ಫುಟ್ ಬಾಲ್ ಮಾಂತ್ರಿಕ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಮತ್ತೊಂದು ಸರ್ವಕಾಲಿಕ ವಿಶ್ವದಾಖಲೆ ನಿರ್ಮಿಸಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಗೋಲ್ ಭಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸೆಪ್ಟೆಂಬರ್ 1 ರ ಬುಧವಾರದಂದು ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಈ ನೂತನ ಸಾಧನೆ ಮಾಡಿದ್ದು, ಇರಾನಿನ ಮಾಜಿ ದಿಗ್ಗಜ ಅಲಿ ದಾಯಿ (109 ಗೋಲು) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ವಿಶ್ವಕಪ್ ಫುಟ್ ಬಾಲ್ ಟೂರ್ನಿಯ ಕ್ವಾಲಿಫೈಯಿಂಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪೋರ್ಚುಗಲ್ ತಂಡ 2-1 ಅಂತರದ ಗೋಲುಗಳ ಜಯಭೇರಿ ಭಾರಿಸಿದ್ದು, ಈ ಪಂದ್ಯದಲ್ಲಿ ಗೋಲು ಭಾರಿಸಿ ರೊನಾಲ್ಡೋ ನೂತನ ಸಾಧನೆ ಮಾಡಿದರು. ರೊನಾಲ್ಡೋಗೆ ಇದು 110ನೇ ಅಂತರರಾಷ್ಟ್ರೀಯ ಗೋಲ್ ಆಗಿತ್ತು. 36 ವರ್ಷದ ರೊನಾಲ್ಡೋ ಜಾವೋ ಮಾರಿಯೋ ಪಾಸ್ ಮಾಡಿದ ಚೆಂಡನ್ನು ಬಲವಾಗಿ ಹೆಡ್ ಮಾಡುವ ಮೂಲಕ ಗೋಲ್ ಗಳಿಸಿದರು.
? He’s done it!
?? @Cristiano (110)
?? Ali Daei (109)? A phenomenal run of 49 goals in his last 47 Portugal appearances makes the monster from Madeira the outright leading scorer in men’s international history. Take a bow, legend ?♂️ pic.twitter.com/WFO7XbuKr8
— FIFA World Cup (@FIFAWorldCup) September 1, 2021
ಕ್ರಿಸ್ಟಿಯಾನೋ ರೊನಾಲ್ಡೋ ಈ ವಿಶ್ವದಾಖಲೆಯನ್ನು ನಿರ್ಮಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಹಾಗೂ ಫುಟ್ ಬಾಲ್ ಪ್ರಿಯರು ರೊನಾಲ್ಡೋ ವಿಶ್ವದಾಖಲೆಯನ್ನು ಕೊಂಡಾಡುತ್ತಿದ್ದಾರೆ. ಫಿಫಾ ವರ್ಲ್ಡ್ಕಪ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ರಿಕ್ರಿಸ್ಟಿಯಾನೋ ರೊನಾಲ್ಡೋ ಸಾಧಿಸಿರುವ ವಿಶ್ವ ದಾಖಲೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
ಇನ್ನೂ ಕ್ರಿಸ್ಟಿಯಾನೋ ರೊನಾಲ್ಡೋ ಈ ಗೋಲು ದಾಖಲೆಯನ್ನು ಮಾಡಲು 180 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಅತ್ತ ಇರಾನ್ ದೇಶದ ಫುಟ್ಬಾಲ್ ಆಟಗಾರ ಅಲಿ ದಾಯಿ 109 ಗೋಲ್ ದಾಖಲೆಯನ್ನು ಮಾಡಲು ಕೇವಲ 140 ಪಂದ್ಯಗಳನ್ನು ಮಾತ್ರ ತೆಗೆದುಕೊಂಡಿದ್ದರು.
ಫುಟ್ಬಾಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲ್ ಬಾರಿಸಿರುವ ಟಾಪ್ 10 ಫುಟ್ ಬಾಲ್ ಆಟಗಾರರು:
1 ಕ್ರಿಸ್ಟಿಯಾನೋ ರೊನಾಲ್ಡೋ (ಪೋರ್ಚುಗಲ್) 111 ಗೋಲ್
2 ಅಲಿ ದಾಯಿ (ಇರಾನ್) 109 ಗೋಲ್
3 ಮೊಖ್ತರ್ ದಹರಿ (ಮಲೇಷಿಯಾ) 89 ಗೋಲ್
4 ಫೆರೆನ್ಸ್ ಪುಸ್ಕಾಸ್ (ಹಂಗೇರಿ) 84 ಗೋಲ್
5 ಗಾಡ್ಫ್ರೇ ಚಿಟಾಲು (ಜಾಂಬಿಯಾ) 79 ಗೋಲ್
6 ಹುಸೇನ್ ಸಯೀದ್ (ಇರಾಗ್) 78 ಗೋಲ್
7 ಪೀಲೆ (ಬ್ರೆಜಿಲ್) 77 ಗೋಲ್
8 ಅಲಿ ಮಾಬ್ಖೌಟ್ (ಯುಎಇ) * 76 ಗೋಲ್
9 ಸ್ಯಾಂಡರ್ ಕೋಸ್ಕಿಸ್ (ಹಂಗೇರಿ) 75 ಗೋಲ್
10 ಕುನಿಶಿಗೆ ಕಾಮಮೊಟೊ (ಜಪಾನ್) 75 ಗೋಲ್
CPL 2021: 12 ಸಿಕ್ಸರ್, 8 ಫೋರ್: ರುಥೆರ್ಫಾರ್ಡ್ ಸ್ಫೋಟಕ ಆಟ: ಪೇಟ್ರಿಯಟ್ಸ್ಗೆ ಊಹಿಸಲಾಗದ ಜಯ
(Cristiano Ronaldo Breaks Ali Daeis Record For Most International Goals In Mens Football)
Published On - 2:11 pm, Thu, 2 September 21