ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಸಮಾರಂಭದ ವೇಳೆ ಎಲ್ಲ ತಂಡದ ನಾಯಕರು ಹಾಜರಿರಲಿದ್ದಾರೆ. ಜೊತೆಗೆ ಮಾಧ್ಯಮದವರ ಜೊತೆ ಮಾತನಾಡಲಿದ್ದಾರೆ. ಐಸಿಸಿ ಕಳೆದ ವರ್ಷ, ಆಸ್ಟ್ರೇಲಿಯಾದಲ್ಲಿ 2022 ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಕೂಡ ಇದೇ ಪ್ಲಾನ್ ಮಾಡಿತ್ತು ಎಲ್ಲಾ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಐಸಿಸಿ ಈ ವರ್ಷವೂ ಇದೇ ರೀತಿಯ ಪ್ಲಾನ್ ಆಯೋಜಿಸಿದೆ.