ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ

TV9 Digital Desk

| Edited By: Lakshmi Hegde

Updated on:Nov 17, 2021 | 7:41 AM

ಶಾಲಾ ಕಾಲೇಜುಗಳನ್ನು ಮುಚ್ಚುವ ಜತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕೆಲಸ ಮಾಡಲಿ. ಇನ್ನುಳಿದ ಶೇ.50ರಷ್ಟು ಜನರಿಗೆ ವರ್ಕ್​ ಫ್ರಂ ಹೋಂ ಕೊಡಿ ಎಂದು ದೆಹಲಿ ಸೇರಿ 4 ಸರ್ಕಾರಗಳಿಗೆ ಸಿಕ್ಯೂಐ

ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ
ದೆಹಲಿ ವಾಯುಮಾಲಿನ್ಯ ಚಿತ್ರ

ದೆಹಲಿಯಲ್ಲಿ ವಾಯು ಗುಣಮಟ್ಟ(Delhi Air Quality) ಇನ್ನಷ್ಟು ಅಪಾಯದ ಹಂತಕ್ಕೆ ಇಳಿದಿದ್ದು, ಅಲ್ಲೀಗ ಭಾಗಶಃ ಲಾಕ್​ಡೌನ್​​ ಆಗಲಿದೆ. ರಾಷ್ಟ್ರರಾಜಧಾನಿ ಮತ್ತು ದೆಹಲಿಯೊಳಗೆ ಮತ್ತು ಸುತ್ತಮುತ್ತಲೂ ಇರುವ ಎಲ್ಲ ಶಾಲೆ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಸೂಚನೆವರೆಗೆ ಮುಚ್ಚಬೇಕು ಎಂದು ವಾಯುಗುಣಮಟ್ಟ ನಿರ್ವಹಣಾ ಆಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಇಲ್ಲಿ ಕೊವಿಡ್​ 19 ಕಾರಣದಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ಇತ್ತೀಚೆಗಷ್ಟೇ ಬಾಗಿಲು ತೆರೆದಿದ್ದವು. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಇದೀಗ ಹದಗೆಟ್ಟ ವಾಯುಮಾಲಿನ್ಯ ಪರಿಸ್ಥಿತಿಯಿಂದಾಗಿ ಮತ್ತೆ ಆನ್​ಲೈನ್​ ತರಗತಿ ನಡೆಸುವಂತಾಗಿದೆ.  

ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ನಿನ್ನೆ ರಾತ್ರಿ ದೆಹಲಿ, ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗ ಸರ್ಕಾರಗಳಿಗೆ ಸರಣಿ ನಿರ್ದೇಶನಗಳನ್ನು ಸೂಚಿಸಿದೆ. ದೆಹಲಿ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಉಂಟಾಗಿರುವ ವಾಯು ಮಾಲಿನ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಿಎಕ್ಯೂಎಂ ಮಾರ್ಗಸೂಚಿಯಲ್ಲಿ ವಿವರಿಸಿದೆ.   ದೆಹಲಿ-ಎನ್​​ಸಿಆರ್​ ಪ್ರದೇಶಗಳಲ್ಲಿ ಸದ್ಯ ವಾಯುಮಾಲಿನ್ಯ ಪರಿಸ್ಥಿತಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ಅದನ್ನು ಸರಿಪಡಿಸದೆ ಇದ್ದರೆ ಜನ ಜೀವನ ನಡೆಸುವುದೇ ಕಷ್ಟವಾಗುತ್ತದೆ ಎಂದು ಸುಪ್ರೀಂಕೋರ್ಟ್​ ಕೂಡ ದೆಹಲಿ ಆಪ್​ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಹೇಳಿತ್ತು. ಎರಡು ದಿನ ಲಾಕ್​ಡೌನ್​ ಮಾಡಿ ಎಂದು ಸೂಚನೆ ನೀಡಿತ್ತು. ಈ ಬಗ್ಗೆ ಚರ್ಚಿಸಲು ನಿನ್ನೆ ತುರ್ತು ಸಭೆ ನಡೆದಿತ್ತು. ಇದೀಗ ವಾಯುಗುಣಮಟ್ಟ ನಿರ್ವಹಣಾ ಆಯೋಗ ನೀಡಿರುವ ಸೂಚನೆಗಳನ್ನು ಸರ್ಕಾರ ಅನುಸರಿಸಿ, ನವೆಂಬರ್​ 22ಕ್ಕೆ ಅದು ಅನುಸರಣಾ ವರದಿಯನ್ನು ಸಲ್ಲಿಸಬೇಕಿದೆ.

