India vs England: 50 ವರ್ಷಗಳಿಂದ ಕಾಯುತ್ತಿದೆ ಭಾರತ: ಓವಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಕಿಂಗ್ ಕೊಹ್ಲಿ ಸೈನ್ಯ?

TV9 Digital Desk

| Edited By: Vinay Bhat

Updated on: Sep 02, 2021 | 10:34 AM

ಓವಲ್ ಕ್ರೀಡಾಂಗಣ ಭಾರತಕ್ಕೆ ಈವರೆಗೆ ಅಷ್ಟೊಂದು ಅದೃಷ್ಟವಾಗಿಲ್ಲ. ಈ ಮೈದಾನದಲ್ಲಿ ಆಡಿರುವ 13 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಜಯ ಸಾಧಿಸಿರುವುದು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ.

India vs England: 50 ವರ್ಷಗಳಿಂದ ಕಾಯುತ್ತಿದೆ ಭಾರತ: ಓವಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಕಿಂಗ್ ಕೊಹ್ಲಿ ಸೈನ್ಯ?
Virat Kohli Team India
Follow us

ಲಂಡನ್​ನ ಓವಲ್ (Oval) ಮೈದಾನದಲ್ಲಿ ಇಂದಿನಿಂದ ಶುರುವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ (4th Test) ಪಂದ್ಯ ಸಾಕಷ್ಟು ವಿಚಾರಗಳಿಗೆ ಕುತೂಹಲ ಕೆರಳಿಸಿದೆ. ಹೀನಾಯ ಸೋಲಿನಿಂದ ಕಮ್​ಬ್ಯಾಕ್ ಮಾಡಬೇಕಾದ ಅನಿವಾರ್ಯತೆ ಭಾರತಕ್ಕೆ ಒಂದು ಕಡೆಯಿದ್ದರೆ, ಬ್ಯಾಟ್ಸ್​ಮನ್​ಗಳು ಸಾಕಷ್ಟು ಒತ್ತಡದಲ್ಲಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಕುಸಿದಿದ್ದು ನಾಯಕನ ಆಟ ನೆನಪಿಸಬೇಕಿದೆ. ಇದರ ನಡುವೆ ಟೀಮ್ ಇಂಡಿಯಾ (Team India) ಓವಲ್ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸುವ ಅತ್ಯುತ್ತಮ ಅವಕಾಶ ಕೂಡ ಇದೆ.

ಹೌದು, ಓವಲ್ ಕ್ರೀಡಾಂಗಣ ಭಾರತಕ್ಕೆ ಈವರೆಗೆ ಅಷ್ಟೊಂದು ಅದೃಷ್ಟವಾಗಿಲ್ಲ. ಈ ಮೈದಾನದಲ್ಲಿ ಆಡಿರುವ 13 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಜಯ ಸಾಧಿಸಿರುವುದು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ. 1971ರ ಸಮಯದಲ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಈ ಪಂದ್ಯದ ಬಳಿಕ ನಡೆದ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಭಾರತ ಗೆಲುವಿನ ರುಚಿ ಸವಿದಿಲ್ಲ.

ಟೀಮ್ ಇಂಡಿಯಾ ಕಳೆದ 2007, 2014 ಮತ್ತು 2018 ರಲ್ಲಿ ಪ್ರವಾಸ ಕೈಗೊಂಡಾಗಲೆಲ್ಲ ಈ ಓವಲ್ ಕ್ರೀಡಾಂಗಣದಲ್ಲಿ ಒಂದೊಂದು ಪಂದ್ಯಗಳನ್ನಾಡಿತ್ತು. ಹೀಗೆ ಈ 3 ವರ್ಷಗಳಲ್ಲಿ ಓವಲ್ ಕ್ರೀಡಾಂಗಣದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಸೋಲನ್ನು ಕಂಡಿದೆ. ಹೀಗಾಗಿ ಓವಲ್ ಕ್ರೀಡಾಂಗಣದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಗೆದ್ದು 50 ವರ್ಷಗಳೇ ಕಳೆದಿವೆ. ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು ವಿರಾಟ್ ಸೈನ್ಯ ಈ ಬಾರಿ ಹೊಸ ಇತಿಹಾಸ ನಿರ್ಮಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷ ದಾಖಲೆಯತ್ತ ಟೀಮ್ ಇಂಡಿಯಾ ಆಟಗಾರರು:

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಕಲೆಹಾಕಿದರೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 23,000 ರನ್​ಗಳ ಸರದಾರ ಎಂದೆನಿಸಿಕೊಳ್ಳಲಿದ್ದಾರೆ. ಇತ್ತ ಹಿಟ್​ಮ್ಯಾನ್ ರೋಹಿತ್ ಶರ್ಮಾ 22 ರನ್ ಗಳಿಸಿದರೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 15,000 ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ.

ಇನ್ನೂ ಬೌಲಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಮೊಹಮ್ಮದ್ ಶಮಿಗೆ 200ನೇ ಟೆಸ್ಟ್ ವಿಕೆಟ್ ಪಡೆಯಲು 5 ವಿಕೆಟ್​ಗಳ ಅವಶ್ಯಕತೆಯಿದೆ.

ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿರುವ ಓವಲ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವಾಗಲಿದೆ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ರನ್ ಕಲೆ ಹಾಕುವುದು ಒಳ್ಳೆಯ ನಿರ್ಧಾರವಾಗಿರಲಿದೆ. ಮೊದಲ ಎರಡು ದಿನ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿರಲಿರುವ ಪಿಚ್ ಸಮಯ ಕಳೆದಂತೆ ಸ್ಪಿನ್ ಬೌಲರ್‌ಗಳಿಗೂ ಒಗ್ಗಿಕೊಳ್ಳಲಿದೆ. ಈ ಮೂಲಕ ಮತ್ತೊಂದು ಸಮತೋಲನವಾದ ಟೆಸ್ಟ್ ಪಂದ್ಯಕ್ಕೆ ಓವಲ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ. ಎಲ್ ರಾಹುಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

India vs England: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ಗೆ ಇದೆಯಾ ಮಳೆಯ ಕಾಟ?: ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

India vs England: 4ನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ 3 ಬದಲಾವಣೆ?: ಇಲ್ಲಿದೆ ಕೊಹ್ಲಿ ಪಡೆಯ ಸಂಭಾವ್ಯ ಪ್ಲೇಯಿಂಗ್ XI

(India vs England Kohli team chance to create a record 50 years since India is waiting for victory at Oval)

ತಾಜಾ ಸುದ್ದಿ

Related Stories

Click on your DTH Provider to Add TV9 Kannada