CPL 2021: 12 ಸಿಕ್ಸರ್, 8 ಫೋರ್: ರುಥೆರ್ಫಾರ್ಡ್ ಸ್ಫೋಟಕ ಆಟ: ಪೇಟ್ರಿಯಟ್ಸ್ಗೆ ಊಹಿಸಲಾಗದ ಜಯ
Jamaica Tallawahs vs St Kitts and Nevis Patriots: ಪೇಟ್ರಿಯಟ್ಸ್ ತಂಡಕ್ಕೆ ಕೊನೆಯ 34 ಎಸೆತಗಳಲ್ಲಿ ಗೆಲ್ಲಲು 59 ರನ್ಗಳ ಅವಶಕ್ಯತೆ ಇತ್ತು. ಈ ಸಂದರ್ಭ ಸ್ಫೋಟಕ ಆಟಕ್ಕೆ ಮುಂದಾದ ಶೆರ್ಫಾನ್ ರುಥೆರ್ಫಾರ್ಡ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಇವರ ಜೊತೆಯಾದ ಫಾಬಿನ್ ಅಲೆನ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ವೆಸ್ಟ್ ಇಂಡೀಸ್ನಲ್ಲಿ ಆರಂಭವಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ 2021 (CPL 2021) ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಸೇಂಟ್ ಕಿಟ್ಸ್ ನೇವಿಸ್ ಪೇಟ್ರಿಯಟ್ಸ್ ತಂಡ ತನ್ನ ನಾಲ್ಕನೇ ಪಂದ್ಯದಲ್ಲೂ ಜಮೈಕಾ ತಲ್ಲವಾಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಮನಬಂದಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶೆರ್ಫಾನ್ ರುಥೆರ್ಫಾರ್ಡ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೇಂಟ್ ಕಿಟ್ಸ್ ನೇವಿಸ್ ಪೇಟ್ರಿಯಟ್ಸ್ ತಂಡ ನಾಲ್ಕರಲ್ಲೂ ಗೆದ್ದು ಬೀಗಿದ್ದು, 8 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಜಮೈಕಾ ತಂಡ ಆರಂಭದಲ್ಲಿ ಬಿರುಸಿನ ಆಟ ಪ್ರದರ್ಶಿಸಿತು. ವಾಲ್ಟನ್ 26 ರನ್ ಗಳಿಸಿ ರಿಟೇರ್ಡ್ ಆದರೆ, ಕೆನ್ನರ್ ಲೆವಿಸ್ 13 ರನ್ ಬಾರಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ಗಳು ಅಷ್ಟೇನು ಪರಿಣಾಮಕಾರಿಯಾಗಲಿಲ್ಲ. ನಾಯಕ ರೋಮನ್ ಪಾವೆಲ್ 24 ಹಾಗೂ ಕಾರ್ಲಸ್ ಭ್ರಾಥ್ವೈಡ್ 16 ಎಸೆತಗಳಲ್ಲಿ 27 ರನ್ ಬಾರಿಸಿದರು.
ಪರಿಣಾಮ ಜಮೈಕಾ ತಂಡ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಪೇಟ್ರಿಯಟ್ಸ್ ಪರ ಬ್ರಾವೋ 3 ವಿಕೆಟ್ ಕಿತ್ತರು.
Another masterclass from the most successful T20 bowler of all time. @DJBravo47 #JTvsSKNP #CPL21 #CricketPlayedLouder pic.twitter.com/2m3FMBWD6G
— CPL T20 (@CPL) September 2, 2021
167 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಪೇಟ್ರಿಯಟ್ಸ್ ತಂಡಕ್ಕೆ ಎವಿನ್ ಲೆವಿಸ್ ಅತ್ಯುತ್ತಮ ಆರಂಭ ಒದಗಿಸಿದರು. ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ಬಾರಿಸಿ 39 ರನ್ ಸಿಡಿಸಿದರು. ಇದರ ನಡುವೆ ಪೇಟ್ರಿಯಟ್ಸ್ ತಂಡ ನಿಧಾನಗತಿಯ ಆಟ ಪ್ರದರ್ಶಿಸಿತು. ರವಿ ಬೊಪಾರ 21 ಎಸೆತಗಳಲ್ಲಿ 18 ಹಾಗೂ ಡೆವಿನ್ ಥೋಮಸ್ 17 ಎಸೆತಗಳಲ್ಲಿ 12 ರನ್ ಗಳಿಸಿ ಔಟ್ ಆದರು.
ಹೀಗಾಗಿ ಪೇಟ್ರಿಯಟ್ಸ್ ತಂಡಕ್ಕೆ ಕೊನೆಯ 34 ಎಸೆತಗಳಲ್ಲಿ ಗೆಲ್ಲಲು 59 ರನ್ಗಳ ಅವಶಕ್ಯತೆ ಇತ್ತು. ಈ ಸಂದರ್ಭ ಸ್ಫೋಟಕ ಆಟಕ್ಕೆ ಮುಂದಾದ ಶೆರ್ಫಾನ್ ರುಥೆರ್ಫಾರ್ಡ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಇವರ ಜೊತೆಯಾದ ಫಾಬಿನ್ ಅಲೆನ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮನಬಂದಂತೆ ಬ್ಯಾಟ್ ಬೀಸಿದ ಈ ಜೋಡಿ ಎದುರಾಳಿ ಬೌಲರ್ಗಳ ಬೆವರಳಿಸಿ ಊಹಿಸಲಾಗದ ರೀತಿಯಲ್ಲಿ ಜಯ ತಂದಿಟ್ಟರು.
ಶೆರ್ಫಾನ್ ರುಥೆರ್ಫಾರ್ಡ್ ಕೇವಲ 26 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 50 ರನ್ ಚಚ್ಚಿದರೆ, ಅಲೆನ್ 12 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ನೊಂದಿಗೆ ಅಜೇಯ 30 ರನ್ ಸಿಡಿಸಿದರು. ಪೇಟ್ರಿಯಟ್ಸ್ ತಂಡ ಒಟ್ಟು 12 ಸಿಕ್ಸರ್, 8 ಫೋರ್ ಬಾರಿಸಿತು.
Yet another MAN OF THE MATCH award in the bag for @SRutherford_50 for his fabulous 50 off just 26 balls.
UNSTOPPABLE. RUTHLESS. RUTHERFORD. ?#stkitts #sknp #sknpatriots #patriots #stkittsandnevis?? #cpl21 #biggestpartyinsport #cricketplayedlouder #JTvsSKNP pic.twitter.com/7nLAzfXYVB
— SKNPatriots (@sknpatriots) September 2, 2021
15 ಓವರ್ಗೆ 4 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿದ್ದ ತಂಡ 17.4 ಓವರ್ನಲ್ಲಿ 169 ರನ್ ಸಿಡಿಸಿ ರೋಚಕ ಜಯ ಸಾಧಿಸಿತು.
India vs England: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ಗೆ ಇದೆಯಾ ಮಳೆಯ ಕಾಟ?: ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ
(CPL 2021: Sherfane Rutherford 50 Maintains and Fabian Allen 30 St Kitts and Nevis Patriots Unbeaten Start)