AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಅರ್ಷದ್ ವಿರುದ್ಧ ಗೆದ್ದಿದ್ದು ಹೇಗನಿಸಿತು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನೀರಜ್ ಚೋಪ್ರಾ ತಾಯಿ

Neeraj Chopra's Mother Saroj Devi Interview: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ನೀರಜ್ ಚೋಪ್ರಾ ಸೋಲಿಸಿದಾಗ ಇಡೀ ಭಾರತವೇ ಇದನ್ನು ಸಂಭ್ರಮಿಸಿತು. ಇದೀಗ ಚೋಪ್ರಾ ಅವರ ತಾಯಿ, ಸರೋಜ್ ದೇವಿ ತನ್ನ ಮಗ ಪಾಕಿಸ್ತಾನಿ ಎದುರಾಳಿಯನ್ನು ಗೆದ್ದ ಬಗ್ಗೆ ಮಾತನಾಡಿದ್ದಾರೆ.

ಪಾಕಿಸ್ತಾನದ ಅರ್ಷದ್ ವಿರುದ್ಧ ಗೆದ್ದಿದ್ದು ಹೇಗನಿಸಿತು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನೀರಜ್ ಚೋಪ್ರಾ ತಾಯಿ
Neeraj Chopra, Arshad Nadeem and Saroj Devi
Vinay Bhat
|

Updated on: Aug 29, 2023 | 10:29 AM

Share

ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕಕ್ಕೆ ಕೊರಳೊಡ್ದಿದರು. ಪುರುಷರ ಜಾವೆಲಿನ್​ ಥ್ರೋ ಫೈನಲ್​ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡು ದಾಖಲೆ ಬರೆದರು. ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಮೊಟ್ಟ ಮೊದಲ ಭಾರತೀಯ ಎಂಬ ದಾಖಲೆ ನೀರಜ್ ನಿರ್ಮಿಸಿದರು. ಈ ಈವೆಂಟ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಸ್ಥಾನವನ್ನು ಗಳಿಸಿದರು.

ಫೈನಲ್​ನಲ್ಲಿ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಕುತೂಹಲಕಾರಿ ಪಂದ್ಯದಲ್ಲಿ ಪಾಕ್ ಆಟಗಾರನನ್ನು ನೀರಜ್ ಸೋಲಿಸಿದಾಗ ಇಡೀ ಭಾರತವೇ ಇದನ್ನು ಸಂಭ್ರಮಿಸಿತು. ಇದೀಗ ಚೋಪ್ರಾ ಅವರ ತಾಯಿ, ಸರೋಜ್ ದೇವಿ ತನ್ನ ಮಗನ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ನೀರಜ್ ಪಾಕಿಸ್ತಾನಿ ಎದುರಾಳಿಯನ್ನು ಗೆದ್ದ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಇದನ್ನೂ ಓದಿ
Image
ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಈ ದಿನಾಂಕದಂದು ಪ್ರಕಟ
Image
ಭಾರತದ ಏಷ್ಯಾಕಪ್ ಶಿಬಿರ ಮುಕ್ತಾಯ: ಇಂದು ಶ್ರೀಲಂಕಾಕ್ಕೆ ಟೀಮ್ ಇಂಡಿಯಾ ಪ್ರಯಾಣ
Image
ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ
Image
National Sports Day 2023: ಕುಹಕವಾಡಿದವರ ಮುಂದೆಯೇ ಕ್ರೀಡೆಯಲ್ಲಿ ಸಾಧಿಸಿ ತೋರಿಸಿದ ಕೊಡಗಿನ ಕುವರಿಯ ಯಶೋಗಾಥೆ

9 ಸಿಕ್ಸರ್, 7 ಫೋರ್​: ತೂಫಾನ್ ಶತಕ ಸಿಡಿಸಿದ ಕರುಣ್ ನಾಯರ್

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸರೋಜ್ ದೇವಿ ಅವರು ತಮ್ಮ ಮಗನ ಗಮನಾರ್ಹ ಸಾಧನೆಯ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವುದು ಕಂಡುಬಂದಿದೆ. ನೀರಜ್ ಪಾಕಿಸ್ತಾನದ ಅರ್ಷದ್ ವಿರುದ್ಧ ಜಯಗಳಿಸಿದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ”ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ ಪಾಕಿಸ್ತಾನ ಅಥವಾ ಹರಿಯಾಣದವರು ಎಂಬ ಪ್ರಶ್ನೆಯೇ ಇಲ್ಲ. ನೀರಜ್ ಗೆದ್ದಿರುವುದು ಬಹಳ ಸಂತೋಷವಿದೆ. ಪಾಕಿಸ್ಥಾನಿ ಆಟಗಾರ ಗೆದ್ದಿದ್ದರೂ ಕೂಡ ಅಷ್ಟೇ ಸಂತೋಷ ಇರುತ್ತಿತ್ತು,” ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ನೀರಜ್ ಚೋಪ್ರಾ ತಾಯಿ ಆಡಿದ ಮಾತುಗಳು:

