Suryakumar Yadav: ನ್ಯೂಜಿಲೆಂಡ್ ಆಟಗಾರರ ಬಾಯಲ್ಲಿ ಬರೀ ಸೂರ್ಯಕುಮಾರ್ ಮಾತು: ಯಾರೆಲ್ಲ ಏನಂದ್ರು ನೋಡಿ

New Zealand vs India, 2nd T20I: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಸೂರ್ಯಕುಮಾರ್ ಆಟವನ್ನು ಹಾಡಿಹೊಗಳಿದ್ದು, ಇದು ನಾನು ತಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

Suryakumar Yadav: ನ್ಯೂಜಿಲೆಂಡ್ ಆಟಗಾರರ ಬಾಯಲ್ಲಿ ಬರೀ ಸೂರ್ಯಕುಮಾರ್ ಮಾತು: ಯಾರೆಲ್ಲ ಏನಂದ್ರು ನೋಡಿ
Southee, Suryakumar and Williamson
Follow us
TV9 Web
| Updated By: Vinay Bhat

Updated on:Nov 21, 2022 | 11:09 AM

ಮೌಂಟ್ ಮೌಂಗನುವಿನ ಬೇ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ (New Zealand vs India) ಅಮೋಘ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಶತಕದಿಂದ ಟೀಮ್ ಇಂಡಿಯಾ ದೊಡ್ಡ ಮೊತ್ತ ಕಲೆಹಾಕಿದರೆ ಬೌಲರ್​ಗಳು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರು. ದೀಪಕ್ ಹೂಡ (Deepak Hooda) 4 ವಿಕೆಟ್ ಕಿತ್ತು ಮಿಂಚಿದರೆ, ಸೂರ್ಯಕುಮಾರ್ ಯಾದವ್ (Suryakumar Yadav) ಅಜೇಯ 111 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಕಿವೀಸ್​ ಬೌಲರ್​ಗಳಿಗೆ ಮನಬಂದಂತೆ ದಂಡಿಸಿದ ಸ್ಕೈ ಅವರ ಒಂದೊಂದು ಹೊಡೆತ ಕೂಡ ಅಮೋಘವಾಗಿತ್ತು. ಸೂರ್ಯನ ಆಟಕ್ಕೆ ಕೇವಲ ಭಾರತೀಯರು ಮಾತ್ರವಲ್ಲದೆ ಎದುರಾಳಿ ತಂಡದ ಆಟಗಾರರು, ಮಾಜಿ ಆಟಗಾರರು ಕೂಡ ಮನಸೋತಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಸೂರ್ಯಕುಮಾರ್ ಆಟವನ್ನು ಹಾಡಿಹೊಗಳಿದ್ದು, ಇದು ನಾನು ತಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಆರೀತಿಯ ಶಾಟ್ ನೋಡಿಯೇ ಇರಲಿಲ್ಲ: ವಿಲಿಯ್ಸನ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಕೇನ್, ”ಸೂರ್ಯಕುಮಾರ್ ಆಟದ ವೈಕರಿ ಈ ಪ್ರಪಂಚದಿಂದಲೇ ಹೊರತಾಗಿದೆ. ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಇದು ಒಂದು. ಆತನ ಕೆಲವೊಂದು ಶಾಟ್‌ಗಳನ್ನು ನಾನು ಇದುವರೆಗೂ ನೋಡಿಯೇ ಇರಲಿಲ್ಲ. ಅವರ ಒಂದೊಂದು ಹೊಡೆತಗಳು ಅದ್ಭುತವಾಗಿದ್ದವು. ಸೂರ್ಯ ವಿಶ್ವದ ಬೆಸ್ಟ್ ಕ್ರಿಕೆಟರ್‌ಗಳಲ್ಲಿ ಒಬ್ಬರು,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
Suryakumar Yadav Record: ಒಂದಲ್ಲ ಎರಡಲ್ಲ, ಸೂರ್ಯಕುಮಾರ್ ಆರ್ಭಟಕ್ಕೆ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ
Image
FIFA ವಿಶ್ವಕಪ್ ಫುಟ್‌ಬಾಲ್ ಜತೆಯಾಗಿ ವೀಕ್ಷಿಸುವುದಕ್ಕಾಗಿ ₹23 ಲಕ್ಷ ವ್ಯಯಿಸಿ ಮನೆ ಖರೀದಿಸಿದ ಕೇರಳದ ಗೆಳೆಯರ ಬಳಗ
Image
FIFA World Cup 2022 Opening Ceremony Highlights: ಫಿಫಾ ವಿಶ್ವಕಪ್​ಗೆ ಅದ್ಧೂರಿ ಚಾಲನೆ
Image
ಕಿವೀಸ್ ವಿರುದ್ಧ ಭರ್ಜರಿ ಗೆಲುವು; ಟೀಂ ಇಂಡಿಯಾದ ಮುಂದೆ ವಿಶೇಷ ಬೇಡಿಕೆ ಇಟ್ಟ ನಾಯಕ ಹಾರ್ದಿಕ್..!

