ಉಗಾಂಡಾದಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೊಟೆಲ್​ ಬಳಿ ಅವಳಿ ಬಾಂಬ್​ ಸ್ಫೋಟ; ಆಟಗಾರರು ಸುರಕ್ಷಿತ

ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್​ ತಂಡಗಳು ಉಗಾಂಡಾಕ್ಕೆ ತೆರಳಿವೆ. ಅದರಲ್ಲಿ ಭಾರತ ತಂಡ ಆಫ್ರಿಕನ್​ ಲಿಮಿಟೆಡ್​ ಕನ್ವೆನ್ಷನ್​ ಸೆಂಟರ್​​ನಲ್ಲಿ ತಂಗಿತ್ತು. ಇದೇ ಹೋಟೆಲ್​ ಬಳಿಯೇ ಸ್ಫೋಟ ಉಂಟಾಗಿದೆ.

ಉಗಾಂಡಾದಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೊಟೆಲ್​ ಬಳಿ ಅವಳಿ ಬಾಂಬ್​ ಸ್ಫೋಟ; ಆಟಗಾರರು ಸುರಕ್ಷಿತ
ಉಗಾಂಡಾದಲ್ಲಿ ಅವಳಿ ಸ್ಫೋಟ
Follow us
TV9 Web
| Updated By: Lakshmi Hegde

Updated on:Nov 17, 2021 | 8:09 AM

ಇಂಟರ್​​ನ್ಯಾಷನಲ್​ ಪ್ಯಾರಾ ಬ್ಯಾಡ್ಮಿಂಟನ್​ 2021 ಟೂರ್ನಿಯಲ್ಲಿ ಪಾಲ್ಗೊಳ್ಳಲು ಉಗಾಂಡಾಕ್ಕೆ ತೆರಳಿರುವ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ (Para Badminton)​ ತಂಡ ಉಳಿದುಕೊಂಡಿರುವ ಹೋಟೆಲ್​ ಸಮೀಪವೇ ಎರಡು ಬಾಂಬ್ ಸ್ಫೋಟ (Bomb Blast) ಆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈ ಪ್ಯಾರಾ ಬ್ಯಾಡ್ಮಿಂಟನ್​ ತಂಡದಲ್ಲಿ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ (Pramod Bhagat)​, ಕಂಚಿನ ಪದಕ ವಿಜೇತ ಮನೋಜ್​ ಸರ್ಕಾರ್​ ಮತ್ತು ಹಾಲಿ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾನಸಿ ಜೋಶಿ ಇದ್ದಾರೆ. ಈ ಬಾಂಬ್​ ಸ್ಫೋಟದಿಂತ ಭಾರತದ ಪ್ಯಾರಾ ಬ್ಯಾಡ್ಮಿಂಟನ್​ ತಂಡದ ಆಟಗಾರರಿಗಾಗಲಿ, ಕೋಚ್​ಗಾಗಲಿ ಯಾವುದೇ ತೊಂದರೆ ಆಗಿಲ್ಲ, ನಾವೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಪ್ರಮೋದ್​ ಭಗತ್​ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. 

ಅಂದಹಾಗೆ ಈ ಪ್ಯಾರಾ ಬ್ಯಾಡ್ಮಿಂಟನ್​ ಟೂರ್ನಿ ನವೆಂಬರ್​ 16ರಿಂದ ಪ್ರಾರಂಭವಾಗಿದ್ದು 21ರವರೆಗೆ ನಡೆಯಲಿದೆ. ತನ್ನಿಮಿತ್ತ ಉಗಾಂಡಾದ ಕಂಪಾಲಕ್ಕೆ ತೆರಳಿರುವ ಭಾರತೀಯ ಆಟಗಾರರು, ಇನ್ನಿತರ ಸದಸ್ಯರು ಸೇರಿ 40 ಮಂದಿಯನ್ನು ಒಳಗೊಂಡ ತಂಡ ಅಲ್ಲಿನ ಹೋಟೆಲ್​​ನಲ್ಲಿ ಆಶ್ರಯ ಪಡೆದಿತ್ತು.  ಆ ಹೋಟೆಲ್​​ಗಿಂತ ಸುಮಾರು 100 ಮೀಟರ್​​ ಅಂತರದಲ್ಲಿ ಅವಳಿ ಸ್ಫೋಟ ಉಂಟಾಗಿದೆ. ಇದು ಆತ್ಮಾಹುತಿ ಬಾಂಬ್​ ಸ್ಫೋಟ ಎಂದೂ ಹೇಳಲಾಗಿದೆ. ಈ ಬಗ್ಗೆ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಕೂಡ ಟ್ವೀಟ್ ಮಾಡಿದೆ.

ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್​ ತಂಡಗಳು ಉಗಾಂಡಾಕ್ಕೆ ತೆರಳಿವೆ. ಅದರಲ್ಲಿ ಭಾರತ ತಂಡ ಆಫ್ರಿಕನ್​ ಲಿಮಿಟೆಡ್​ ಕನ್ವೆನ್ಷನ್​ ಸೆಂಟರ್​​ನಲ್ಲಿ ತಂಗಿತ್ತು. ಇದೇ ಹೋಟೆಲ್​ ಬಳಿಯೇ ಸ್ಫೋಟ ಉಂಟಾಗಿದೆ. ಇನ್ನೂ ಕೆಲವು ದೇಶಗಳ ಆಟಗಾರರು ಸಿಟಿ ಸೆಂಟರ್​ ಬಳಿಕ ಮೋಜ್​ ಚೆಕರ್ಸ್​ ಹಾಲಿಡೇ ಇನ್​​ ಎಂಬ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದಾರೆ.  ಟೂರ್ನಿಮೆಂಟ್​​ನ ಮೊದಲ ಪಂದ್ಯ ನಿನ್ನೆ (ನವೆಂಬರ್​ 16) ಇತ್ತು. ಪಂದ್ಯಕ್ಕೆಂದು ಕ್ರೀಡಾಂಗಣಕ್ಕೆ ತೆರಳಲು ಟೂರ್ನಿಮೆಂಟ್​ ಬಸ್​ ಹತ್ತಲೆಂದು ಭಾರತೀಯ ಆಟಗಾರರು ತಮ್ಮ ಸಹ ಸ್ಪರ್ಧಿಗಳೊಟ್ಟಿಗೆ ಹೊರಗೆ ಬಂದ ಸಂದರ್ಭದಲ್ಲಿ ದೊಡ್ಡದಾದ ಶಬ್ದ ಕೇಳಿದೆ ಎಂದು ಹೇಳಲಾಗಿದೆ.  ಈ ಸ್ಫೋಟದಿಂದ ಸ್ಥಳೀಯರು ತುಂಬ ಕಂಗಾಲಾಗಿದ್ದಾರೆ. ಇವರಿದ್ದ ವಸತಿಗೃಹದ ಸಮೀಪದ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಯಾಗಿಲ್ಲ. ಅಂದಹಾಗೆ ಈ ಸ್ಫೋಟದಲ್ಲಿ ಉಂಟಾಗಿರುವ ಸಾವಿನ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ

Published On - 8:08 am, Wed, 17 November 21