ಇದೇವೇಳೆ ನೀರಜ್ ಚೋಪ್ರಾ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಸರೋಜ್ ದೇವಿ, ”ಅವನಿಗೆ ಯಾವಾಗ ಮದುವೆ ಆಗಬೇಕು ಅನಿಸುತ್ತದೊ ಆಗ ಆಗುತ್ತಾನೆ, ಅವನ ಹೃದಯ ಬಯಸಿದಾಗ ಅದು ಸಂಭವಿಸುತ್ತದೆ, ಸದ್ಯ ಅವನು ಕ್ರೀಡೆಯ ಮೇಲೆ ಹೆಚ್ಚು ಗಮನಹರಿಸಿದ್ದಾನೆ. ಮದುವೆಯ ಬಗ್ಗೆ ನಾವು ಅವನ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ. ಅವನು ಬಯಸಿದಾಗ ಮದುವೆಯಾಗುತ್ತಾನೆ,” ಎಂದು ಹೇಳಿದ್ದಾರೆ.

ಅರ್ಷದ್​ಗೆ ಭಾರತದ ಬಾವುಟ ಜೊತೆ ನಿಲ್ಲಲು ಹೇಳಿದ ನೀರಜ್:

ಫೈನಲ್​​ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ನೀರಜ್ ಚೋಪ್ರಾ ಸಂಭ್ರಮದಲ್ಲಿ ತೊಡಗಿದ್ದರು. ಈ ಸಂದರ್ಭ ಫೋಟೋಕ್ಕೆ ಪೋಸ್ ಕೊಡುವಾಗ ವಿಶೇಷ ಘಟನೆಯೊಂದು ಸಂಭವಿಸಿತು. ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಆಟಗಾರರು ಒಂದೇ ಫ್ರೇಮ್​ನಲ್ಲಿ ನಿಲ್ಲಲು ಕೋರಲಾಯಿತು. ಚೋಪ್ರಾ ಹಾಗೂ ಮೂರನೇ ಸ್ಥಾನ ಪಡೆದು ಜೆಕ್​ ಗಣರಾಜ್ಯದ ಜಾಕುಬ್ ವಡ್ಲೆಜ್ ತಮ್ಮ ದೇಶದ ಧ್ವಜ ಹಿಡಿದು ಕ್ಯಾಮೆರಾ ಮುಂದೆ ನಿಂತಿದ್ದರಯ. ಆದರೆ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಪಾಕಿಸ್ತಾನದ ಅರ್ಷದ್ ನದೀಮ್ ಬಳಿ ತಮ್ಮ ದೇಶದ ಧ್ವಜ ಇರಲಿಲ್ಲ. ಈ ಸಂದರ್ಭ ಚೋಪ್ರಾ, ಅರ್ಷದ್‌ ಅವರನ್ನು ಕರೆದು ನನ್ನ ಬಳಿ ನಿಲ್ಲು ಎಂದು ಹೇಳಿ ಭಾರತದ ತ್ರಿವರ್ಣ ಧ್ವಜದ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

ಇಲ್ಲಿದೆ ನೋಡಿ ಭಾರತದ ಬಾವುಟ ಜೊತೆ ಅರ್ಷದ್ ನಿಂತ ವಿಡಿಯೋ:

ಈ ದಾಖಲೆಯ ಚಿನ್ನದ ಪದಕದೊಂದಿಗೆ ನೀರಜ್ ಜಾವೆಲಿನ್ ಇತಿಹಾಸದಲ್ಲಿ ಸತತವಾಗಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳನ್ನು ಗೆದ್ದ ಮೂರನೇ ವ್ಯಕ್ತಿ ಎನಿಸಿಕೊಂಡರು. ಇತಿಹಾಸದಲ್ಲಿ ಕೇವಲ ಇಬ್ಬರು ಕ್ರೀಡಾಪಟುಗಳು ಮಾತ್ರ ಈ ಸಾಧನೆ ಮಾಡಿದ್ದು, ಅವರು ಗಣರಾಜ್ಯದ ಜಾನ್ ಝೆಲೆನಿ ಮತ್ತು ನಾರ್ವೆಯ ಆಂಡ್ರೆಸ್ ಥಾರ್ಕಿಲ್‌ಸನ್ ಆಗಿದ್ದಾರೆ. ಸದ್ಯ ನೀರಜ್ ಅವರು 2024 ರಲ್ಲಿ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್​ ಗೇಮ್ಸ್​ಗೆ ನೀರಜ್ ಚೋಪ್ರಾ ಅರ್ಹತೆ ಪಡೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..