Asia Cup 2023 Live Streaming: ನಾಳೆಯಿಂದ ಏಷ್ಯಾಕಪ್ ಟೂರ್ನಿ ಆರಂಭ: ಎಷ್ಟು ಗಂಟೆಗೆ ಪಂದ್ಯ?, ಯಾವುದರಲ್ಲಿ ಲೈವ್?
Asia Cup 2023 Full Schedule, Squads, Live streaming Details: ಏಷ್ಯಾಕಪ್ 2023 ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಇದರ ಹಕ್ಕನ್ನು ಡಿಸ್ನಿ+ಹಾಟ್‌ಸ್ಟಾರ್ ಪಡೆದುಕೊಂಡಿದೆ. ಏಷ್ಯಾಕಪ್ನ ಎಲ್ಲ ಪಂದ್ಯಾವಳಿಯನ್ನು ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ ವೆಚ್ಚವಿಲ್ಲದೆ ವೀಕ್ಷಿಸಬಹುದು.
ಬಹುನಿರೀಕ್ಷಿತ ಏಷ್ಯಾಕಪ್ 2023 ಟೂರ್ನಿಗೆ (Asia Cup 2023) ಬುಧವಾರ ಚಾಲನೆ ಸಿಗಲಿದೆ. ಈ ವರ್ಷ ‘ಹೈಬ್ರಿಡ್ ಮಾದರಿ’ಯಲ್ಲಿ ಏಷ್ಯಾಕಪ್ ನಡೆಯುತ್ತಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಗಳನ್ನು ಆಯೋಜಿಸುತ್ತಿವೆ. ಆಗಸ್ಟ್ 30 ರಂದು ಆತಿಥೇಯ ಪಾಕಿಸ್ತಾನ ತಂಡ ಮುಲ್ತಾನ್ನಲ್ಲಿ ನೇಪಾಳವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ತೇರ್ಗಡೆಯಾಗುತ್ತದೆ. ಅಂತಿಮವಾಗಿ, ಸೂಪರ್ ಫೋರ್‌ನ ಅಗ್ರ ಎರಡು ತಂಡಗಳು ಫೈನಲ್ನಲ್ಲಿ ಮುಖಾಮುಖಿ ಆಗಲಿದೆ.
ಏಷ್ಯಾಕಪ್ 2023 ಲೈವ್ ಸ್ಟ್ರೀಮಿಂಗ್ ಮತ್ತು ನೇರ ಪ್ರಸಾರ:
ಏಷ್ಯಾಕಪ್ 2023 ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಇದರ ಹಕ್ಕನ್ನು ಡಿಸ್ನಿ+ಹಾಟ್‌ಸ್ಟಾರ್ ಪಡೆದುಕೊಂಡಿದೆ. ಏಷ್ಯಾಕಪ್ನ ಎಲ್ಲ ಪಂದ್ಯಾವಳಿಯನ್ನು ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ ವೆಚ್ಚವಿಲ್ಲದೆ ವೀಕ್ಷಿಸಬಹುದು. ಈ ಲೈವ್ ಸ್ಟ್ರೀಮಿಂಗ್ ಸೇವೆಯು ಮೊಬೈಲ್ ಅಪ್ಲಿಕೇಶನ್‌ಗೆ ಮಾತ್ರ ಸೀಮಿತವಾಗಿದೆ. ದೊಡ್ಡ ಪರದೆಯ ಮೇಲೆ ಲೈವ್ ವೀಕ್ಷಿಸಲು ಚಂದಾದಾರಿಕೆ ಅಗತ್ಯವಿದೆ.
ಭಾರತದ ಏಷ್ಯಾಕಪ್ ಶಿಬಿರ ಮುಕ್ತಾಯ: ಇಂದು ಶ್ರೀಲಂಕಾಕ್ಕೆ ಟೀಮ್ ಇಂಡಿಯಾ ಪ್ರಯಾಣ
ಶ್ರೀಲಂಕಾ, ಅಫ್ಘಾನಿಸ್ತಾನ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಮಾಲ್ಡೀವ್ಸ್ ಮತ್ತು ಭೂತಾನ್ ಸೇರಿದಂತೆ ಭಾರತ ಮತ್ತು ಅದರ ನೆರೆಯ ರಾಷ್ಟ್ರಗಳಲ್ಲಿ ಏಷ್ಯಾಕಪ್ 2023 ರ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1 ಎಚ್‌ಡಿ ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಏಷ್ಯಾಕಪ್ ಟೂರ್ನಿ ನೇರ ಪ್ರಸಾರ ಆಗಲಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಸೆಪ್ಟೆಂಬರ್ 2 ರಂದು ಕ್ಯಾಂಡಿಯ ಪಲ್ಲೆಕೆಲ್ಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಬರ್ ಅಜಮ್ ನೇತೃತ್ವದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತವು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸೆಪ್ಟೆಂಬರ್ 4 ರಂದು ಕ್ಯಾಂಡಿಯಲ್ಲಿ ನೇಪಾಳ ವಿರುದ್ಧ ಎರಡನೇ ಪಂದ್ಯ ಆಡಲಿದೆ.
ಏಷ್ಯಾಕಪ್ 2023 ವೇಳಾಪಟ್ಟಿ:
ಆಗಸ್ಟ್ 30: ಪಾಕಿಸ್ತಾನ -ನೇಪಾಳ, ಮುಲ್ತಾನ್, ಪಂದ್ಯ ಆರಂಭ ಮಧ್ಯಾಹ್ನ 2:30ಕ್ಕೆ
ಆಗಸ್ಟ್ 31: ಬಾಂಗ್ಲಾದೇಶ -ಶ್ರೀಲಂಕಾ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 2: ಪಾಕಿಸ್ತಾನ -ಭಾರತ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 3: ಬಾಂಗ್ಲಾದೇಶ -ಅಫ್ಘಾನಿಸ್ತಾನ, ಲಾಹೋರ್, ಮಧ್ಯಾಹ್ನ 2:30
ಸೆಪ್ಟೆಂಬರ್ 4: ಭಾರತ -ನೇಪಾಳ, ಕ್ಯಾಂಡಿ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 5: ಶ್ರೀಲಂಕಾ -ಅಫ್ಘಾನಿಸ್ತಾನ, ಲಾಹೋರ್, ಮಧ್ಯಾಹ್ನ 2:30
ಸೆಪ್ಟೆಂಬರ್ 6: A1 vs B2, ಲಾಹೋರ್, ಮಧ್ಯಾಹ್ನ 2:30
ಸೆಪ್ಟೆಂಬರ್ 9: B1 vs B2, ಕೊಲಂಬೊ, 3 ಗಂಟೆಗೆ
ಸೆಪ್ಟೆಂಬರ್ 10: A1 ವಿರುದ್ಧ A2, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 12: A2 vs B1, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 14: A1 vs B1, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 15: A2 vs B2, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ
ಸೆಪ್ಟೆಂಬರ್ 17: ಫೈನಲ್, ಕೊಲಂಬೊ, ಮಧ್ಯಾಹ್ನ 3 ಗಂಟೆಗೆ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