FIFA World Cup: ಫಿಫಾ ವಿಶ್ವಕಪ್​ನಲ್ಲಿಂದು ಮೂರು ಪಂದ್ಯ: ಭಾರತದಲ್ಲಿ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?

| Updated By: Vinay Bhat

Updated on: Nov 21, 2022 | 12:46 PM

England vs Iran: ಫಿಫಾ ವಿಶ್ವಕಪ್ 2022 ರಲ್ಲಿ ಎರಡನೇ ದಿನವಾದ ಇಂದು ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಇಂಗ್ಲೆಂಡ್‌ ಮತ್ತು ಇರಾನ್‌ ಮುಖಾಮುಖಿ ಆಗಲಿದೆ.

FIFA World Cup: ಫಿಫಾ ವಿಶ್ವಕಪ್​ನಲ್ಲಿಂದು ಮೂರು ಪಂದ್ಯ: ಭಾರತದಲ್ಲಿ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?
England vs Iran
Follow us on

ಕತಾರ್‌ನಲ್ಲಿ (Qatar) ಫಿಫಾ ವಿಶ್ವಕಪ್​ಗೆ (FIFA World Cup 2022 ) ಟೂರ್ನಿಗೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ದೋಹಾ ಸಮೀಪದ ಅಲ್​ಬೇತ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭವು ವರ್ಣರಂಜಿತವಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುವ 32 ದೇಶಗಳ ಧ್ವಜಗಳನ್ನು ವಿಶೇಷ ಪ್ರದರ್ಶನ ನಡೆಸಲಾಯಿತು. ಅದರಂತೆ ಅದ್ಭುತ ತಂತ್ರಜ್ಞಾನದ ಮೂಲಕ ಪ್ರತಿ ದೇಶದ ಜರ್ಸಿಯನ್ನು ವೇದಿಕೆ ಮೇಲೆ ಪ್ರದರ್ಶನಗೊಳಿಸಿ ನೆರದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿಲಾಯಿತು. ಕತಾರಿ ಸಾಂಸ್ಕೃತಿಕ ನೃತ್ಯ ಮತ್ತು ಹಾಡುಗಳು ಹೈಲೇಟ್ ಆದವು. ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ಇಷ್ಟು ದೊಡ್ಡ ಟೂರ್ನಿ ಆಯೋಜಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಉದ್ಘಾಟನಾ ಸಮಾರಂಭದ ಬಳಿಕ ನಡೆದ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ (Qatar vs Ecuador) ನಡುವಣ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಈಕ್ವೆಡಾರ್‌ ತಂಡ ಗೆದ್ದು ಶುಭಾರಂಭ ಮಾಡಿತು.

ಎರಡನೇ ದಿನವಾದ ಇಂದು ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಇಂಗ್ಲೆಂಡ್‌ ಮತ್ತು ಇರಾನ್‌ ಮುಖಾಮುಖಿ ಆಗಲಿದೆ. ಇದು ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ ನಡೆಯಲಿದೆ. ರಾತ್ರಿ 9:30ಕ್ಕೆ ಅಲ್‌ ತುಮಾಮ ಸ್ಟೇಡಿಯಂನಲ್ಲಿ ಸೆನೆಗಲ್‌ ಹಾಗೂ ನೆದರ್ಲೆಂಡ್ಸ್‌ ಸೆಣೆಸಾಟ ನಡೆಸಲಿದೆ. ಅಂತೆಯೆ ಮಧ್ಯಾರಾತ್ರಿ 12:30ಕ್ಕೆ ಯುಎಸ್​ಎ ಮತ್ತು ವೇಲ್ಸ್ ಕಾದಾಡಲಿದೆ.

ಇಂದಿನ ಇಂಗ್ಲೆಂಡ್‌ ಮತ್ತು ಇರಾನ್‌ ನಡುವಣ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ತಂಡದಲ್ಲಿ ಹ್ಯಾರಿ ಕೇನ್ ಸ್ಟಾರ್ ಆಟಗಾರರಾಗಿದ್ದಾರೆ. ಇರಾನ್ ತಂಡದಲ್ಲಿ ಮೆಹಿದಿ ತಾರೆಮಿ ತಾರಾ ಆಟಗಾರರಾಗಿದ್ದಾರೆ. ಫಿಫಾ ರಾಂಕಿಂಗ್‍ನಲ್ಲಿ ಇಂಗ್ಲೆಂಡ್ 5ನೇ ಸ್ಥಾನ ಪಡೆದರೆ ಇರಾನ್ 20ನೇ ಶ್ರೇಯಾಂಕ ಹೊಂದಿದೆ. ಹೀಗಾಗಿ ಇಂಗ್ಲೆಂಡ್ ಮೇಲುಗೈ ಸಾಧಿಸುವ ಸಂಭವವಿದೆ.

