದ ಅರ್ಷದ್ ವಿರುದ್ಧ ಜಯಗಳಿಸಿದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ”ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ ಪಾಕಿಸ್ತಾನ ಅಥವಾ ಹರಿಯಾಣದವರು ಎಂಬ ಪ್ರಶ್ನೆಯೇ ಇಲ್ಲ. ನೀರಜ್ ಗೆದ್ದಿರುವುದು ಬಹಳ ಸಂತೋಷವಿದೆ. ಪಾಕಿಸ್ಥಾನಿ ಆಟಗಾರ ಗೆದ್ದಿದ್ದರೂ ಕೂಡ ಅಷ್ಟೇ ಸಂತೋಷ ಇರುತ್ತಿತ್ತು,” ಎಂದು ಹೇಳಿದ್ದಾರೆ.
A reporter asked #NeerajChopra ‘s mother about how she feels about Neeraj defeating a Pakistani athlete to win gold.
His mother said : A player is a player, it doesn’t matter where he comes from, I am glad that the Pakistani player ( Arshad Nadeem) won as well.
This whole… pic.twitter.com/imk3ZHyLrC
— Roshan Rai (@RoshanKrRaii) August 28, 2023
ಇದೇವೇಳೆ ನೀರಜ್ ಚೋಪ್ರಾ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಸರೋಜ್ ದೇವಿ, ”ಅವನಿಗೆ ಯಾವಾಗ ಮದುವೆ ಆಗಬೇಕು ಅನಿಸುತ್ತದೊ ಆಗ ಆಗುತ್ತಾನೆ, ಅವನ ಹೃದಯ ಬಯಸಿದಾಗ ಅದು ಸಂಭವಿಸುತ್ತದೆ, ಸದ್ಯ ಅವನು ಕ್ರೀಡೆಯ ಮೇಲೆ ಹೆಚ್ಚು ಗಮನಹರಿಸಿದ್ದಾನೆ. ಮದುವೆಯ ಬಗ್ಗೆ ನಾವು ಅವನ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ. ಅವನು ಬಯಸಿದಾಗ ಮದುವೆಯಾಗುತ್ತಾನೆ,” ಎಂದು ಹೇಳಿದ್ದಾರೆ.
ಫೈನಲ್ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ನೀರಜ್ ಚೋಪ್ರಾ ಸಂಭ್ರಮದಲ್ಲಿ ತೊಡಗಿದ್ದರು. ಈ ಸಂದರ್ಭ ಫೋಟೋಕ್ಕೆ ಪೋಸ್ ಕೊಡುವಾಗ ವಿಶೇಷ ಘಟನೆಯೊಂದು ಸಂಭವಿಸಿತು. ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಆಟಗಾರರು ಒಂದೇ ಫ್ರೇಮ್ನಲ್ಲಿ ನಿಲ್ಲಲು ಕೋರಲಾಯಿತು. ಚೋಪ್ರಾ ಹಾಗೂ ಮೂರನೇ ಸ್ಥಾನ ಪಡೆದು ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತಮ್ಮ ದೇಶದ ಧ್ವಜ ಹಿಡಿದು ಕ್ಯಾಮೆರಾ ಮುಂದೆ ನಿಂತಿದ್ದರಯ. ಆದರೆ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಪಾಕಿಸ್ತಾನದ ಅರ್ಷದ್ ನದೀಮ್ ಬಳಿ ತಮ್ಮ ದೇಶದ ಧ್ವಜ ಇರಲಿಲ್ಲ. ಈ ಸಂದರ್ಭ ಚೋಪ್ರಾ, ಅರ್ಷದ್ ಅವರನ್ನು ಕರೆದು ನನ್ನ ಬಳಿ ನಿಲ್ಲು ಎಂದು ಹೇಳಿ ಭಾರತದ ತ್ರಿವರ್ಣ ಧ್ವಜದ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.
Watch Neeraj Chopra inviting Silver medalist Arshad Nadeem (likely without flag) under Bharat’s 🇮🇳 #AkhandBharat pic.twitter.com/Hy9OlgKpTE
— Megh Updates 🚨™ (@MeghUpdates) August 28, 2023
ಈ ದಾಖಲೆಯ ಚಿನ್ನದ ಪದಕದೊಂದಿಗೆ ನೀರಜ್ ಜಾವೆಲಿನ್ ಇತಿಹಾಸದಲ್ಲಿ ಸತತವಾಗಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳನ್ನು ಗೆದ್ದ ಮೂರನೇ ವ್ಯಕ್ತಿ ಎನಿಸಿಕೊಂಡರು. ಇತಿಹಾಸದಲ್ಲಿ ಕೇವಲ ಇಬ್ಬರು ಕ್ರೀಡಾಪಟುಗಳು ಮಾತ್ರ ಈ ಸಾಧನೆ ಮಾಡಿದ್ದು, ಅವರು ಗಣರಾಜ್ಯದ ಜಾನ್ ಝೆಲೆನಿ ಮತ್ತು ನಾರ್ವೆಯ ಆಂಡ್ರೆಸ್ ಥಾರ್ಕಿಲ್‌ಸನ್ ಆಗಿದ್ದಾರೆ. ಸದ್ಯ ನೀರಜ್ ಅವರು 2024 ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್ಗೆ ನೀರಜ್ ಚೋಪ್ರಾ ಅರ್ಹತೆ ಪಡೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