ಇನ್ನು ಶಾಲಾ ಕಾಲೇಜುಗಳನ್ನು ಮುಚ್ಚುವ ಜತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕೆಲಸ ಮಾಡಲಿ. ಇನ್ನುಳಿದ ಶೇ.50ರಷ್ಟು ಜನರಿಗೆ ವರ್ಕ್​ ಫ್ರಂ ಹೋಂ ಕೊಡಿ. ಇದು ನವೆಂಬರ್​ 21ರವರೆಗೆ ಜಾರಿಯಲ್ಲಿರಲಿ ಎಂದು ಆಯೋಗ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.  ಹಾಗೇ, ಅಗತ್ಯ ವಸ್ತುಗಳನ್ನು ತರುವ ವಾಹನಗಳನ್ನು ಹೊರತುಪಡಿಸಿ ದೊಡ್ಡದೊಡ್ಡ ಟ್ರಕ್​​ಗಳನ್ನು ದೆಹಲಿಗೆ ಪ್ರವೇಶ ಮಾಡಬಾರದು ಎಂದು ಹೇಳಲಾಗಿದೆ. ಹಾಗೇ, ನವೆಂಬರ್​ 21ರವರೆಗೆ ನಗರದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಕಾರ್ಯವನ್ನೂ ನಿಲ್ಲಿಸುವಂತೆ ಸೂಚಿಸಲಾಗಿದೆ.

ಯಾವುದಕ್ಕೆಲ್ಲ ನಿರ್ಬಂಧವಿಲ್ಲ? 1.ರೈಲು ಸೇವೆ ಇರುತ್ತದೆ (ರೈಲ್ವೆ ಸ್ಟೇಶನ್​​ಗಳು ಮುಚ್ಚುವುದಿಲ್ಲ) 2.ಮೆಟ್ರೋ ರೈಲು ಸೇವೆಯೂ ಇರಲಿದೆ. 3. ಅಂತರ್​ ರಾಜ್ಯ ಬಸ್​ ಸಂಚಾರ, ವಿಮಾನ ಸಂಚಾರಗಳಿಗೆ ನಿರ್ಬಂಧವಿಲ್ಲ. 4. ರಾಷ್ಟ್ರೀಯ ಹಿತಾಸಕ್ತಿ ಯೋಜನೆಗಳು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ.

ಮಾಲಿನ್ಯಕಾರಕ ವಾಹನಗಳ ತಪಾಸಣೆ ಕೆಲವು ವಾಹನಗಳಿಗೆ ಮಾನ್ಯ ಮಾಡಿದ ಮಾಲಿನ್ಯ ನಿಯಂತ್ರಕ ಸರ್ಟಿಫಿಕೇಟ್​ಗಳು ಇರುತ್ತವೆ. ಆದರೆ ಅವು ಅತ್ಯಂತ ಮಲಿನಯುಕ್ತವಾಗಿದೆ ಎಂಬುದು ಕಣ್ಣಿಗೆ ಕಾಣುತ್ತದೆ. ಹಾಗಾಗಿ ಈ ಬಗ್ಗೆ ಕಟ್ಟುನಿಟ್ಟಾಗಿ ತಪಾಸಣೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ವಾಯುಗುಣಮಟ್ಟ ನಿರ್ವಹಣಾ ಆಯೋಗ ಸರ್ಕಾರಗಳಿಗೆ ಸೂಚಿಸಿದೆ.  ಇದರೊಂದಿಗೆ ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ 11 ಉಷ್ಣಸ್ಥಾವರಗಳನ್ನು ನವೆಂಬರ್​ 30ರವರೆಗೆ ನಿಷ್ಕ್ರಿಯಗೊಳಿಸಲೂ ಹೇಳಲಾಗಿದೆ.

ಇದನ್ನೂ ಓದಿ:  Vehicle of Gods: ಎಲ್ಲ ದೇವ, ದೇವತೆಯ ವಾಹನವೂ ಒಂದೊಂದು ಸಂದೇಶ ನೀಡುತ್ತದೆ! ಏನದು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada