AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi League: ರಣ ರೋಚಕ ಫೈನಲ್: ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆದ್ದ ದಬಾಂಗ್ ಡೆಲ್ಲಿ

Dabang Delhi vs Patna Pirates: ಪ್ರೊ ಕಬಡ್ಡಿ ಲೀಗ್ ರೋಚಕ ಫೈನಲ್​ನಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಟ್ನಾ ಪೈರೇಟ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ದಬಾಂಗ್ ಡೆಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.

Pro Kabaddi League: ರಣ ರೋಚಕ ಫೈನಲ್: ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆದ್ದ ದಬಾಂಗ್ ಡೆಲ್ಲಿ
PKL Final Dabang Delhi
TV9 Web
| Updated By: Vinay Bhat|

Updated on:Feb 26, 2022 | 8:36 AM

Share

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಫೈನಲ್ ಪಂದ್ಯದ ರಣ ರೋಚಕ ಹಣಾಹಣಿಯಲ್ಲಿ 3 ಬಾರಿಯ ಚಾಂಪಿಯನ್ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟ್ನಾ ಪೈರೇಟ್ಸ್ (Patna Pirates) ತಂಡವನ್ನು ಮಣಿಸಿದ ದಬಂಗ್ ಡೆಲ್ಲಿ (Dabang Delhi) ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ವೈಟ್‌ಫೀಲ್ಡ್‌ನಲ್ಲಿರುವ ಹೋಟೆಲ್ ಶೆರಟನ್ ಗ್ರ್ಯಾಂಡ್‍ನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ 37-36ರಲ್ಲಿ ಜಯ ಗಳಿಸಿತು. ರೋಚಕ ಪಂದ್ಯದಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಟ್ನಾ ಪೈರೇಟ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.

ಉಭಯ ತಂಡಗಳು ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದವು. ಟ್ಯಾಕ್ಲಿಂಗ್ ಮಾಡಿ ಅಪಾಯಕ್ಕೆ ಸಿಲುಕಲು ಮುಂದಾಗದ ತಂಡಗಳು ರೇಡಿಂಗ್ ಮೂಲಕವೇ ಪಾಯಿಂಟ್‍ಗಳನ್ನು ಗಳಿಸುತ್ತ ಸಾಗಿದವು. ಡೆಲ್ಲಿ ಪರವಾಗಿ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಪದೇ ಪದೇ ಎದುರಾಳಿ ಪಾಳಯಕ್ಕೆ ನುಗ್ಗಿ ಪಾಯಿಂಟ್‍ಗಳೊಂದಿಗೆ ವಾಪಸಾದರು. ಪಟ್ನಾ ತಂಡವು ಸಚಿನ್, ಗುಮಾನ್ ಸಿಂಗ್ ಮತ್ತು ಪ್ರಶಾಂತ್ ರೈ ಮೂಲಕ ಪಾಯಿಂಟ್‍ಗಳನ್ನು ಗಳಿಸಿತು. ಹೀಗಾಗಿ 3-3, 4-4 ಮತ್ತು 5-5ರಲ್ಲಿ ಪಂದ್ಯ ಸಾಗಿತು.

ಪಟ್ನಾ ತಂಡ ಮೊದಲಾರ್ಧದಲ್ಲಿ 17-15 ರಿಂದ ಮುನ್ನಡೆ ಸಾಧಿಸಿತ್ತು. 29ನೇ ನಿಮಿಷದಲ್ಲಿ 19-23ರಿಂದ ಹಿನ್ನಡೆಯಲ್ಲಿದ್ದ ಡೆಲ್ಲಿ ತಂಡಕ್ಕೆ ವಿಜಯ್ ಆಸರೆಯಾದರು. ಈ ವೇಳೆ ರೈಡಿಂಗ್‌ಗೆ ತೆರಳಿದ ವಿಜಯ್ ಬೋನಸ್ ಸಹಿತ 3 ಅಂಕ ತಂದು ಪಂದ್ಯಕ್ಕೆ ತಿರುವು ನೀಡಿದರು. ಇದರ ಮರು ನಿಮಿಷದಲ್ಲಿ 30-30 ರಿಂದ ಪಂದ್ಯ ಸಮಬಲ ಕಂಡಿತು. ಬಳಿಕ ವಿಜಯ್ ರೈಡಿಂಗ್ ಬಂದಾಗಲೆಲ್ಲಾ ಪಾಯಿಂಟ್ಸ್ ತರುವ ಮೂಲಕ ತಂಡಕ್ಕೆ ಮುನ್ನಡೆ ಕೊಡಿಸಿದರು, ವಿಜಯ್ ಆಕರ್ಷಕ ರೈಡಿಂಗ್ ಲವಾಗಿ ಡೆಲ್ಲಿ ತಂಡ 33ನೇ ನಿಮಿಷದಲ್ಲಿ ಪಟ್ನಾ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ಪಂದ್ಯದಲ್ಲಿ 30-28ರಿಂದ ಮುನ್ನಡೆ ಕಂಡಿತು. ವಿಜಯ್ ಮ್ಯಾಜಿಕ್‌ನಿಂದ ಒಂದೇ ರೈಡಿಂಗ್‌ನಲ್ಲಿ 2 ಅಂಕ ತಂದು ಮುನ್ನಡೆಯನ್ನು 32-28ಕ್ಕೆ ಹಿಗ್ಗಿಸಿದರು, 38ನೇ ನಿಮಿಷದಲ್ಲಿ 35-30ರಿಂದ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ತಂಡ ಗೆಲುವಿನ ನಗೆ ಬೀರಿತು. ಕಡೇ ನಿಮಿಷದವರೆಗೂ ಪಟ್ನಾ ತಂಡ ತಿರುಗೇಟು ನೀಡಲು ಯತ್ನಿಸಿದರೂ ವೀರೋಚಿತ ಸೋಲನುಭವಿಸಿತು.

ಪಂದ್ಯ ಮುಕ್ತಾಯಕ್ಕೆ 10 ನಿಮಿಷ ಇರುವಾಗ ಸ್ಕೋರು 24-24ರಲ್ಲಿ ಸಮ ಆಯಿತು. ನವೀನ್ ಮೂಲಕ ಒಂದೊಂದೇ ಪಾಯಿಂಟ್ ಹೆಕ್ಕಿದ ಡೆಲ್ಲಿ 34ನೇ ನಿಮಿಷದಲ್ಲಿ ನೀರಜ್ ಅವರನ್ನು ಹಿಡಿದುರುಳಿಸಿ ಪಟ್ನಾ ಅಂಗಣವನ್ನು ಖಾಲಿ ಮಾಡಿತು. 32-29ರ ಮುನ್ನಡೆಯನ್ನೂ ಗಳಿಸಿತು. ನವೀನ್ (13 ಪಾಯಿಂಟ್ಸ್) ಮತ್ತು ಆಲ್‍ರೌಂಡರ್ ವಿಜಯ್ (14 ಪಾಯಿಂಟ್ಸ್) ಎಚ್ಚರಿಕೆಯ ಆಟದ ಮೂಲಕ ಮುನ್ನಡೆ ಉಳಿಸಿಕೊಂಡರು.

IND vs SL 2nd T20: ಇಂದು ಭಾರತ- ಶ್ರೀಲಂಕಾ ದ್ವಿತೀಯ ಟಿ20: ಗೆಲುವಿನ ಓಟ ಮುಂದುವರಿಸುತ್ತಾ ರೋಹಿತ್ ಪಡೆ?

Published On - 8:35 am, Sat, 26 February 22