ಅಫ್ಘಾನಿಸ್ತಾನದಲ್ಲಿ ವಿಮಾನದಿಂದ ಬಿದ್ದು ಸತ್ತಿರುವುದು ಖ್ಯಾತ ಫುಟ್ಬಾಲ್ ಆಟಗಾರ

| Updated By: Vinay Bhat

Updated on: Aug 20, 2021 | 7:07 AM

Zaki Anwari: ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟವರ ಪೈಕಿ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. 19 ವರ್ಷದ ಝಾಕಿ ಅನ್ವರಿ ಆಟಗಾರ ದುರಂತ ಅಂತ್ಯ ಕಂಡಿದ್ದಾನೆ.

ಅಫ್ಘಾನಿಸ್ತಾನದಲ್ಲಿ ವಿಮಾನದಿಂದ ಬಿದ್ದು ಸತ್ತಿರುವುದು ಖ್ಯಾತ ಫುಟ್ಬಾಲ್ ಆಟಗಾರ
Zaki Anwari
Follow us on

ಅಫ್ಘಾನಿಸ್ತಾನದ (Afghanistan) ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಝಾಕಿ ಅನ್ವರಿ (Zaki Anwari) ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ವಿಮಾನದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆ Ariana ವರದಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದರಿಂದ ಅಲ್ಲಿನ ಜನರ ಜೀವನ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಅಫ್ಘಾನ್‌ನಿಂದ ಬೇರೆ ದೇಶಕ್ಕೆ ಹೋಗಲು ಅಲ್ಲಿ ಜನ ಪರದಾಡುತ್ತಿದ್ದಾರೆ. ಆಗಸ್ಟ್ 15ರ ಭಾನುವಾರ ಚಲಿಸುತ್ತಿದ್ದ ಯುಎಸ್ ವಿಮಾನದಿಂದ ಜನ ಬಿದ್ದು ಮೃತರಾಗಿದ್ದ ಘಟನೆ ವರದಿಯಾಗಿತ್ತು. ಈ ಪೈಕಿ ಓರ್ವ ಫುಟ್ಬಾಲರ್ ಕೊನೆಯುಸಿರೆಳೆದಿರುವ ಸಂಗತಿ ಖಚಿತವಾಗಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು ದೇಶ ತೊರೆಯಲು ಮುಂದಾಗಿದ್ದರು. ಈ ಸಂದರ್ಭ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದರು. ಆದರೆ ಆಗಸದ ಮಧ್ಯದಲ್ಲಿ ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದರು.

ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟವರ ಪೈಕಿ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. 19 ವರ್ಷದ ಝಾಕಿ ಅನ್ವರಿ ಆಟಗಾರ ದುರಂತ ಅಂತ್ಯ ಕಂಡಿದ್ದಾನೆ. ಪ್ರತಿಭಾವಂತ ಫುಟ್ಬಾಲ್ ಆಟಗಾರನಾಗಿದ್ದ ಅನ್ವರಿ ಸಾವನ್ನು ಅಫ್ಘಾನಿಸ್ತಾನದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಜನರಲ್ ಡೈರೆಕ್ಟರೇಟ್ ದೃಢಪಡಿಸಿದೆ.

19 ವರ್ಷದವನಿದ್ದಾಗಿನಿಂದ ಅನ್ವರಿ ಅಫ್ಘಾನ್ ರಾಷ್ಟ್ರೀಯ ಯುವ ತಂಡದಲ್ಲಿ ಆಡುತ್ತಿದ್ದು ಗೆಳೆಯರು ಮತ್ತು ತರಬೇತುದಾರರಿಗೆ ಪ್ರೀತಿಪಾತ್ರರಾಗಿದ್ದನು. ಇವರು ಯುಎಸ್‌ಎಎಫ್ ಬೋಯಿಂಗ್ ಸಿ -17 ನಿಂದ ಕೆಳಗೆ ಬಿದ್ದಿದ್ದಾರೆ ಎಂದು ಜನರಲ್ ಡೈರೆಕ್ಟರೇಟ್ ಫಾರ್ ಸ್ಪೋರ್ಟ್‌ನಿಂದಮಾಹಿತಿ ಬಂದಿದೆ.

ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ಮರುದಿನವೇ ಹಮೀದ್ ಕರ್ಝೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಾವಿರಾರು ಅಫ್ಘಾನಿಸ್ತಾನದ ಪ್ರಜೆಗಳಲ್ಲಿ ಅನ್ವಾರಿಯೂ ಒಬ್ಬರಾಗಿದ್ದರು.

ರನ್‌ವೇಯಿಂದ ಹೊರಟ ಅಮೆರಿಕದ ವಾಯುಪಡೆಯ ವಿಮಾನದ ಬಳಿ ನೂರಾರು ಅಫ್ಘಾನಿಸ್ತಾನಗಳು ಕಿಕ್ಕಿರಿದು ತುಂಬಿದ್ದರು. ಕೆಲವರು ವಿಮಾನದ ಚಕ್ರಗಳಿಗೆ ಜೋತು ಬಿದ್ದರೆ ಇನ್ನು ಕೆಲವರು ರೆಕ್ಕೆಗಳ ಮೇಲೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಇಬ್ಬರು ಆಫ್ಘನ್ನರು ವಿಮಾನದಿಂದ ಜಾರಿ ಮನೆಯೊಂದರ ಮಾಳಿಗೆ ಮೇಲೆ ಬಿದ್ದಾಗ ಟ್ರಕ್ಕಿನ ಟೈರ್ ಬರ್ಸ್ಟ್ ಆದಂಥ ಶಬ್ದ ಕೇಳಿಸಿತಂತೆ!

ವಾಷಿಂಗ್​ಟನ್: ಕ್ಯಾಪಿಟೊಲ್​ನಲ್ಲಿ ಬಾಂಬ್​ ಬೆದರಿಕೆ, ದೂರ ಹೋಗುವಂತೆ ಪತ್ರಕರ್ತರಿಗೆ ಪೊಲೀಸರ ಸೂಚನೆ

(Afghanistan crisis Afghan national team footballer Zaki Anwari died in fall from US plane at Kabul Airport)