ಇದನ್ನೂ ಓದಿ
IND vs NZ 3rd T20 Live Sreaming: ಭಾರತ- ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯ ಯಾವಾಗ?, ಎಷ್ಟು ಗಂಟೆಗೆ?, ಎಲ್ಲಿ?: ಇಲ್ಲಿದೆ ಮಾಹಿತಿ
Suryakumar Yadav: ಅಲ್ಲಿಗೂ ನಾನು ಬರುವೆ: ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಜ್ಜೆ ಇಡುವ ಸೂಚನೆ ಕೊಟ್ಟ ಸೂರ್ಯಕುಮಾರ್
Kane Williamson: ಮೂರನೇ ಟಿ20ಗೂ ಮುನ್ನ ಟೀಮ್ ಇಂಡಿಯಾಕ್ಕೆ ಸಿಕ್ತು ಗುಡ್​ ನ್ಯೂಸ್: ನ್ಯೂಜಿಲೆಂಡ್​ಗೆ ಬಿಗ್ ಶಾಕ್
Suryakumar Yadav: ನ್ಯೂಜಿಲೆಂಡ್ ಆಟಗಾರರ ಬಾಯಲ್ಲಿ ಬರೀ ಸೂರ್ಯಕುಮಾರ್ ಮಾತು: ಯಾರೆಲ್ಲ ಏನಂದ್ರು ನೋಡಿ

ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡ ಸೆನೆಗಲ್ ತಂಡವನ್ನು ಎದುರಿಸಲಿದೆ. ಸೆನೆಗಲ್ ತಂಡ ಅರ್ಹತಾ ಸುತ್ತಿನಲ್ಲಿ ಗೆದ್ದು ಮೂರನೆ ಬಾರಿಗೆ ವಿಶ್ವಕಪ್ ಪ್ರವೇಶಿಸಿದೆ. 2002ರಲ್ಲಿ ಕ್ವಾರ್ಟರ್ ಫೈನಲ್‍ವರೆಗೂ ಬಂದಿತ್ತು. ಆದರೆ, ಕಳೆದ ಬಾರಿ ಗ್ರೂಪ್ ಹಂತದವರೆಗೂ ಬರುವಲ್ಲಿ ವಿಫಲವಾಗಿತ್ತು. ಸಾಡಿಯೊ ಮಾನೆ ತಂಡದ ಸ್ಟಾರ್ ಆಟಗಾರಾಗಿದ್ದಾರೆ. ಇನ್ನು ನೆದರ್​ಲೆಂಡ್ಸ್ ತಂಡ ಅರ್ಹತಾ ಸುತ್ತಿನಲ್ಲಿ ಒಂದು ಪಂದ್ಯವನ್ನು ಮಾತ್ರ ಕೈಚೆಲ್ಲಿ ಅಗ್ರಸ್ಥಾನ ಪಡೆದಿತ್ತು. ಕಳೆದ 15 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿರುವ ನೆದರ್​ಲೆಂಡ್ಸ್ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ ಟೂರ್ನಿಯಲ್ಲಿ ಅಭಿಯಾನ ಅರಂಭಿಸುವ ಯೋಜನೆಯಲ್ಲಿದೆ.

ಕತಾರ್ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 7 ಅತ್ಯಾಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಿದೆ. 64 ಪಂದ್ಯಗಳು ಅಲ್ ಬೇತ್ ಸ್ಟೇಡಿಯಂ, ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ, ಅಲ್ ಥುಮಾಮಾ ಸ್ಟೇಡಿಯಂ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಲುಸೈಲ್ ಸ್ಟೇಡಿಯಂ, ಸ್ಟೇಡಿಯಂ 974, ಎಜುಕೇಶನ್ ಸಿಟಿ ಸ್ಟೇಡಿಯಂ ಮತ್ತು ಅಲ್ ಜನೌಬ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ Voot ಅಪ್ಲಿಕೇಶನ್ ಡಿಜಿಟಲ್‌ನಲ್ಲಿ ನೇರ ಪ್ರಸಾರವಾಗುತ್ತದೆ.

ಆತಿಥೇಯ ಕತಾರ್‌ ತಂಡಕ್ಕೆ ಸೋಲು:

ಫಿಫಾ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಆತಿಥೇಯ ಕತಾರ್ ತಂಡ ಸೋಲು ಕಂಡಿದೆ. ಈಕ್ವೆಡಾರ್‌ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಈಕ್ವೆಡಾರ್‌ 2-0 ಗೋಲುಗಳಿಂದ ಗೆದ್ದಿತು. ಈಕ್ವೆಡಾರ್‌ ತಂಡದ ಎರಡೂ ಗೋಲುಗಳನ್ನು ಗಳಿಸಿದ ಅನುಭವಿ ಸ್ಟ್ರೈಕರ್‌ ಎನೆರ್‌ ವಲೆನ್ಸಿಯಾ ಗೆಲುವಿನ ರೂವಾರಿ ಎನಿಸಿದರು. ಎರಡೂ ಗೋಲುಗಳು ಮೊದಲ ಅವಧಿಯಲ್ಲಿ ದಾಖಲಾದವು. ಕತಾರ್‌ ತಂಡದ ಸ್ಟಾರ್‌ ಆಟಗಾರ ಅಲ್ಮೋಜ್‌ ಅಲಿ ಮತ್ತು ಮೊಹಮ್ಮದ್‌ ಮುಂತರಿ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ದೊರೆತರೂ ಚೆಂಡನ್ನು ಗುರಿ ಸೇರಿಸಲು ವಿಫಲರಾದರು. ಹೀಗೆ ತಾನೇ ಮಾಡಿದ ಕೆಲ ಎಡವಟ್ಟಿನಿಂದ ಕತಾರ್ ಸೋಲುಣ್ಣಬೇಕಾಯಿತು.

Published On - 12:46 pm, Mon, 21 November 22