ಅಮೋಘ ಪ್ರದರ್ಶನ: ಟಿಮ್ ಸೌಥಿ

ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ ಕೂಡ ಸೂರ್ಯನ ಆಟದ ಬಗ್ಗೆ ಮಾತನಾಡಿದ್ದು, ”ಸೂರ್ಯಕುಮಾರ್ ಯಾದವ್ ವಿವಿಧ ಭಂಗಿಗಳಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ 12 ತಿಂಗಳುಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಆಟಗಾರ. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅವರು ಮಿಂಚುತ್ತಿದ್ದಾರೆ. ಇಂದು ಅವರು ನೀಡಿದ ಪ್ರದರ್ಶನ ಮಾತ್ರ ಅಮೋಘವಾಗಿತ್ತು. ಭಾರತದಲ್ಲಿ ಹಲವು ಶ್ರೇಷ್ಠ ಟಿ20 ಆಟಗಾರರು ಇದ್ದಾರೆ. ಭಾರತವು ಟಿ20 ಸ್ವರೂಪದಲ್ಲಿ ಮಾತ್ರವಲ್ಲದೆ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಕ್ರಿಕೆಟಿಗರನ್ನು ತಯಾರಿಸಿದೆ”, ಎಂದು ಸೌಥಿ ಹೇಳಿದ್ದಾರೆ. ಇದೇ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದ ಬಗ್ಗೆ ಮಾತನಾಡಿದ ಇವರು, “ನಾನು ಕೊನೆಯ ಓವರ್‌ನಲ್ಲಿ ಅದೃಷ್ಟಶಾಲಿಯಾಗಿದ್ದೆ. ಡೆತ್ ಓವರ್ ಬೌಲಿಂಗ್ ಮಾಡುವು ಎಂದರೆ ನನಗೆ ಸಂತೋಷ. ಆದರೆ ಇಂದು ಅದು ವಿಭಿನ್ನವಾಗಿತ್ತು’, ಇದು ಆಟದ ಭಾಗವಾಗಿದೆ,” ಎಂದರು.

ನ್ಯೂಜಿಲೆಂಡ್​ನಲ್ಲಿ ನೋಡಿದ ಅತ್ಯುತ್ತಮ ಟಿ20 ಶತಕ:

ಇನ್ನು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಕೂಡ ಸ್ಕೈ ಆಟಕ್ಕೆ ಮನಸೋತಿದ್ದಾರೆ. “ಇದು ನಂಬಲಾಗದ ಇನ್ನಿಂಗ್ಸ್. ಸೂರ್ಯಕುಮಾರ್ ಕ್ರೀಸ್​ಗೆ ಬಂದಾಗಿನಿಂದ ಅವರು ಆಟವನ್ನು ಪ್ರಾರಂಭಿಸಿದ ರೀತಿ, ಅವನು ಸಿಕ್ಸರ್ ಹೊಡೆಯುವ ರೀತಿ ಅದ್ಭುತವಾಗಿತ್ತು. ನಾನು ನ್ಯೂಜಿಲೆಂಡ್‌ನಲ್ಲಿ ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ ಸೇರಿದಂತೆ ಅನೇಕರ ಉತ್ತಮ ಇನ್ನಿಂಗ್ಸ್‌ಗಳನ್ನು ನೋಡಿದ್ದೇನೆ, ಆದರೆ ಟಿ20 ಇತಿಹಾಸದಲ್ಲಿ ನಾನು ನ್ಯೂಜಿಲೆಂಡ್​ನಲ್ಲಿ ನೋಡಿದ ಅತ್ಯುತ್ತಮ ಟಿ20 ಶತಕ ಇದೇ ಇರಬೇಕು. ಸೂರ್ಯ ಸಿಕ್ಸರ್​​ಗಳನ್ನು ಲೀಲಾಜಾಲವಾಗಿ ಸಿಡಿಸುತ್ತಾರೆ. ಬಾಲ್ ಅನ್ನು ಶ್ರಮವಹಿಸಿ ಬಾರಿಸಲು ಪ್ರಯತ್ನಿಸುವುದಿಲ್ಲ, ಹಾಗೆ ಮಾಡಿ ಸ್ನಾಯು ನೋವು ಮಾಡಿಕೊಳ್ಳುವುದಿಲ್ಲ. ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿ ಆಟವನ್ನು ಆಡುತ್ತಾರೆ,” ಎಂದು ರಾಸ್ ಟೇಲರ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಏನಂದ್ರು?:

ನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ಬೌಲರ್‌ಗಳ ಪ್ರದರ್ಶನ ಅತ್ಯುತ್ತಮವಾಗಿತ್ತು. ಈರೀತಿಯ ಕ್ರಿಕೆಟ್​ನಲ್ಲಿ ಆಕ್ರಮಣಕಾರಿ ಆಟವಾಡುವ ಮನಮೋಭಾವ ಹೊಂದುವುದು ಮುಖ್ಯ. ಇಲ್ಲಿನ ವಾತಾವರಣ ತೇವಾಂಶದಿಂದ ಕೂಡಿತ್ತು. ಆದರೂ ಉತ್ತಮ ದಾಳಿ ಸಂಘಟಿಸಿದ ಬೌಲರ್‌ಗಳಿಗೆ ಎಲ್ಲ ಶ್ರೇಯಸ್ಸು ಸಲ್ಲಬೇಕಾಗುತ್ತದೆ. ನಾನು ಹೆಚ್ಚು ಬೌಲಿಂಗ್‌ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಟರ್‌ಗಳು ಕೂಡ ಹೆಚ್ಚು ಹೆಚ್ಚು ಬೌಲಿಂಗ್ ಮಾಡುವಂತೆ ಆಗಬೇಕು. ಬ್ಯಾಟರ್‌ಗಳು ಯಾವುದೇ ಸಂದರ್ಭ ಈ ಜವಾಬ್ದಾರಿ ಹೊರಲು ಸಿದ್ದರಿರಬೇಕು,” ಎಂಬುದು ಪಾಂಡ್ಯ ಮಾತು.

Published On - 9:42 am, Mon, 21 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